ಮುಜರಾಯಿ ಇಲಾಖೆಗೆ 10ಸದಸ್ಯರ ನೇಮಕ

ಮಾಲೂರು,ಸೆ೧೩:ಬೆಂಗಳೂರು ಕೃಷ್ಣರಾಜೇಂದ್ರ ಮಾರುಕಟ್ಟೆಯ ಕೋಟೆ ಬಳಿ ಇರುವ ಶ್ರೀ ಲ ನ ಧರ್ಮಸಂಸ್ಥೆಯ ಆಡಳಿತ ಮಂಡಳಿಯ ನಾಲ್ಕು ವರ್ಷಗಳ ಅವಧಿಗೆ ಸರ್ಕಾರದ ಶಿಫಾರಸ್ಸಿನ ಮೇರೆಗೆ ವಿ.ಮೋಹನ್ ಮೂರ್ತಿ(ಅಧ್ಯಕ್ಷರು) ಸೇರಿದಂತೆ ೧೦ ಮಂದಿ ಸದಸ್ಯರುಗಳನ್ನು ಮುಜರಾಯಿ ಧಾರ್ಮಿಕ ದತ್ತಿ ಇಲಾಖೆ ಅದೀನ ಕಾರ್ಯದರ್ಶಿ ನೇಮಕಗೊಳಿಸಿ ಅದೇಶಿಸಿದ್ದಾರೆ.
ಆಗಸ್ಟ್ ೮ಕ್ಕೆ ಹಿಂದಿನ ಶ್ರೀ ಲ ನ ಧರ್ಮ ಸಂಸ್ಥೆಯ ಆಡಳಿತ ಮಂಡಳಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಧರ್ಮ ಸಂಸ್ಥೆಯ ಆಡಳಿತ ಮಂಡಳಿಗೆ ನೂತನ ಸಮಿತಿಯನ್ನು ಸರ್ಕಾರದ ಆದೇಶದಂತೆ ವಿ.ಮೋಹನ ಮೂರ್ತಿ(ಅಧ್ಯಕ್ಷರು), ಪಿ.ಜಿ.ವಿಜಯ್ ಕುಮಾರ್, ವಿ.ಶಂಕರ್. ಡಿ.ಪ್ರಭಾಕರ್, ಜ್ಯೋತಿ ಕುಮಾರ್, ರೂಪ.ವಿ ಅವರು (ಜ್ಯೋತಿನಗರ ವೈಶ್ಯ ಸಮುದಾಯದ ಸದಸ್ಯರು), ಉಳಿದಂತೆ ಬಿ.ಎಂ.ರಾಜಗೋಪಾಲ್, ಸ್ಥಳೀಯ ಶಾಸಕರು ಡಾ.ಸಂಜೀವ ರೆಡ್ಡಿ, ಶೋಭಾ.ಎಚ್.ಜಿ ಮಹಿಳಾ ಸದಸ್ಯೆ ಮುಂಚೂಣಿ ಪ್ರತಿನಿಧಿಗಳನ್ನಾಗಿ ಹಿಂದಿನ ಅಧ್ಯಕ್ಷ ಎ.ಕೆಂಪಣ್ಣ ಶೆಟ್ಟಿ ಪದ ನಿಮಿತ್ತ ಸದಸ್ಯರನ್ನಾಗಿ ನೇಮಕಗೊಳಿಸಿ ಕಂದಾಯ ಇಲಾಖೆ ಧಾರ್ಮಿಕ ದತ್ತಿ ಅಧೀನ ಕಾರ್ಯದರ್ಶಿ ಎಂ.ಎಲ್.ವರಲಕ್ಷ್ಮಿ ಆದೇಶಿಸಿದ್ದಾರೆ.
ಶ್ರೀ ಲ ನ ಧರ್ಮ ಸಂಸ್ಥೆಗೆ ನೂತನವಾಗಿ ನಾಲ್ಕು ವರ್ಷಗಳ ಅವಧಿಗೆ ನೇಮಕಗೊಂಡಿರುವ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನು ಧರ್ಮಸಂಸ್ಥೆಯ ಮಾಜಿ ಅಧ್ಯಕ್ಷರುಗಳು, ಮಾಜಿ ಸದಸ್ಯರುಗಳು, ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.