ಮುಜೀಬುದ್ದೀನ್ ಅವರಿಗೆ ಸ್ಕೌಟ್-ಗೈಡ್ಸ್ ಸನ್ಮಾನ

ರಾಯಚೂರು.ನ.೧೮- ಸ್ಕೌಟ್ ಆಂಡ್ ಗೈಡ್ಸ್ ಕಟ್ಟಡದ ಮೇಲೆ ಹಾಲ್ ನಿರ್ಮಾಣ ಜವಾಬ್ದಾರಿ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಗುತ್ತೇದಾರರಾದ ಮುಜೀಬುದ್ದೀನ್ ಅವರಿಗೆ ಇಂದು ಸನ್ಮಾನಿಸಲಾಯಿತು.
ಸ್ಕೌಟ್ ಆಂಡ್ ಗೈಡ್ಸ್‌ನ ಮುಖ್ಯಸ್ಥರು ಹಾಗೂ ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯೆ ಅವರು ಸನ್ಮಾನಿಸಿ ಗೌರವಿಸಿದರು. ಸ್ಕೌಟ್ ಆಂಡ್ ಗೈಡ್ಸ್ ಕಟ್ಟಡದ ಮೇಲೆ ಹಾಲ್ ನಿರ್ಮಾಣಕ್ಕೆ ಮನವಿ ಮಾಡಲಾಗಿತ್ತು. ಪ್ರಥಮ ದರ್ಜೆ ಗುತ್ತೇದಾರರಾದ ಮುಜೀಬುದ್ದೀನ್ ಅವರು ತಮ್ಮ ಸ್ವಂತ ಖರ್ಚು ವೆಚ್ಚದಲ್ಲಿ ಹಾಲ್ ನಿರ್ಮಿಸಲು ಮುಂದಾಗಿದ್ದಾರೆ. ಇವರ ಈ ಕೊಡುಗೆ ಹಿನ್ನೆಲೆಯಲ್ಲಿ ಮುಜೀಬುದ್ದೀನ್ ಅವರನ್ನು ಇಂದು ಸ್ಕೌಟ್ ಆಂಡ್ ಗೈಡ್ಸ್ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪಿ.ಜಿ.ಆರ್.ಸಿಂಧ್ಯೆ ಅವರು, ಮುಜೀಬುದ್ದೀನ್ ಅವರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಗೌರವಿಸಿದರು.