ಮುದಗಲ್ ಪತ್ರಕರ್ತರ ಮೇಲೆ ಹಲ್ಲೆ ಕ್ರಮಕ್ಕೆ ಅಗ್ರಹ

ಸಿರವಾರ:ಮಾ,೧೦- ಲಿಂಗಸೂಗೂರು ತಾಲೂ ಕಿನ ಮುದಗಲ್ ಹೋಬಳಿ ಉಪ್ಪಾರ ನಂದಿ ಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಾಪುರಟ್ಟಿಯಲ್ಲಿ ಗ್ರಾಮದಲ್ಲಿ ಮಾ,೬ ರಂದು ವಸತಿ ಮನೆಗಳ ಪಲಾನುಭವಿಗಳ ಆಯ್ಕೆಗೆ ನಡೆದ ಗ್ರಾಮ ಸಭೆಯ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಆಕೆಯ ಪತಿ ಇತರರು ಸೇರಿ ಹಲ್ಲೆ ಮಾಡಿರುವ ಘಟನೆ ಖಂಡಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಿರವಾರ ತಾಲೂಕು ಘಟಕದಿಂದ ಇಂದು ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ವಿಜಯವಾಣಿ ವರದಿಗಾರ ಶರಣಯ್ಯ ಒಡೆ ಯರ್ ಮತ್ತು ದಿ ಡೈಲಿ ನ್ಯೂಸ್ ಪತ್ರಿಕೆ ವರದಿಗಾರ ಶಿವಶಂಕರ ಒಡೆಯರ್ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಲಾ ಪತಿ ಪರಮೇಶ, ಸಂಗಪ್ಪ,ಅಮರೇಶ ಹನುಮಮ್ಮ ಅಮರೇಶ,ಇತರರು ಹಲ್ಲೆ ಮಾಡಿರುವುದು ಖಂಡನೀಯವಾಗಿದೆ.
ಸಾರ್ವಜನಿಕವಾಗಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಐದು ವರ್ಷ ಕಾರ್ಯಗೃಹ ಶಿಕ್ಷೆ,ಹಾಗೂ ೫೦ ಸಾವಿರ ರೂ ದಂಡ ವಿಧಿಸಬೇಕೆಂದು ಇತ್ತೀಚಿಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿರುವ ಮುಖೆನ ಮಾಧ್ಯಮ ರಂಗದ ರಕ್ಷಣೆಗೆ ಧಾವಿಸಿದೆ. ಆದರೆ ಘಟನೆ ಜರುಗಿ ಮೂರು ದಿನಗಳ ಕಳೆದರೂ ಇದುವರೆಗೂ ಘಟನಾ ಸ್ಥಳಕ್ಕೆ ಯಾವುದೇ ಪೊಲೀಸ್ ಅಧಿಕಾರಿ ಭೇಟಿ ನೀಡದೇ ಇರುವುದು ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಲಿಂಗ ಸೂಗೂರು ಶಾಸಕ ಡಿ.ಎಸ್ ಹೂಲಗೇರಿ ಅವರ ಬೆಂಬಲಿಗರು ಎಂದು ಗೊತ್ತಾಗಿದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಹಲ್ಲೆಗೀಡಾದ ಪತ್ರಕರ್ತರ ಮೇಲೆ ಪ್ರತಿ ದೂರು ದಾಖಲಿಸಿ ರುವುದು ಅನ್ಯಾಯದ ಪರಮಾವಧಿಯಾ ಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಾಧ್ಯಮ ಸಮಿತಿಯ ಅಧ್ಯಕ್ಷರು ಆಗಿರುವ ತಾವುಗಳು ಕೂಡಲೇ ಪತ್ರಕರ್ತರ ಸಭೆ ಕರೆದು ರಕ್ಷಣೆಗೆ ಮುಂದಾಗಬೇಕು. ಹಲ್ಲೆಗೈದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿ ಸಬೇ ಕು. ಪತ್ರಕರ್ತರ ಮೇಲೆ ದಾಖಲಾಗಿರುವ ಪ್ರತಿ ದೂರನ್ನು ಹಿಂಪಡೆಯಬೇಕೆಂದು ಆಗ್ರಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ಅಧ್ಯಕ್ಷ ಎಂ. ಗುಂಡಪ್ಪ,ಪ್ರ.ಕಾರ್ಯದರ್ಶಿ ವಿರೇಶ ಹರಕಂಚಿ, ಉಪಾಧ್ಯಕ್ಷ ರಂಗನಾಥ ನಾಯಕ, ನಾಗರಾಜ ಕರಿಬಿಲ್ಕರ್,ಖಜಾಂಚಿ ಮಹ್ಮ ದ್ ಸಾಬ್,ಮಾಜಿ ಅಧ್ಯಕ್ಷ ಸುರೇಶ ಹೀರಾ, ಪತ್ರಕರ್ತರಾದ ಸೂಗೂರಯ್ಯ ಸ್ವಾಮಿ, ಹನುಮೇಶ ಛಲವಾದಿ, ಪಿ.ಕೃಷ್ಣ, ಮಲ್ಲಪ್ಪ, ದುರುಗಪ್ಪ ಮರಾಠ, ಮಾಂತೇಶ ಸ್ವಾಮಿ,ಎಸ್ ವಿಜಯಕುಮಾರ ಸಿರವಾರ,ಈರೇಶ ನಾಯಕ ಗಣದಿನ್ನಿ,ವಿಜಯ ಮಾಚನೂರು ಸೇರಿದಂತೆ ಪತ್ರಕರ್ತರು ಇದ್ದರು.