ಮುಟ್ಯೇಷನ್ ಸ್ಥಗಿತ ಹಿಂಪಡೆಯಲು ಆಗ್ರಹ

ಚಿಂಚೋಳಿ,ಸೆ.24- ಚಿಂಚೋಳಿ ಮತ್ತು ಕಾಳಗಿ ಪುರಸಭೆಯಲ್ಲಿ ಸ್ಥಗಿತಗೊಳಿಸಲಾಗಿರುವ ಮುಟ್ಯೇಷನ್ ಫಾರಂ ನಂ.3 ವಿಲೆವಾರಿಯನ್ನು ಪುನರ ಪ್ರಾರಂಭಿssಸುವಂತೆ ಆದೇಶ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜೆಡಿಎಸ್ ಮುಖಂಡ ಸಂಜೀವನ ಯಾಕಾಪೂರ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.
ನಿವೇಶನ ಮತ್ತು ಮನೆಗಳ ಮಾರಾಟ, ನೊಂದಾಣಿಗೆ ಅಗತ್ಯವಾಗಿ ಬೇಕಾಗಿರುವ ಮುಟ್ಯೇಷನ್ ಫಾರಂ ನಂ-3 ಇಲ್ಲಿನ ಪುರಸಭೆಯಲ್ಲಿ ಸ್ಥಗಿತಗೊಳಿಸಿರುವ ಪರಿಣಾಮವಾಗಿ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಣಕಾಸಿನ ತೊಂದರೆಯಿಂದ ತಮ್ಮ ನಿವೇಶನ ಮನೆಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.