ಮುತ್ತು ರತ್ನಗಳನ್ನು ದಾನ ಮಾಡಿ ದಾನಮ್ಮ ಎಂದು ಕರೆಸಿಕೊಂಡಳು

ಶಹಾಬಾದ:ಎ.26:ಹರಳುಗಳನ್ನೆ ಮುತ್ತು, ರತ್ನಗಳನ್ನಾಗಿ ಮಾಡಿ, ಬಡವರಿಗೆ, ಜಂಗಮರಿಗೆ ದಾನ ಮಾಡಿದ ಲಿಂಗಮ್ಮಾ, ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ದರಾಮೇಶ್ವರ, ಬಸವಣ್ಣನವರಿಂದ ದಾನಮ್ಮಾ ಎಂದು ಕರೆಸಿಕೊಂಡು, ದಾನಮ್ಮಾದೇವಿಯಾದಗಳು ಎಂದು ಗರೂರನ ಶಿವಲಿಂಗಯ್ಯ ಶಾಸ್ತ್ರಿಗಳು ಹೇಳಿದರು. ಅವರು ತೊನಸನಳ್ಳಿ (ಎಸ್) ಗ್ರಾಮದ ಶ್ರೀಗುರು ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವ ಹಾಗೂ 16ನೇ ರಥೊತ್ಸವ ನಿಮಿತ್ತ ಆಯೋಜಿಸಿದ್ದ ಗುಡ್ಡಾಪುರ ದಾನಮ್ಮ ದೇವಿ ಪ್ರವಚನ ನೀಡುತ್ತ ಹೇಳಿದರು. ಶಹಾಬಾದ್‍ನ ಸುರೇಶ ಗಂಧಗೆ, ಸಹಾಯಕ ನಿರ್ಧೇಶಕ ಶಂಕರಗೌಡ ಬಮಶೆಟ್ಟಿ ಮಾತನಾಡಿದರು. ಕೊಟ್ಟುರೇಶ್ವರ ಶರಣು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮುತೈದೆಯರಿಗೆ ದಾನಮ್ಮ ದೇವಿಯ ತೊಟ್ಟಿಲೋತ್ಸವ, ನಾಮಕರಣ ನಡೆಯಿತು. ರೇವಣಸಿದ್ದಪ್ಪ ರಾಮಶೆಟ್ಟಿ ಕುಟುಂಬದವರಿಂದ ಪೂಜ್ಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರಿಗೆ ನಾಣ್ಯಗಳ ತುಲಾಭಾರ ಸೇವೆ ನಡೆಯಿತು. ಕಲ್ಲಯ್ಯ ಸ್ವಾಮ ಪಡದಳ್ಳಿ ಹಾರ್ಮೋನಿಯಂ, ವೀರಯ್ಯ ಸ್ವಾಮಿ ಮಾಡ್ಯಾಳ ತಬಲಾ ಸಾಥ ನೀಡಿದರು. ಮಹಾಪ್ರಸಾದ ವಿತರಣೆ ನಡೆಯಿತು.