ಮುದಗಲ್ ಎಸ್‌ವಿಎಮ್ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸಮಾರಂಭದ

ಮುದಗಲ್ಲ,ಮಾ.೧೨- ನಾರಾಯಣರಾವ್ ದೇಶಪಾಂಡೆ ವಿದ್ಯೆಯ ಆದಿದೇವತೆ ಆದ ಸರಸ್ವತಿ ದೇವಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ನಂತರ ಮಾತನಾಡಿದರು.
ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಮೇಲೆ ಸದಾ ಅಭಿಮಾನ ಹೊಂದಿರ ಬೇಕೆಂದೂ,ತಮ್ಮೆಲ್ಲರ ಭವಿಷ್ಯ ಉಜ್ವಲ ಆಗಲೆಂದೂ ಶುಭ ಹಾರೈಸಿದರು ಎಸ್‌ವಿಎಮ್ ಪ್ರೌಢಶಾಲೆಯ ಕಾರ್ಯದರ್ಶಿಗಳಾದ ಆನಂದ ಸರಗಣಚಾರಿ ಅವರು ಮಾತನಾಡಿ, ಹದಿಹರಯದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಆಕರ್ಷಿತರಾದರೆ ಮಾತ್ರ ಉಜ್ವಲ ಭವಿಷ್ಯ ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು. ತದನಂತರ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳ ಸಮಾರಂಭದ ಅಧ್ಯಕ್ಷರು ಶ್ರೀಕಾಂತ್ ಗೌಡ ಪಾಟೀಲ್ ವಹಿಸಿದ್ದರು. ಆಡಳಿತಧಿಕಾರಿ ಗಳಾದ ಆನಂದ್ ಉದ್ಘಾಟನೆ ಮಾಡಿದರು ಡಾಕ್ಟರ್ ಸಂಜೀವ ಬಮ್ಮಸಾಗರ್, ಮುಖ್ಯ ಅತಿಥಿಗಳಾಗಿ ವಹಿಸಿದ್ದರು. ಮಲ್ಲಿಕಾರ್ಜುನ ಗೌಡರ್, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ಗೌಡ ಪಾಟೀಲ್, ನಾರಾಯಣ ರಾವ್ ದೇಶಪಾಂಡೆ, ಶ್ರೀ ಮಲ್ಲಿ ಕಾರ್ಜುನ ಗೌಡರ್, ಡಾಕ್ಟರ್ ಸಂಜೀವ,ಬಮ್ಮಸಾಗರ್, ಸಂಗಮೇಶ ಸರಗಣಚಾರಿ, ಮಹಾಂತೇಶ, ಉದಯ ಕುಮಾರ್ ಕಮ್ಮಾರ, ಮಹಾಂತೇಶ್ ಶಿಕ್ಷಕರು, ಕಿರಣ್ ಕುಮಾರ್ ಅಭಿಯಂತರರು, ವಿಶ್ವನಾತ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.