ಮುತ್ಯಾನ ಬಬಲಾದ ಗುರುಪಾದಲಿಂಗ ಮಹಾ ಶಿವಯೋಗಿಗಳಿಗೆ ಸಮಾಜ ಸಂಜೀವಿನಿ ಪ್ರಶಸ್ತಿ ಪ್ರಧಾನ

ಕಲಬುರಗಿ: ಫೆ.25:ನಗರದ ಮಕ್ತಂಪುರ ಗದ್ದುಗೆಮಠದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಗುಡ್ಡಾಪೂರದ ದಾನಮ್ಮ ದೇವಿಯ ಜೀವನ ದರ್ಶನ ಪ್ರವಚನದಲ್ಲಿ ಶ್ರೀ.ಮ.ನಿ.ಪ್ರ ಚರಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಮುತ್ಯಾನ ಬಬಲಾದ ಶ್ರೀ. ಮ.ನಿ.ಪ್ರ ಗುರುಪಾದಲಿಂಗ ಮಹಾ ಶಿವಯೋಗಿಗಳಿಗೆ ಶ್ರೀ ಕುಮಾರ ಶಿವಯೋಗಿಗಳ ಹೆಸರಲ್ಲಿ ಕೊಡಮಾಡುವ ಸಮಾಜ ಸಂಜೀವಿನಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ಶ್ರೀ ಮರುಳಸಿದ್ದ ಮಹಾಸ್ವಾಮೀಜಿ, ಶ್ರೀ ಶಿವಾನಂದ ಮಹಾಸ್ವಾಮೀಜಿ, ಶ್ರೀ ಮರುಳಸಿದ್ದ ಮಹಾಸ್ವಾಮೀಜಿ, ಶ್ರೀ ಲಿಂಗರಾಜಪ್ಪ ಅಪ್ಪ, ಬಸವರಾಜ ಭೀಮಳ್ಳಿ, ಬಾಬುರಾವ ಯಡ್ರಾಮಿ, ರಾಜು ಎಂ. ದೇಶಮುಖ, ನೀಲಕಂಠರಾವ ಮೂಲಗೆ, ಜಗನ್ನಾಥ ಗೋಧಿ, ಶರಣು ಪಪ್ಪಾ, ಸುರೇಶ ಪಾಟೀಲ ಜೋಗೂರ, ಮಾನಪ್ಪ ಬಡಿಗೇರ ಸೇರಿದಂತೆ ಅಕ್ಕನಬಳಗದ ತಾಯಂದಿರು, ಹಿರಿಯರು, ಮಹಿಳೆಯರು, ಯುವಕರು ಹಾಗೂ ಭಕ್ತಾಧಿಗಳು ಇದ್ದರು.