
ಶಹಾಬಾದ :ಮೇ.5:ತಾಲೂಕಿನ ಪುರಾತನ ಪ್ರಸಿದ್ಧಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಶ್ರೀಗುರು ನಿಜಲಿಂಗೈಕ್ಯ ಸಿದ್ಧಲಿಂಗ ಶಿವಯೋಗಿಗಳವರ 74 ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಮೇ.6 ರಂದು ನಡೆಯಲಿದೆ ಎಂದು ಪೀಠಾಧಿಪತಿ ಪೂಜ್ಯರಾದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದರು. ಏಪ್ರೀಲ್ 27 ರಿಂದ ಪ್ರತಿದಿನ ರಾತ್ರಿ ಮಹಾದಾಸೋಹಿ ಶ್ರೀಶರಣಬಸವೇಶ್ವರ ಮಹಾರಾಜರ ಜೀವನ ದರ್ಶನ ಪ್ರವಚನ ಪ್ರವಚನ ಪ್ರವೀಣೆ ಶರಣ ಸಾಹಿತಿ ಜ್ಞಾನ ಯೋಗಿನಿ ಮಾತೋಶ್ರೀ ಶ್ರೀದೇವಿ ತಾಯಿ ಓಂಕಾರ ಅವರಿಂದ ನಡೆಯುತ್ತಿದ್ದು. ಮೇ 5 ಶುಕ್ರವಾರ ಆಗಿ ಹುಣ್ಣಿಮೆಯೆಂದು ಬೆಳಗ್ಗೆ ಜಂಗಮ ವಟುಗಳಿಗೆ ಅಯ್ಯಾಚಾರ ಭಕ್ತಮಾಹೇಶ್ವರರಿಗೆ ದೀಕ್ಷಾ ಕಾರ್ಯಕ್ರಮ, ಸಂಜೆ ಉಚ್ಛಾಯಿ, ರಾತ್ರಿ ಪ್ರವಚನ ಮಂಗಲೋತ್ಸವ ನಡೆಯಿತು. ಶನಿವಾರ ಮೇ.6 ರಂದು ಬೆಳಗ್ಗೆ ಗುರುಗಳ ಗದ್ದುಗೆಗೆ ಮಹಾರುದ್ರಾಭಿಷೇಕ ಅಷ್ಟೋತ್ತರ ನಾಮಾವಳಿ ಮಹಾಪೂಜೆ. ಸಂಜೆ 6-45 ಕ್ಕೆ ಭವ್ಯ ಮಹಾ ರಥೋತ್ಸವ ನಡೆಯಲಿದೆ, ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.