ಮುಜೀಬುದ್ದಿನ್ ರಿಂದ ಅರ್ಚಕರಿಗೆ ದಾನ, ಮುಖಂಡರಿಗೆ ಎಳ್ಳುಬೆಲ್ಲ

ರಾಯಚೂರು- ನಗರದ ವಿವಿಧ ದೇವಸ್ಥಾನದ ಅರ್ಚಕರಿಗೆ ದಾನ ನೀಡಿ ಮತ್ತು ನಗರದ ಮುಖಂಡರಿಗೆ ಎಳ್ಳು ಬೆಲ್ಲ ನೀಡಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ನಗರದ ಮುಖಂಡ ಮುಜೀಬುದ್ದಿನ್ ಅವರು ತಿಳಿಸಿದರು.
ನಗರ ಕಾಂಗ್ರೆಸ್ ಮುಖಂಡ ಮುಜೀಬುದ್ದಿನ್ ಅವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಶುಭಾಶಯ ಕೋರಿ, ಅರ್ಚಕರಿಗೆ ದಾನ ನೀಡುವ ಮೂಲಕ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದರು.
ದಾನ ಧರ್ಮಗಳ ಮೂಲಕ ಖ್ಯಾತಿಯಾಗಿರುವ ಮುಜೀಬುದ್ದಿನ್ ಅವರು, ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುವ ನಾಯಕರಾಗಿದ್ದು ಈ ಸಂಕ್ರಾಂತಿ ಹಬ್ಬದಂದು ನೀಡಿದ ಕಾಣಿಕೆಗೆ ವೀರಶೈವ ಅರ್ಚಕರು ಧನ್ಯವಾದಗಳನ್ನು ತಿಳಿಸಿದರು. ಸಂಪ್ರದಾಯದಂತೆ ನಡೆದುಕೊಂಡ ಮುಜೀಬುದ್ದಿನ್ ಅವರು, ಎಳ್ಳು ಬೆಲ್ಲ ಸವಿಯೋಣ, ಶಾಂತಿ ಸೌಹಾರ್ದತೆ ಹಾಗೂ ಭಾವೈಕ್ಯತೆಯನ್ನು ಬೆಸೆಯೋಣ, ಹೊಸತನಕ್ಕೆ ಸಾಕ್ಷಿಯಗೋಣ ಎಂಬ ಅರ್ಥ ಇರುವ ಶುಭಾಶಯ ಕಾರ್ಡ್ ಗಳನ್ನು ನೀಡಿದ್ದು ವಿಶೇಷವಾಗಿತ್ತು. ಈ ಮೂಲಕ ಸೌಹಾರ್ದ ಸಂಕ್ರಮಣ ಆಚರಿಸಲು ಕರೆ ನೀಡಿದರು. ನಗರದ ಸುಮಾರು ೧೦೦ ಅಧಿಕ ಜನರ ಅರ್ಚಕರಿಗೆ ವಸ್ತ್ರ, ಕೊಬ್ಬರಿ, ರಾಗಿ ಪಾತ್ರೆ ಸೇರಿದಂತೆ ಕಾಣಿಕೆ ನೀಡಿ ಅರ್ಚಕರ ಆಶೀರ್ವಾದ ಪಡೆದರು. ನಂತರ ನಗರದ ಮಹಿಳೆಯರ ಮನೆ ಮನೆಗೆ ತೆರಳಿ ಎಳ್ಳು ಬೆಲ್ಲದ ಹೊಂದಿರುವ ಬಾಕ್ಸ್, ಶುಭಾಶಯ ತಿಳಿಸುವ ಶುಭಾಶಯ ಕಾರ್ಡ್ ನೀಡಿ ಸಂಕ್ರಾಂತಿ ಶುಭಾಶಯ ತಿಳಿಸಿದರು. ಅವರ ಬೆಂಬಲಿಗರು ಸಹ ನಗರದ ವಿವಿಧ ವಾರ್ಡ್ ಗಳ ಹಿರಿಯ ನಾಯಕರಿಗೆ,ಹೋರಾಟಗಾರರಿಗೆ, ಪ್ರಗತಿಪರ ಮುಖಂಡರಿಗೆ ಸಂಕ್ರಾಂತಿ ಶುಭಾಶಯ ತಿಳಿಸಿದರು.