ಮುಡಾ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ: ಎಸ್.ಟಿ.ಎಸ್

ಮೈಸೂರು: ಜ.09: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಹಗರಣಗಳಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಅವರು ಇಂದು ಮೈಸೂರಿನಲ್ಲಿ ಕೃಷ್ಣಧಾಮಕ್ಕೆ ಭೇಟಿ ನೀಡಿ, ಪೇಜಾವರ ಮಠದ ಜಗದ್ಗುರು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಎಸ್.ಟಿ ಸೋಮಶೇಖರ್, ಮುಡಾ ಹಗರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳೊದು 100% ಸತ್ಯ. ಜಾಗೃತಿದಳ, ಡಿವೈಎಸ್ಪಿ ಹಂತದಲ್ಲಿ ಮುಡಾಗೆ ಹಾಕಬೇಕು ಅಂತ ಕೇಳಿದ್ದೇವೆ. ಮುಡಾ ಅಧ್ಯಕ್ಷರ ಜೊತೆ ಗೃಹ ಸಚಿವರಿಗೆ ಜಂಟಿಯಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮನವಿ ಮಾಡಿದ್ದೇವೆ ಎಂದರು.
ಈ ಬಗ್ಗೆ ನಿನ್ನೆ ರಾತ್ರಿ ಪೆÇಲೀಸ್ ಕಮಿಷನರ್ ಭೇಟಿ ಮಾಡಿ ಮಾತನಾಡಿ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರು ಯಾರಿದ್ದಾರೆ, ಎಷ್ಟೇ ದೊಡ್ಡವರು ಆಗಿರಲಿ, ಯಾವುದೇ ಬ್ಯಾಗ್ರೌಂಡ್ ಇದ್ದರೂ ಅಂತವರನ್ನು ಅರೆಸ್ಟ್ ಮಾಡಿ. ಹಗರಣಕ್ಕೆ ಸಂಭಂದಪಟ್ಟಂತೆ ಯಾರೇ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಪೆÇೀರ್ಟ್ ಮಾಡಿದರೂ ಅಂತವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಬಿಜೆಪಿ ಯಶಸ್ಸಿಗೆ ಎಲ್ಲರೂ ಕಾರಣ
ಮೈಸೂರು ಜಿಲ್ಲೆ ಗ್ರಾ.ಪಂ ಚುನಾವಣೆಯಲ್ಲಿ ಈ ಬಾರಿಯ ಬಿಜೆಪಿ ಯಶಸ್ಸಿಗೆ ಎಲ್ಲರೂ ಕಾರಣ. ಈ ಭಾಗದ ಎಲ್ಲಾ ಮುಖಂಡರ ಶ್ರಮದಿಂದ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಅಭ್ಯರ್ಥಿಗಳು ಗೆದ್ದಿದ್ದಾರೆ. 1322 ನಮ್ಮ ಕಾರ್ಯಕರ್ತರು ಗೆದ್ದಿರೋದಾಗಿ ಮಾಹಿತಿ ನೀಡಿದ್ದಾರೆ. ಇವತ್ತು ಸಭೆ ಮಾಡುತ್ತಿದ್ದೇವೆ. ಇದೇ ಜನವರಿ 11ಕ್ಕೆ ಕ್ಷೇತ್ರ ವ್ಯಾಪ್ತಿಯಲ್ಲೇ ಸಭೆ ಮಾಡುವಂತೆ ಸ್ಥಳೀಯ ನಾಯಕರಿಗೆ ಸಲಹೆ ನೀಡಿದ್ದೇವೆ. ಮೈಸೂರಿನಲ್ಲಿ ಹಂತ ಹಂತವಾಗಿ ಗ್ರಾ.ಪಂ ಚುನಾವಣೆಯಲ್ಲಿ ಪ್ರಗತಿಯಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಮೇಯರ್ ಚುನಾವಣೆ: ನನ್ನ ಬಳಿಗೆ ಇನ್ನೂ ಬಂದಿಲ್ಲ
ಮೈಸೂರು ಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಮೇಯರ್ ಚುನಾವಣೆ ವಿಚಾರ ನನ್ನ ಬಳಿಗೆ ಇನ್ನ ಬಂದಿಲ್ಲ. ನಿನ್ನೆ ಪಾಲಿಕೆ ಸದಸ್ಯರ ಸಭೆ ಮಾಡಿದ್ದು ಚುನಾವಣೆ ವಿಚಾರವಾಗಿ ಅಲ್ಲ. ಜ.11 ತಾರೀಖು ಮುಖ್ಯಮಂತ್ರಿಗಳು ಬರುತ್ತಿರುವ ಹಿನ್ನಲೆಯಲ್ಲಿ ಜನಸೇವಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಸಭೆ ಮಾಡಿದ್ದೇವೆ ಅಷ್ಟೇ ಎಂದರು.
ಸೋಮವಾರದಿಂದ ಕೊರೋನಾ ಲಸಿಕೆ
ಸೋಮವಾರದಿಂದ ಕೊರೋನಾ ಲಸಿಕೆ ನೀಡುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು ಸೋಮಶೇಖರ್, ಸೋಮವಾರದಿಂದ ಲಸಿಕೆ ನೀಡಲಿದ್ದೇವೆ. ರಾಜ್ಯದ 5 ಕೇಂದ್ರಗಳಲ್ಲಿ ಮೈಸೂರು ಸಹ ಒಂದು. ಮೈಸೂರಿನಲ್ಲೂ ಲಸಿಕೆ ವಿತರಣೆಯಾಗಲಿದೆ. ಆಶಾ ಕಾರ್ಯಕರ್ತರು,ವೈದ್ಯರು ಸೇರಿದಂತೆ ಫ್ರಂಟ್ ಲೈನ್ ವಾರಿಯರ್ಸ್ ಗೆ ಲಸಿಕೆ ವಿತರಣೆ ಮಾಡಲಿದ್ದೇವೆ. ಇದೇ ವಿಚಾರವಾಗಿ ಅಧಿಕಾರಿಗಳ ಸಭೆ ಕರೆದಿದ್ದೇನೆ. ಸಭೆಯಲ್ಲಿ ಸಿದ್ದತೆ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.