ಮುತ್ತಂಗಿ ಗುರುಪಾದೇಶ್ವರ ಮುತ್ಯನ ಜಾತ್ರೆ ರದ್ದು

ಕಲಬುರಗಿ:ನ.20: ಕಲಿಯುಗದ ಕಲ್ಪವೃಕ್ಷ, ವಾಗ್ಸಿದ್ದಿ ಪುರುಷ ಮಹಿಮಾ ಯೋಗಿ ಮುತ್ತಂಗಿ ಗುರುಪಾದೇಶ್ವರ ಮುತ್ಯನ ಜಾತ್ರೆ ರದ್ದುಪಡಿಸಲಾಗಿದೆ.

ನವೆಂಬರ್ 25 ರಂದು ನಡೆಯುವ, ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಮುತ್ತಂಗಿ ಗ್ರಾಮದ ಆರಾಧ್ಯ ದೈವ ಗುರುಪಾದಪ್ಪ ಮುತ್ಯನ ಪುಣ್ಯಸ್ಮರಣೋತ್ಸವ ದಿನದಂದು ಅದ್ದರಿಯಾಗಿ ನಡೆಯಬೇಕಾದ ಜಾತ್ರೆ ಸರಕಾರದ ಆದೇಶದಂತೆ, ಕರೋನ ‌ಮಹಾಮಾರಿ ಹಿನ್ನೆಲೆಯಲ್ಲಿ ಈ‌ ಬಾರಿ ರದ್ದುಪಡಿಸಲಾಗಿದೆ, ಆಂದ್ರ ತೆಲಾಂಗಣ, ಮಹಾರಾಷ್ಟ್ರ ರಾಜ್ಯ ಆಗಮಿಸುವ ಭಕ್ತರು ಮನೆಯಲ್ಲಿ ಕುಳಿತು ಗುರುಪಾದೇಶ್ವರ ಮುತ್ಯನ ಸ್ಮರಣೆಯನ್ನು ಮಾಡುವುದರ ಮೂಲಕ ಸಹಕರಿಸಬೇಕೇಂದು ದೇವಸ್ಥಾನದ ಅಧ್ಯಕ್ಷರು, ಆಡಳಿ ಮಂಡಳಿ ಸದಸ್ಯರು ತಿಳಿಸಿದ್ದಾರೆ.