ಮುತ್ತೈದೆಯರಿಂದ ಅರಶಿಣ, ಕುಂಕುಮ ಕಾರ್ಯಕ್ರಮ

ಬೀದರ, ಜ. 18ಃ ಬೀದರ ನಗರದ ಮೈಲೂರು-ಚಿದ್ರಿ ರಿಂಗ್ ರೋಡ ರಸ್ತೆಯಲ್ಲಿರುವ ಸಿದ್ಧರಾಮಯ್ಯ ಲೇಔಟ್‍ನ (ಬುಡಾ) ಶಕ್ತಿನಗರದ ಶ್ರೀ ಹಿಂಗೋಲಾಂಬಿಕಾದೇವಿ ಮಾತಾ ಮಂದಿರದಲ್ಲಿ ಸಿದ್ಧರಾಮಯ್ಯ ಬಡಾವಣೆಯ ಮಹಿಳೆಯರು ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾವಸಾರ ಕ್ಷತ್ರೀಯ ಸಮಾಜದ ಏಕ್ತಾ ಮಹಿಳಾ ಮಂಡಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಸ್ಪರ ಎಳ್ಳು-ಬೆಳ್ಳು ಹಂಚಿ, ಹಬ್ಬದ ಶುಭಾಷಯಗಳು ವಿನಿಮಯ ಮಾಡಿಕೊಂಡರು.
ಭಾವಸಾರ ಕ್ಷತ್ರೀಯ ಸಮಾಜದ ಏಕ್ತಾ ಮಹಿಳಾ ಮಂಡಳ ವತಿಯಿಂದ ಬೀದರ ನಗರದ ಸಿದ್ಧರಾಮಯ್ಯ ಲೇಔಟ್‍ನ ಶ್ರೀ ಹಿಂಗೋಲಾಂಬಿಕಾದೇವಿ ಮಾತಾ ಮಂದಿರದಲ್ಲಿ ಸಿದ್ಧರಾಮಯ್ಯ ಬಡಾವಣೆಯ ಮಹಿಳೆಯರು, ಮಕ್ಕಳು ಮಾತಾ ದರ್ಶನ ಪಡೆದರು. ನಂತರ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಪರಸ್ಪರ ಎಳ್ಳು-ಬೆಳ್ಳು ಹಂಚಿ, ಹಬ್ಬದ ಶುಭಾಷಯಗಳು ವಿನಿಮಯ ಮಾಡಿಕೊಂಡರು.
ಭಾವಸಾರ ಕ್ಷತ್ರೀಯ ಸಮಾಜದ ಏಕ್ತಾ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಪ್ರೇಮಲಾ ಚೋಲಕರ್ ಅವರು ಮಾತನಾಡುತ್ತ, ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮುತ್ತೈದೆಯರಿಗೆ ಅರಶಿಣ-ಕುಕುಮ್ ಹಚ್ಚುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ಏಕ್ತಾ ಮಹಿಳಾ ಮಂಡಳದ ಪದಾಧಿಕಾರಿಗಳಾದ ಶ್ರೀಮತಿ ವಿಜಯಾ ತಾಂದಳೆ, ಶ್ರೀಮತಿ ರಂಜನಾ ಬರಡೆ, ಶ್ರೀಮತಿ ಶೋಭಾ ಸೂರ್ಯನ್, ಶ್ರೀಮತಿ ವಿಮಲಾ ಖರಾಡೆ, ಶ್ರೀಮತಿ ಶಶಿಕಲಾ ತಾಂದಳೆ, ಶ್ರೀಮತಿ ಸ್ಮೀತಾ ಸೂರ್ಯನ್, ಶ್ರೀಮತಿ ಸುಧಾ ಢಗೆ, ಶ್ರೀಮತಿ ಹೀರಾ ಘನಾತೆ ಮತ್ತು ಶ್ರೀಮತಿ ಸುನೀತಾ ದೇವತರಾಜ್ ಅವರು ಸೇರಿದಂತೆ ಸಿದ್ಧರಾಮಯ್ಯ ಬಡಾವಣೆಯ ಮಹಿಳೆಯರು ಪಾಲ್ಗೊಂಡಿದ್ದರು.