ಮುಗಿಲೆತ್ತರದಲ್ಲಿ ಕೃತಿ ಬಿಡುಗಡೆ ಮಾಡಿರುವುದು ವಿಶೇಷ.

ಚಿತ್ರದುರ್ಗ.ಏ.೩: ಶಾಸ್ತçಸಾಹಿತ್ಯದಲ್ಲಿ ಅಲಕ್ಷಿತ ಕ್ಷೇತ್ರದ ವಿಂಗಡನೆಗೆ ಒಳಪಟ್ಟ ಸಾಹಿತಿಗಳ ಕುರಿತು ಅಭ್ಯಾಸ ಕೃತಿಗಳನ್ನು ರಚಿಸುವುದು ಕಷ್ಟದ ಕೆಲಸ. ಇಂತಹ ಸಂಧಿಗ್ಧತೆಯ ವಾತಾವರಣದಲ್ಲಿ ಕೃತಿಗಳನ್ನು ರಚಿಸುವುದು ಅಪರೂಪದ್ದಾಗಿದೆ ಎಂದು ಕನ್ನಡ ಉಪನ್ಯಾಸಕ ಕೆ.ಮಹೇಶ್ ಅಭಿಪ್ರಾಯಪಟ್ಟರು.ಕುಂಚಿಗನಾಳ್ ಗ್ರಾಮದ ಲೇಖಕ ಡಾ.ಕೆ.ಕಣುಮಪ್ಪ ಇವರು ರಚಿಸಿದ ಮೈಸೂರಿನ ಹಿರಿಯ ಗ್ರಂಥಸAಪಾದಕ ಜಿ.ಜಿ.ಮಂಜುನಾಥನ್ ಅವರ ಶಾಸ್ತçಕೃತಿಗಳ ಸಂಪಾದನೆಯ ವಿದ್ವತ್‌ಪೂರ್ಣ ಕೃತಿಯನ್ನು ಐತಿಹಾಸಿಕ ನಗರದ ಬಾನೆತ್ತರದ ಧವಳಗಿರಿ ಬೆಟ್ಟದ ತುದಿಯಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಮುಗಿಲೆತ್ತರದಲ್ಲಿ ಕೃತಿ ಬಿಡುಗಡೆ ಮಾಡಿರುವುದು ವಿಶೇಷ. ಜಿ.ಜಿ.ಮಂಜುನಾಥನ್ ಇವರು ಕಾವ್ಯ ಗ್ರಂಥಗಳು ಮತ್ತು ಶಾಸ್ತçಗ್ರಂಥಗಳನ್ನು ರಚಿಸಿದ್ದಾರೆ. ಸಂಖ್ಯಾದೃಷ್ಟಿಯಿAದ ನೋಡಿದರೆ ಶಾಸ್ತçಗ್ರಂಥಗಳಿಗಿAತ ಕಾವ್ಯಗ್ರಂಥಗಳನ್ನು ಹೆಚ್ಚಾಗಿ ಪ್ರಕಟಿಸಿದ್ದಾರೆ. ಜನವಶ್ಯವೆಂಬ ಕಾಮಶಾಸ್ತç, ಯೋಗರತ್ನಾಕರವೆಂಬ ಅಷ್ಟಾಂಗಯೋಗ, ಕುದುರೆಗಳ ಗುಣಲಕ್ಷಣಗಳನ್ನು ಕುರಿತ ಅಶ್ವಶಾಸ್ತç, ವೀರಶೈವ ಚರಿತೆಯನ್ನು ಹೇಳುವ ಸುಜ್ಞಾನ ಚಿಂತಾಮಣಿ ಮುಂತಾದ ಕ್ಲಿಷ್ಟಕರ ಕೃತಿಗಳನ್ನು ಭಿನ್ನವಿಭಿನ್ನವಾಗಿ ಸಂಪಾದಿಸಿರುವುದು ಜಿ.ಜಿ.ಎಂ ರವರ ಬರಹದ ಸಾಧನೆ ಸಾಹಿತ್ಯ ಕ್ಷೇತ್ರದ ಕೈಗನ್ನಡಿಯಾಗಿದೆ ಎಂದರು.ಡಾ.ಕೆ. ಮೋಹನ್‌ಕುಮಾರ್ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಹಿರಿಯ ಸಾಹಿತಿಗಳನ್ನು ಓಲೈಸುವುದು ಕಷ್ಟಕರವಾದ ಪ್ರಯಾಸ. ಯುವ ಸಾಹಿತಿಗಳು ಹಿರಿಯ ಸಾಹಿತಿಗಳ ಕೃತಿಗಳನ್ನು ಅವಲೋಕನದ ಮೂಲಕ ಮರುಮೌಲ್ಯಮಾಪನ ಮಾಡುವ ಮತ್ತು ಆಧುನಿಕತೆಗೆ ಹೊಂದಿಕೊAಡು ಸಾಹಿತ್ಯ ಕೃತಿಗಳನ್ನು ರಚಿಸುವ ಅವಶ್ಯಕತೆಯಿದೆ ಎಂದರು.ಲೇಖಕ ಕುಂಚಿಗನಾಳ್ ಗ್ರಾಮದ ಡಾ.ಕೆ.ಕಣುಮಪ್ಪ ಮಾತನಾಡಿ ಚಿತ್ರದುರ್ಗದ ಪರಿಸರದಲ್ಲಿ ಇರುವ ಸಾಹಿತಿಗಳ ಸಮಗ್ರ ಕೃತಿಗಳ ಅವಲೋಕನಾ ಕಾರ್ಯಕ್ರಮಗಳನ್ನು ಯುವ ಬರಹಗಾರರನ್ನು ಒಟ್ಟುಗೂಡಿಸಿ ಮುಂದಿನ ದಿನಗಳಲ್ಲಿ ರಂಗಸೌರಭ ಕಲಾ ಸಂಘದ ವತಿಯಿಂದ ಮಾಡುವ ಯೋಜನೆ ಇದೆ. ಈಗಾಗಲೇ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು. ಕನ್ನಡ ಉಪನ್ಯಾಸಕ ಕೆ.ದೇವೇಂದ್ರಪ್ಪ ಉಪಸ್ಥಿತರಿದ್ದರು.