ಮುತೈದೆ ಹೆಣ್ಣು ಮಕ್ಕಳಿಂದ ಎಳೆಯಲ್ಪಡುವ ರಥೋತ್ಸವಗೊಟಖಂಡ್ಕಿ ಶ್ರೀ ಮಹಾದೇವಿತಾಯಿಯ 159ನೇ ಜಾತ್ರೋತ್ಸವ

ತಾಳಿಕೋಟೆ:ನ.4: ತಾಲೂಕಿನ ಗೊಟಖಂಡ್ಕಿ ಗ್ರಾಮದಲ್ಲಿ ಶ್ರೀಮನ್ ಮಹಾದೇವಿತಾಯಿಯ 159ನೇ ಪುರಾಣ ಮಹಾಮಂಗಲ ಮತ್ತು 501 ಮುತೈದೆ ಹೆಣ್ಣುಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಹೆಣ್ಣುಮಕ್ಕಳಿಂದ ಮಹಾರಥೋತ್ಸವವು ಇದೇ ದಿ. 5 ಮತ್ತು 6 ರಂದು ಜರುಗಲಿದೆ.

ದಿ. 5ಶನಿವಾರರಂದು ಬೆಳಿಗ್ಗೆ 8 ಗಂಟೆಗೆ ಗಂಗಸ್ಥಳ ಹಾಗೂ ಶ್ರೀಮನ್ ಮಹಾದೇವಿ ಪಾದಗಟ್ಟಿಗೆ ನಂದಿಮೂರ್ತಿ ಪ್ರತಿಷ್ಠಾಪನೆ, ಜರುಗಲಿದೆ. ಮದ್ಯಾಹ್ನ 12 ಗಂಟೆಯಿಂದ ಭಂಟನೂರಿನ ಪೂಜಾರಿ ಬಂದುಗಳು ಸದ್ಭಕ್ತರಿಂದ ತುಪ್ಪದ ಬಿಂದಿಗೆ ಆಗಮನದೊಂದಿಗೆ ಮಹಾ ಪ್ರಸಾದ ವಿತರಣೆ ನಡೆಯಲಿದೆ.

ಅಂದು ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿಜಯಪೂರದ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ವಿಜಯಪೂರ ಹಾಗೂ ಹೃದಾಲಯ ಮತ್ತು ಆರೋಗ್ಯ ಧಾಮ ವಿಜಯಪೂರದ ಡಾ.ಶಂಕರಗೌಡ ಪಾಟೀಲ, ಚರ್ಮ ಮತ್ತು ಲೈಂಗಿಕ ರೋಗ ತಜ್ಞರಾದ ಡಾ.ಶ್ರೀಮತಿ ಶ್ರೀದೇವಿ ಪಾಟೀಲ ಇವರುಗಳ ನೇತೃತ್ವದಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.

ದಿ.6 ರವಿವಾರರಂದು ಬೆಳಿಗ್ಗೆ 11 ಗಂಟೆಯಿಂದ 501 ಮುತೈದೆ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ನಂತರ ಧರ್ಮ ಸಭೆ ನಡೆಯಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಹರಿಹರ ಏರೆಹೊಸಳ್ಳಿಯ ರಡ್ಡಿ ಗುರುಪೀಠದ ಶ್ರೀ ವೇಮಾನಂದ ಮಹಾಸ್ವಾಮಿಗಳು ವಹಿಸುವರು. ಸಾನಿದ್ಯವನ್ನು ಜಾಲಹಳ್ಳಿಯ ಬೃಹನ್ ಮಠದ ಡಾ.ಶ್ರೀ ವಿದ್ಯಾಮಾನ್ಯ ಶಿವಭಿನವ ಶಿವಾಚಾರ್ಯ ರತ್ನಶ್ರೀ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಚಳಕಾಪೂರ ಸಿದ್ದಾರೂಡ ಮಠದ ಶ್ರೀ ಶಂಕರಾನಂದ ಮಹಾ ಸ್ವಾಮಿಗಳು, ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ನಾವದಗಿ ಬೃಹನ್ ಮಠದ ಶ್ರೀ ರಾಜೇಂದ್ರ ಒಡೆಯರು, ಶರಣಸೋಮನಾಳದ ಡಾ.ಶ್ರೀ ಶಿವಪುತ್ರ ಸ್ವಾಮಿಗಳು, ಸರೂರ-ಅಗತೀರ್ಥದ ಹಾಲುಮತ ಗುರುಪೀಠದ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಸ್ವಾಮಿಗಳು ವಹಿಸುವರು.

ಈ ಸಮಯದಲ್ಲಿ ಕೊಡಗಾನೂರ ವೇ.ವಿರುಪಾಕ್ಷಯ್ಯ ಸ್ವಾಮಿಗಳು, ಬೂದಿಹಾಳ ಶ್ರದ್ದಾಶ್ರಮಯದ ಶ್ರೀ ಗಾಂಗೇಪೀತ ಸ್ವಾಮಿಗಳು, ಸಾಸನೂರ ಲಿಂಗಣ್ಣ ಶರಣರು, ಅಗ್ನಿ ಹಣಮಂತ್ರಾಯಗೌಡ ಶರಣರು, ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ವಿಜಯಪೂರ ಅನುಗ್ರಹ ಆಸ್ಪತ್ರೆಯ ಡಾ.ಪ್ರಭುಗೌಡ ಲಿಂಗದಳ್ಳಿ, ಕುದರಿ ಸಾಲವಾಡಗಿಯ ರಾಜುಗೌಡ ಪಾಟೀಲ, ಅವರು ಆಗಮಿಸುವರು.

ಅಂದೇ ಸಾಯಂಕಾಲ 4 ಗಂಟೆಗೆ ಗೊಟಖಂಡ್ಕಿ ಗ್ರಾಮದ ಮುತೈದೆ ಹೆಣ್ಣುಮಕ್ಕಳಿಂದ ಶ್ರೀಮನ್ ಮಹಾದೇವಿತಾಯಿಯ ಭವ್ಯ ರಥೋತ್ಸವವು ಜರುಗಲಿದೆ ಕಾರಣ ಭಕ್ತಾಧಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟನೆ ತಿಳಿಸಿದೆ.