ಮುಟ್ಟು ದೋಷವಲ್ಲ ಒಂದು ಸಹಜ ಕ್ರಿಯೆ: ಸಾಮಾಜಿಕ ಕಳಂಕವನ್ನು ಹೋಗಲಾಡಿಸಿ ಶುಚಿತ್ವದ ಕಡೆ ಗಮನಹರಿಸಿ

ಚಿತ್ರದುರ್ಗ.ಮೇ.೩೦; ಮುಟ್ಟು ದೋಷವಲ್ಲ ಒಂದು ಸಹಜ ಕ್ರಿಯೆ. ಸಾಮಾಜಿಕ ಕಳಂಕ ಹೋಗಲಾಡಿಸಿ ಶುಚಿತ್ವದ ಕಡೆ ಗಮನಹರಿಸಿ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.ಇಲ್ಲಿನ ಸರ್ಕಾರಿ ಸ್ಕೂಲ್ ಆಫ್ ನರ್ಸಿಂಗ್‍ನಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ವಿಶ್ವ ಮುಟ್ಟಿನ ನೈರ್ಮಲ್ಯ ದಿನ ಮಾಹಿತಿ ಶಿಕ್ಷಣ  ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮವು ಹದಿ ಹರೆಯದ ಹೆಣ್ಣುಮಕ್ಕಳು ಖುತುಚಕ್ರ ಪ್ರಾರಂಭದಲ್ಲಿ ದೈಹಿಕ ಮಾನಸಿಕವಾಗಿ ಉಂಟಾಗುವ ಪರಿಣಾಮಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮವಾಗಿದ್ದು, ಹೆಣ್ಣು ಮಕ್ಕಳು ಋತುಮತಿ ರಜಸ್ವಲೆಯಾಗುವುದು ಪ್ರಕೃತಿಯ ಸಹಜ ಕ್ರಿಯೆ. ಮಜುಗರ ಸಂಕೋಚ ಬೇಡ. ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕಾಹಾರದ ಕಡೆ ಗಮನ ಹರಿಸಿ ಎಂದು ಹೇಳಿದರು.ಕಿಶೋರಿಯರು ರಜಸ್ವಲೆಯಾಗುವ, ಈ ವಯಸ್ಸಿನಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಂಕೋಚವಿಲ್ಲದೆ ನಿಮ್ಮ ತಾಯಿ ಅಕ್ಕಂದಿರ ಬಳಿ ನಿಮಗಾಗುವ ತೊಂದರೆ ಹೇಳಿ,  ವೈದ್ಯರ ಸಲಹೆ ಪಡೆದುಕೊಳ್ಳಿ. ನಿಮ್ಮ ಸೇವೆಗಾಗಿ ಪ್ರತಿ ಗುರುವಾರ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ನೇಹ ಕ್ಲಿನಿಕ್ ತೆರೆದಿರುತ್ತದೆ. ಅಪ್ತ ಸಮಾಲೋಚನೆ ಮಾಡಿಕೊಳ್ಳಿ ಎಂದರು,.ಸರ್ಕಾರ ಕಿಶೋರಿಯರಿಗಾಗಿ ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮ ಆಯೋಜಿಸಿದ್ದು, ಋತುಸ್ರಾವದ ಸಂದರ್ಭದಲ್ಲಿ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು. ಸ್ವಚ್ಚತೆ ಸ್ಯಾನಿಟರಿ ನ್ಯಾಪಕಿನ್ ಬಳಕೆ, ವಿಸರ್ಜನೆ, ಪೌಷ್ಟಿಕಾಹಾರ ಸೇವನೆ ಮಾನಸಿಕ ಭೌತಿಕ ಬದಲಾವಣೆಗಳನ್ನು ಅರಿಯಲು ಆರೋಗ್ಯ ಶಿಕ್ಷಣ ನೀಡಿ. ಮುಟ್ಟು ದೋಷವಲ್ಲ ಒಂದು ಸಹಜ ಕ್ರಿಯೆ ಸಾಮಾಜಿಕ ಕಳಂಕ  ಹೋಗಲಾಡಿಸಿ ಶುಚಿತ್ವದ ಕಡೆ ಗಮನಹರಿಸಿ  ಎಂದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಮಾತನಾಡಿ, ವಾರಕೊಮ್ಮೆ ಕಬ್ಬಿಣಾಂಶ ಮಾತ್ರೆ ವಿತರಣೆ 6 ತಿಂಗಳಿಗೊಮ್ಮೆ ಜಂತು ಮಾತ್ರೆ ವಿತರಣೆ, ರಾಷ್ಟ್ರೀಐ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣೆ ಚಿಕಿತ್ಸೆ ನಿರ್ದೇಶನ ನಡೆಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಅನುಶ್ರೀ,    ಉಪನ್ಯಾಸಕರಾದ  ನರಸಿಂಹ ರೆಡ್ಡಿ,  ಗಿರಿಜಾ ಶಂಕರ್,  ಡಿ.ಏನ್.ಓ ಶಾಂತಮ್ಮ,  ಕಿಶೋರಿಯರು ಭಾಗವಹಿಸಿದ್ದರು.