ಮುಟ್ಟು ಮಹಿಳೆಯ ಜೀವನದಲ್ಲಿ ಬರುವ ಗೌರವಯುತವಾದ ಹಂತ : ನೀರಜ್ ಕುಮಾರ ವರ್ಮಾ

ಕಲಬುರಗಿ:ಜ.13: ಮುಟ್ಟು ಮಹಿಳೆಯ ಜೀವನದಲ್ಲಿ ಬರುವ ನೈಸರ್ಗಿಕ ಮತ್ತು ಗೌರವಯುತವಾದ ಹಂತ ಎಂದು ನಬಾರ್ಡ್ ಬೆಂಗಳೂರಿನ ಮುಖ್ಯ ವ್ಯವಸ್ಥಾಪಕರಾದ ನೀರಜ್ ಕುಮಾರ ವರ್ಮಾ ತಿಳಿಸಿದರು.

ಕಮಲಾಪೂರ ತಾಲ್ಲೂಕಿನ ಮೈರಾಡ ಪ್ರಕೃತಿ ಜ್ಞಾನ ತರಬೇತಿ ಕೇಂದದಲ್ಲಿ ನಬಾರ್ಡ್ ಹಾಗೂ ಮೈರಾಡ ಸಂಸ್ಥೆಯ ಕಲಬುರಗಿ ವಿಭಾಗದಲ್ಲಿ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ "ಮೈ ಪ್ಯಾಡ್-ಮೈ ರೈಟ್" ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

"ಮೈ ಪ್ಯಾಡ್ ಮೈ ರೈಟ್" ಎಂಬ ಯೋಜನೆಯು ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಈ ಕಾರ್ಯಕ್ರಮ ದೇಶದ 37 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕಲಬುರಗಿಯಲ್ಲಿ ಇದನ್ನು ಪ್ರಾಯೋಗಿಕವಾಗಿ ಮೈರಾಡ ಸಂಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ.

ಮುಂದುವರೆದು ಮಾತನಾಡಿದ ಅವರು ದೇಶದ ಪ್ರತಿಯೊಂದು ಕುಟುಂಬಗಳಲ್ಲಿ ಊಟ, ಬಟ್ಟೆಯ ನಂತರ ಮೊದಲನೆ ಆಧ್ಯತೆ ಸ್ಯಾನೆಟರಿ ನ್ಯಾಪಕಿನ್‍ಗೆ ಕೊಡಬೇಕು. ಮತ್ತು ಪಿರಿಡ್ಸ್/ಮುಟ್ಟು ಎನ್ನುವದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಬರುವ ನೈಸರ್ಗಿಕ ಬದಲಾವಣೆ ಒಂದು ಕ್ರಿಯೇ, ಅದನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕೆಂದು ತಿಳಿಸಿದರು. ಮಹಿಳೆಯ ಈ ಹಂತ ಗೌರವಯುತವಾದ ಹಂತವಾದುದ್ದರಿಂದ ಆಕೆ ಆರೋಗ್ಯ ಮತ್ತು ನೈರ್ಮಲ್ಯವಾಗಿದ್ದರೆ ಮಾತ್ರ ದೇಶವನ್ನು ಸುಂದರವಾಗಿ ಕಟ್ಟಲು ಸಾದ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸ್ತ್ರೀ ರೋಗ ತಜ್ಞರಾದ ಡಾ|| ಸಂಜನಾ ತಲ್ಲೂರ ಮಾತನಾಡಿ ಮುಟ್ಟು ಪ್ರತಿಯೊಬ್ಬ ಮಹಿಳೆ ಅನುಭವಿಸುವ ಸಹಜ ಕ್ರಿಯೇ, ಅದನ್ನು ಆಕೆ ಸಹಜವಾಗಿಯೇ ನಿರ್ವಹಿಸಲು ನಾವೆಲ್ಲ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕು. ಮುಟ್ಟು ಎಂಬುದು ಸಾಮಾಜಿಕ ಪಿಡುಗು ಅಲ್ಲ, ಅದೊಂದು ಸಹಜ ಕ್ರಿಯೆ ಎಂದು ತಿಳಿಸಿದರು. ಮತ್ತು ಗ್ರಾಮೀಣ ಮಹಿಳೆಯರು ಸ್ಯಾನೆಟರಿ ನ್ಯಾಪಕಿನ್ (ಪ್ಯಾಡ್) ಗಳನ್ನು ಪ್ರತಿಯೊಬ್ಬರು ಬಳಸಬೇಕು, ಪ್ರತಿ 6 ಗಂಟೆಗೊಮ್ಮೆ ಪ್ಯಾಡ್‍ಗಳನ್ನು ಬದಲಾಯಿಸಬೇಕು, ಅತಿ ಶ್ರಾವವಿದ್ದರೆ ಹೆಚ್ಚೆಚ್ಚು ಪ್ಯಾಡಗಳನ್ನು ಬಳಸಿ ದೇಹದ ಗುಪ್ತಾಂಗಗಳ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕೆಂದು ತಿಳಿಸಿದರು.

ನಬಾರ್ಡ್‍ನ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಶ್ರೀ ರಮೇಶ್ ಭಟ್ ಯೋಜನೆಯ ಸಂಪೂರ್ಣ ರೂಪರೇಶೆಗಳ ಬಗ್ಗೆ ವಿವರಿಸಿದರು.
ನಂತರ ಮಹಿಳಾ ಸ್ವ-ಸಹಾಯ ಸಂಘಗಳ ಎಲ್ಲಾ ಸದಸ್ಯರಿಗೆ ಸ್ಯಾನೆಟರಿ ನ್ಯಾಪಕಿನ್ (ಪ್ಯಾಡ್) ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಡಾ|| ಅನಸೂಯಾ, ಲೀಡ್ ಬ್ಯಾಂಕ್‍ನ ಎಜಿಎಮ್ ಇಂತೆಸಾರ್ ಹುಸೇನ್, ಸ್ತ್ರೀ ಶಕ್ತಿ ಮಹಿಳಾ ಸ್ವ-ಸಹಾಯ ಸಂಘಗಳ ಜಿಲ್ಲಾ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಮಲ್ಲಮ್ಮ, ಮೈರಾಡ ಕಲಬುರಗಿ ಕಾರ್ಯಕ್ರಮ ಅದಿಕಾರಿಗಳಾದ ಎಸ್.ಡಿ ಕಲ್ಯಾಣಶೆಟ್ಟಿ, ಮೈರಾಡ ಕಾರ್ಯ ಸಮನ್ವಯಕರಾದ ಶ್ರೀ ಎನ್ ನಾರಾಯಣ ರಾಜು, ಸಿರಾಜುದ್ದಿನ ಮೌಜನ್ ಮೈರಾಡ ಸಿಡಾರ, ಅಲ್ಟ್ರಾಟೆಕ್ ಕಂಪನಿ ಅದಿಕಾರಿ ಶ್ರೀಮತಿ ಚಂದಮ್ಮ, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಮತಿ ಸುವರ್ಣ, ಕೆ.ಬಿ.ಎಸ್ ವ್ಯವಸ್ಥಾಪಕರಾದ ಹರ್ಷಾ ಕುಲಕರ್ಣಿ, ಮೈರಾಡ ಹೆಚ್.ಡಿ.ಎಫ್.ಸಿ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಶಂಕರ ಉಜಳಂಬೆ, ಮೈರಾಡ ಹಿರಿಯ ಲೆಕ್ಕ ಅಧಿಕಾರಿಗಳಾದ ಶ್ರೀ ಚೆನ್ನವೀರಪ್ಪ ಹರಸೂರ, ಮುಂತಾದವರು ಉಪಸ್ಥಿತರಿದ್ದರು.