ಮುದಗಲ್:ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ

ರಾಯಚೂರು, ಮೇ.೨-ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳೆದ ೩ ತಿಂಗಳಿನಿಂದ ಬಸ್ ಸಾರಿಗೆ ಮುಷ್ಕರ ಜೊತೆಗೆ ಕೊರೋನಾ ಮಹಾಮಾರಿ ರೋಗವು ಮತ್ತೆ ದೇಶ ರಾಜ್ಯದಲ್ಲಿ ಹರಡಿರುವುದರಿಂದ ಸರಕಾರ ಆದೇಶದ ಮೇರೆಗೆ ಬಸ್ಸುಗಳ ಓಡಾಟ ಸ್ಥಗಿತ ಗೊಂಡು ಬಸ್ ನಿಲ್ದಾಣ ಜನರಿಲ್ಲದೇ ಪರದೇಶಿಯಾಗಿರುವದು ಕಂಡು ಬಂತು.ದೇಶ ಹಾಗೂ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ರೋಗದಿಂದ ಸರಕಾರ ವೈರಸ್ ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ಕೈ ಗೊಂಡಿದೆ. ಆದರೆ ಶುಕ್ರವಾರ ರಾತ್ರಿ ೯ ಗಂಟೆಯಿಂದ ಸೋಮವಾರ ಬೆಳಿಗ್ಗೆ ೬ಗಂಟೆಯವರೆಗೆ ವಿಕೆಂಡ್ ಕರ್ಪ್ಯೂ ನಿಮಿತ್ಯ ಮಾರುಕಟ್ಟೆಯಲ್ಲಿ ತರಕಾರಿಗಳೂ ಸಹಿತ ಸಿಗುವುದಿಲ್ಲ ಎಂದರೆ ಜನರು ಎಲ್ಲಿಗೆ ಹೋಗಬೇಕು? ಒಪ್ಪತ್ತಿನ ಊಟಕ್ಕೂ ಸಹಿತ ಪರದಾಡುವ ಪರೀಸ್ಥಿತಿ ಬಂದೊದಗಿದೆ ಎಂದರೆ ಇದಕ್ಕೆ ಯಾರು ಎಂಬುದು ಸಾರ್ವಜನಿಕರಲ್ಲಿ ಪ್ರಶ್ನೆಯಾಗಿದೆ. ಚುನಾವಣೆಗೆ ಮತ್ತು ರಾಜಕೀಯ ಸಮಾರಂಭಗಳಿಗೆ ಕೊರೋನಾ ಇಲ್ಲ ಬಡವರ ಜನಜೀವನಕ್ಕೆ ಮಾತ್ರ ಕೊರೋನಾವನ್ನು ಮಾಧ್ಯಗಳಲ್ಲಿ ಬಿಂಬಿಸಿದರೆ ಜನರು ಎಲ್ಲಿಗೆ ಹೋಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ದಿನಗಳಿಂದ ಸಾರಿಗೆ ಇಲಾಖೆಯ ನೌಕರರಿಂದ ವಿವಿಧ ಬೇಡಿಕೆಗೆ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಅದರ ಬೆನ್ನಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಬಸ್ಸುಗಳ ಓಡಾಟ ಸ್ಥಗಿತ ಗೊಳಿಸಿದೆ. ಇದರಿಂದ ಮುದಗಲ್ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ನೋಡುಗರಿಗೆ ಬಸ್ ನಿಲ್ದಾಣ ಅನಾಥವಾಗಿ ಕಾಣುತ್ತಿದೆ. ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸುತ್ತ ಹಳ್ಳಿಗಳಿಗೆ ಮುದಗಲ್ ಪಟ್ಟಣ ವ್ಯಾಪಾರ ವಹಿವಾಟುಗಳಿಗೆ ಕೇಂದ್ರ ಸ್ಥಾನವಾಗಿದೆ ಇದರಿಂದ ಸಾರ್ವಜನಿಕರು ಕಷ್ಟ ಅನುಭವಿಸುತ್ತಿದ್ದಾರೆ.
ಒಟ್ಟಿನಲ್ಲಿ ಸಾರಿಗೆ ಇಲಾಖೆ ಹಾಗೂ ಕೊರೋನಾ ಕಾಟದಿಂದ ನಾಡಿನ ಜನರಿಗೆ ಆಪತ್ತು ಮಾತ್ರ ತಪ್ಪಿದ್ದಲ್ಲ.