ಮುಗಳಖೋಡ ಶ್ರೀಸಿದ್ಧಲಿಂಗೇಶ್ವರ ಜಾತ್ರೆ ರದ್ದು

ಕಲಬುರಗಿ,ಏ.17- ಈ ವರ್ಷ ಇಲ್ಲಿನ ಸುಕ್ಷೇತ್ರ ಮುಕ್ತಿಮಂದಿರ ಮುಗಳಖೋಡ ಬೃಹನ್ಮಠದ ಜಾತ್ರಾ ಮಹೋತ್ಸವವನ್ನು ರದ್ದು ಪಡಿಸಲಾಗಿದೆ.
ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಈ ವರ್ಷ ಇದೇ ಏ.20 ರಿಂದ 22ರ ವರೆಗೆ ಮೂರು ದಿನಗಳ ಕಾಲ ನಡೆಯಬೇಕಿದ್ದ ಶ್ರೀ ಸಿದ್ದಲಿಂಗ ಮಹಾರಾಜರ (ಅಗ್ಗಿ) ಜಾತ್ರಾ ಮಹೋತ್ಸವ ರದ್ದು ಪಡಿಸಲಾಗಿದೆ ಎಂದು ಮುಗಳಖೋಡ ಶ್ರೀಸಿದ್ಧಗಂಗ ಮಠದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಪೂಜ್ಯ ಡಾ.ಮುರುಘರಾಜೆಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಬೇಕಿದ್ದ ಅಗ್ಗಿ, ರಥೊತ್ಸವ ಮತ್ತು ಕುಸ್ತಿಗಳು ಸೇರಿದಂತೆ ಎಲ್ಲ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ರದ್ದು ಪಡಿಸಲಾಗಿದೆ.
ಕೋವಿಡ್-19 ಹಿನ್ನಲೆಯಲ್ಲಿ ಸದ್ಬಕ್ತರ ಆರೋಗ್ಯದ ಹಿತದೃಷ್ಠಿಯಿಂದ ಹಾಗೂ ಸಮಾಜಿಕ ಜವಾಬ್ದಾರಿಯಿಂದ ಈ ವರ್ಷದ ಜಾತ್ರೆಯನ್ನು ರದ್ದುಗೊಳಿಸಲಾಗಿರುತ್ತದೆ.
ಸಾಂಕೇತಿಕವಾಗಿ ಪೂಜೆ ನಡೆಸಲಾಗುವುದು ಹಾಗೂ ಮೂರುದಿನಗಳ ಕಾಲ ಇಲ್ಲಿ ನಿಷೇದಾಜ್ಞೆ ಜಾರಿಯಲ್ಲಿರುತ್ತದೆ ಕಾರಣ ಸದ್ಭಕ್ತರು ಶ್ರೀಮಠಕ್ಕೆ ಆಗಮಿಸದೇ ಮನೆಯಲ್ಲಿಯೆ ಕುಳಿತುಕೊಂಡು ಭಕ್ತಿ ಸಮರ್ಪಣೆ ಮಾಡಿ ಗುರುಗಳ ಕೃಪೆಗೆ ಪಾತ್ರರಾಗಬೆಕೆಂದು ಶ್ರೀಮಠ ಪ್ರಕಟಣೆಯಲ್ಲಿ ಕೋರಿದೆ.