ಮುಜೀಬುದ್ದಿನ್‌ರಿಗೆ ಅಭೂತಪೂರ್ವ ಬೆಂಬಲ

ರಾಯಚೂರು,ಏ.೩೦-ಪಕ್ಷೇತರ ಅಭ್ಯರ್ಥಿ ಮುಜೀಬುದ್ದಿನ್ ಅವರಿಗೆ ಇಂದು ಅಭೂತಪೂರ್ವ ಜನಬೆಂಬಲ ವ್ಯಕ್ತವಾಯಿತು. ನಗರದ ವಾರ್ಡ್ ನಂಬರ್ ೯ರ ಹಮದರ್ದ ಶಾಲೆಯಿಂದ ಶುರುವಾದ ಪ್ರಚಾರ ನೂರಾರು ಯುವಕರೊಂದಿಗೆ ಮತ ನೀಡುವಂತೆ ಮನವಿ ಮಾಡಲಾಯಿತು. ವಾರ್ಡ್ ನಂಬರ್ ೧೧ರ ಗಂಗಾನಿವಾಸದಲ್ಲಿ ಭರ್ಜರಿ ಪ್ರಚಾರ ಮಾಡಲಾಗಿತು. ಯುವಕರು,ವೃದ್ಧರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಬಿಸಿಲಿನ ಜಳದಲ್ಲಿಯೂ ಮುಜೀಬುದ್ದಿನ್ ಚೈತನ್ಯದಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಅವರ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿತು. ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದ ಮುಜೀಬುದ್ದಿನ್, ಗೆದ್ದುಬಂದರೆ ಜನರಿಗೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುತ್ತೇನೆ. ಉದ್ಯೋಗ ಸೃಷ್ಟಿ, ಬಡತನದಲ್ಲಿರುವ ಕುಟುಂಬದ ಮದುವೆ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ರಾಯಚೂರು ನಗರದ ರಸ್ತೆಗಳನ್ನು ಧೂಳು ಮುಕ್ತಗೊಳಿಸಿ ವ್ಯವಸ್ಥಿತ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತೇನೆ ಎಂದು ಅಭಯ ನೀಡಿದರು. ಮನೆ ಮನೆಗೆ ತರಳಿ ಪ್ರಚಾರ ನಡೆಸಿದ ಮುಜೀಬುದ್ದಿನ್ ರಿಗೆ ಯುವರಕರು ಸಾಥ್ ನೀಡಿ ಮುಜೀಬುದ್ದಿನ್ ರ ಚಿಹ್ನೆಯಾದ ಗ್ಯಾಸ್ ಸಿಲಿಂಡರ್ ಗೆ ಮತ ನೀಡುವಂತೆ ಮನವಿ ಮಾಡಿದರು.