ಮುಗ್ಗರಿಸಿದ ಲಖನೌ ಪ್ಲೇ ಆಫ್ ಗೆ ಗುಜರಾತ್ ಲಗ್ಗೆ

ಪುಣೆ,ಮೇ.10- ರಶೀದ್ ಖಾನ್ ಸ್ಪಿನ್ ಮೋಡಿ ಯಿಂದಾಗಿ ಗುಜರಾತ್ ಸೂಪರ್ ಜೈಂಟ್ಸ್ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಗೆ ಲಗ್ಗೆ ಹಾಕಿದೆ. ಇಂದು ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ 62 ರನ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಗುಜರಾತ್ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿತು.


ಗುಜರಾತ್ 18 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು. ಸುಲಭವಾಗಿ ಗೆಲ್ಲಬಹುದಾಗಿದ್ದ ಲಖನೌ ಕಳಪೆ ಬ್ಯಾಟಿಂಗ್ ನಿಂದಾಗಿ ಹೀನಾಯ ಸೋಲು ಅನುಭವಿಸಿತು.
145 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಹತ್ತಿದ ರಾಹುಲ್ ಪಡೆ ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿತು.13.5 ಓವರ್ ಗಳಲ್ಲಿ 82 ರನ್ ಗಳಿಗೆ ಸರ್ವಪತನ ಕಂಡಿತು.
ಆರಂಭದಿಂದಲೇ ರನ್ ಗಳಿಸಲು ಲಖನೌ ತಂಡದ ಬ್ಯಾಟರ್ ಗಳು ಪರದಾಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ, ತಾಳ್ಮೆ ಹಾಗೂ ಉತ್ತಮ ಜತೆಯಾಟ ವಾಡಲು ಸಂಪೂರ್ಣ ವಿಫಲವಾಯಿತು.
ದೀಪಕ್ ಹೂಡಾ 27, ಕ್ಲಿಂಟನ್ ಡೀ ಕಾಕ್ 11 ರನ್ ಗಳಿಸಿದ್ದನ್ನು ಹೊರತುಪಡಿಸಿದರೆ ನಾಯಕ ರಾಹುಲ್ ಸೇರಿದಂತೆ ಇತರ ಬ್ಯಾಟರ್ ಗಳು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಪರೇಡ್ ಮಾಡಿದರು.
ಗುಜರಾತ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಲಖನೌ, ಬ್ಯಾಟಿಂಗ್ ನಲ್ಲಿ ಮುಗ್ಗರಿಸಿತು. ಗುಜರಾತ್ ಪರ ರಶೀದ್ ಖಾನ್ ನಾಲ್ಕು ವಿಕೆಟ್ ಕಬಳಿಸಿದರು.
ರಾಹುಲ್ ಪಡೆಗೆ ಇನ್ನೂ ಎರಡು ಪಂದ್ಯಗಳು ‌ಬಾಕಿ ಉಳಿದಿವೆ. ಒಂದು ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶಿಸಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 144 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು.
ಇನ್ನಿಂಗ್ಸ್ ಆರಂಭದಲ್ಲೇ ವಿಕೆಟ್ ಕುಸಿತದ ನಡುವೆ ಶುಭ್ ಮನ್ ಗಿಲ್ ಕಡೆಗಳಿಗೆಯವರೆಗೂ ತಂಡಕ್ಕೆ ಬೆನ್ನೆಲುಬಾಗಿ ನಿಂತರು.
49 ಎಸೆತಗಳಲ್ಲಿ 63 ರನ್ ಗಳಿಸಿದ್ದರಿಂದ ತಂಡದ ಮೊತ್ತ 140ರ ಗಡಿ ದಾಟಿಸಿದರು. ಡೇವಿಡ್ ಮಿಲ್ಲರ್ 26, ರಾಹುಲ್ ತೆವಾಟಿಯಾ 22 ರನ್ ಗಳಿಸಿದರು.
ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಮ್ಯಾಥ್ಯು ವೇಡ್ 10 ರನ್ ಗಳಿಸಿದ್ದಾಗ ಆವೇಶ್ ಖಾನ್ ಪೆವಿಲಿಯನ್ ಹಾದಿ ತೋರಿಸಿದರು. ಇದಕ್ಕೂ ಮುನ್ನ ಆರಂಭಿಕ ಆಟಗಾರ ವೃದ್ಧಿಮಾನ್ ಸಹಾ 5 ರನ್ ಗಳಿಸಿ ಮೌಸಿನ್ ಖಾನ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು.

ಸಹಾ 5 ರನ್ ಗಳಿಸಿ ಮೌಸಿನ್ ಖಾನ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು.