ಮುಟ್ಟಿನ ಕಪ್ ಉಪಯೋಗಿಸುವ ಕುರಿತು ಪ್ರತಿ ಪ್ರೌಢ ಶಾಲೆ ಮತ್ತು ಪಿ.ಯು ಕಾಲೇಜುಗಳ ಹೆಣ್ಣು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲು ಸೂಚನೆ

ಕಲಬುರಗಿ:ಫೆ.02:ಸಸ್ಟೈನಬಲ್ ಮೆನ್ಟ್ರುವಲ್ ಹೈಜೀನ್ ಮ್ಯಾನೇಜ್ಮೆಂಟ್ (ಎಸ್.ಎಮ್.ಹೆಚ್.ಎಮ್.) Sustainable Menstrual Hygiene Management (SMHM) ಹಾಗೂ ಮುಟ್ಟಿನ ಕಪ್ ಉಪಯೋಗಿಸುವ ಕುರಿತು 16 ರಿಂದ 18 ವರ್ಷದೊಳಗಿನ ಪ್ರತಿ ಪ್ರೌಢ ಶಾಲೆ, ಪಿ.ಯು ಕಾಲೇಜುಗಳಲ್ಲಿ, ವೈದ್ಯಕೀಯ ಕಾಲೇಜು ಹಾಗೂ ಎಲ್ಲಾ ಹಾಸ್ಟೇಲ್‍ಗಳಲ್ಲಿನ ಹೆಣ್ಣು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿ ಅರಿವು ಮೂಡಿಸುವುದು ಹಾಗೂ ಅದರ ಉಪಯೋಗದ ಬಗ್ಗೆ ಹೆಣ್ಣು ಮಕ್ಕಳಿಗೆ ಮನವರಿಕೆ ಮಾಡಬೇಕೆಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಗುರುವಾರ ಕಲಬುರಗಿ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸುಸ್ತಿರ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಸಮಿತಿ ರಚಿಸುವ ಕುರಿತು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಡಿ.ಹೆಚ್.ಓ., ಆರ್.ಸಿ.ಹೆಚ್.ಓ., ಡಿ.ಡಿ.ಪಿ.ಐ., ಡಿ.ಡಿ.ಪಿ.ಯು, ಉಪ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೆ.ಹೆಚ್.ಪಿ.ಟಿ. (KHPT) ಹಾಗೂ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಮತ್ತು ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿ ಈ ಯೋಜನೆ ಯಶಸ್ವಿಗೊಳಿಸಬೇಕೆಂದರು.

ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು (ಆಡಳಿತ)ಮಾಧವ ಗಿಟ್ಟೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶರಣಯ್ಯಾ ಮಠಪತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ ಯು. ಉಪಸ್ಥಿತರಿದ್ದರು.