ಮುಡಿ ಹರಕೆ ತೀರಿಸಿದ ಅಭಿಮಾನಿ

ಕಲಬುರಗಿ:ಮೇ.24: 2023ನೇ ವಿಧಾನ ಸಭಾ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮಡು ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾದರೆ ತಲೆ ಕೂದಲು ಮುಡಿ ಕೊಡುತ್ತೇನೆ ಎಂದು ಹರಕೆ ಕಟ್ಟಿ ಕೊಂಡಿದ್ದ ಅವರಾದ (ಬಿ)ಗ್ರಾಮದ ನಿವಾಸಿ ಮಂಜುನಾಥ ಹಡಪದ ಅವರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸನ್ನಿಧಿಗೆ ತಲೆ ಬೋಳಿಸಿ ಮುಡಿ ಹರಕೆಯನ್ನು ತೀರಿಸಿದ್ದಾರೆ.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಶಾಸಕರು ಎರಡನೇ ಬಾರಿ ವಿಧಾನಸಭೆಗೆ ಆಯ್ಕೆಗಾಗಿ ಮತ್ತೊಮ್ಮೆ ಗೆದ್ದು ಬರಲಿ ಎಂದು ಶ್ರೀ ಧರ್ಮಸ್ಥಳದ ಮಂಜುನಾಥನಿಗೆ ಮುಡಿ ಬಿಟ್ಟಿದ್ದರು, ಮತ್ತು ಹನ್ನೊಂದು ತಿಂಗಳಿಂದ ತಮ್ಮ ಕಾಲಿಗೆ ಪಾದರಕ್ಷೆ ಹಾಕದೆ ಮಂಜುನಾಥ ಹಡಪದ ಅವರು ಈ ರೀತಿಯಾಗಿ ಶಾಸಕರ ಮೇಲೆಯೇ ಇದ್ದ ನಂಬಿಕೆ ಹಾಗೂ ಶಾಸಕರ ಅನೇಕ ಜನಪರ ಕೆಲಸ ಮಾಡಿದ್ದು, ಅವರ ಅಭಿವೃದ್ದಿಯ ಕೆಲಸದ ಹರಿಕಾರನಿಗೆ ಮತ್ತೊಂದು ಬಾರಿ ಈ ಭಾಗದಿಂದ ಶಾಸಕರಾಗಿ ಗೆದ್ದು ಬಂದ ನಂತರ ಇಂದು ತಮ್ಮ ಹರಕೆಯನ್ನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳಿ ಹರಕೆಯ ಮುಡಿಯನ್ನು ತೀರಿಸಿದ್ದಾರೆ.