ಮುಗಿಯದ ಕೈ ಶಾಸಕರ ಪತ್ರ ಸಮರ ದೆಹಲಿಯಲ್ಲಿ ಸಮನ

ಸಿಂಧನೂರು,ಅ.೧- ಮುಖ್ಯ ಮಂತ್ರಿ ಸಿದ್ಧರಾಮಯ್ಯ ಪಕ್ಷದ ಶಾಸಕಾಂಗ ಸಭೆ ಕರೆದರು ಶಾಸಕರನ್ನು ಸಮಾಧಾನ ಮಾಡಿದರು ಸಹ ಕೈ ಶಾಸಕರ ಪತ್ರ ಸಮರ ಬಿರುಗಾಳಿ ಇನ್ನು ನಿಂತಿಲ್ಲ ಎನ್ನುವದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆಯಿಂದ ಗೊತ್ತಾಗುತ್ತಿದೆ.
ಶಾಸಕರನ್ನು ಸಚಿವರು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸಿದ್ದರಿಂದ ಕೈ ನ ಹಿರಿಯ ಶಾಸಕ ಬಿ.ಆರ್ ಪಾಟೀಲ ತಾವು ಸಹಿ ಮಾಡಿ ಇತರ ಶಾಸಕರ ಸಹಿ ಮಾಡಿದ ಪತ್ರನ್ನು ಸಿ.ಎಂ.ಗೆ ನೀಡಿ ತಮ್ಮ ಅಸಮಾಧಾನ ವನ್ನು ಬಹಿರಂಗ ವಾಗಿ ಹೊರಹಾಕಿದ್ದರು ಇದರಿಂದ ಮುಖ್ಯ ಮಂತ್ರಿ ಸಿದ್ಧ ರಾಮಯ್ಯ ಸೇರಿದಂತೆ ಪಕ್ಷದ ಹೈಕಮಾಂಡ ಸ್ವಲ್ಪ ಇರಸು ಮುರಸು ಯಾಗಿದ್ದು ಸತ್ಯ.
ಸಚಿವರ ವಿರುದ್ಧ ಶಾಸಕರ ಅಸಮಾಧಾನ ಹೊರಹಾಕಿ ಪಕ್ಷದ ಶಾಸಕಾಂಗ ಸಭೆ ಕರೆಯುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರಿಂದ ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸುವ ಸಲುವಾಗಿ ಹಾಗೂ ಇದರ ಬಗ್ಗೆ ವಿರೋಧ ಪಕ್ಷಗಳ ಮುಖಂಡರು ಮಾತನಾಡದಂತೆ ಎಚ್ಚತು ಗೊಂಡು ಸಿದ್ಧರಾಮಯ್ಯ ಪಕ್ಷದ ಶಾಸಕಾಂಗ ಸಭೆ ಮಾಡಿ ಶಾಸಕರನ್ನು ಸಮಾಧಾನ ಮಾಡುವ ತೇಪೆ ಹಚ್ಚುವ ಕೆಲಸ ಮಾಡಿದರು. ಸಹ ಅದು ಯಶಸ್ಸಿಯಾಗಿಲ್ಲ.
ಪತ್ರ ಬರೆಯಬಾರದಿತ್ತು. ಪತ್ರ ಬರೆದಿದ್ದೆ ಕ್ಕೆ ಮುಖ್ಯ ಮಂತ್ರಿಗಳು ಬೇಸರಗೊಂಡಿದ್ದರು ಇದರಿಂದ ಪತ್ರ ಬರೆದ ಶಾಸಕರು ಮುಖ್ಯ ಮಂತ್ರಿಗಳಿಗೆ ಕ್ಷೇಮೆ ಕೇಳಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿಕೆಯಿಂದ ತಣ್ಣಾಗಿದ್ದ ಪತ್ರ ಸಮರ ಬಿರುಗಾಳಿ ಎದ್ದು ಗೃಹ ಮಂತ್ರಿ.ಮೇಲೆ ತಿರುಗಿಬಿದ್ದಿದ್ದಾರೆ.
ಯಾರು ಕ್ಷೇಮೆ ಕೇಳಿದ್ದಾರೆ ನನಗೆ ಗೊತ್ತಿಲ್ಲ ಕ್ಷೇಮೆ ಕೇಳುವ ತಪ್ಪು ನಾನು ಮಾಡಿಲ್ಲ ಒಂದು ಕ್ಷೇಮೆ ಕೇಳುವ ಸಂದರ್ಭ ಬಂದರೆ ಕ್ಷೇಮೆ ಕೇಳುವ ಬದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಶಾಸಕ ಬಿ.ಆರ್ ಪಾಟೀಲ ಕಡ್ಡಿ ಮುರಿವಂತೆ ಮಾತನಾಡಿ ಪಕ್ಷದ ಹೈಕಮಾಂಡ ಗೆ ಸೆಡ್ಡು ಹೊಡೆದರು.
ಶಾಸಕಾಂಗ ಸಭೆ ಕರೆಯುವಂತೆ ಬಿ.ಆರ್.ಪಾಟೀಲ ಸೇರಿದಂತೆ ಹಲವು ಶಾಸಕರು ಸಹಿ ಮಾಡಿದ ಪತ್ರಕ್ಕೆ ನಾನು ಸಹಿ ಮಾಡಿದ್ದೇನೆ. ಇದು ಭಿನ್ನಮತ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವದ ಇದೆ ಪತ್ರ ಬರೆದವರು ಕ್ಷಮೆ ಕೇಳಿದ್ದಾರೆ ಎಂದು ಹೇಳಿದ್ದರಿ ಯಾರು ಕ್ಷೇಮೆ ಕೇಳಿಲ್ಲ ಎಂದು ಗೃಹ ಮಂತ್ರಿಯವರನ್ನು ಕೇಳಿದ್ದಾಗ ಇಲ್ಲ ಆ ರೀತಿ ಹೇಳಿಲ್ಲ. ಭ್ರದರ ಎಂದು ಗೃಹ ಸಚಿವ ಪರಮೇಶ್ವರ ನನಗೆ ಹೇಳಿದರು. ನನ್ನ ಕ್ಷೇತ್ರದಲ್ಲಿ ನಿಗದಿತ ಕಾರ್ಯಕ್ರಮ ಗಳು ಇರುವುದರಿಂದ ನಾನು ದೆಹಲಿಗೆ ಹೋಗುವುದಿಲ್ಲ. ಅಲ್ಲದೆ ನನಗೆ ದೆಹಲಿಯಲ್ಲಿ ನಡೆಯುವ ಸಭೆಗೆ ಬರಲು ಹೈಕಮಾಂಡ್ ಬುಲಾವ್ ನೀಡಿಲ್ಲ ಎಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಯಲಬುರ್ಗಾ ತಾಲ್ಲೂಕಿನ ಬೇವುರು ಗ್ರಾಮದಲ್ಲಿ ಹೇಳಿಕೆ ನೀಡಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳು ಸಂಪೂರ್ಣ ಯಾಗಿಲ್ಲ. ಈಗಲೆ ಪಕ್ಷದ ಶಾಸಕರು ಹಾಗೂ ಸಚಿವರ ಮಧ್ಯ ಅಧಿಕಾರ ಹಾಗೂ ಅನುದಾನಕ್ಕಾಗಿ ಬೀದಿ ಕಚ್ಚಾಟ ನಡೆದಿರುವದನ್ನು ಅರಿತು ಪಕ್ಷದ ಹೈಕಮಾಂಡ್ ಮುಂಬರುವ ಲೋಕಾ ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ದೆಹಲಿಯಲ್ಲಿ ಆಗಷ್ಟು ೨ ರಂದು ಸಭೆ ಕರೆದಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ, ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ,ಕೆ ಶಿವಕುಮಾರ, ಬಿ.ಆರ್. ಪಾಟೀಲ ಸೇರಿದಂತೆ ಪತ್ರ ಬರೆದ ಶಾಸಕರು ಸಚಿವರು ಸಭೆಯಲ್ಲಿ ಭಾಗವಹಿಸುವಂತೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಸಭೆಯಲ್ಲಿ ಯಾದರು ಬಿನ್ನಮತ ಮತಕ್ಕೆ ಕಡಿವಾಣ ಬೀಳುತ್ತದೊ ಇಲ್ಲವೊ ಕಾಯ್ದು ನೋಡಬೇಕಾಗಿದೆ.
ಕಾಂಗ್ರೆಸ್ ಪಕ್ಷದ ಭಿನ್ನಮತ ವನ್ನು ಬಿಜೆಪಿಯ ಸಮರ್ಥವಾಗಿ ಬಳಸಿ ಕೊಳ್ಳುವಲ್ಲಿ ವಿಫಲವಾಗಿದ್ದು ಕಂಡು ಬಂದಿದೆ.