ಇಂಡಿ:ಜೂ.25:ತಾಲೂಕಿನ ನಿಂಬಾಳ ಗ್ರಾಮದ ಹೊಸೂರ ಹಟ್ಟಿಯ ಮುಖ್ಯ ಶಿಕ್ಷಕ ಶಾಲೆಗೆ ಸರಿಯಾಗಿ ಬರುವದಿಲ್ಲ ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಪಾಲಕರು ಶಾಲಾ ಆವರಣದಲ್ಲಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಸುಮಾರು ಎಂಟು ವರ್ಷದಿಂದ ಇದೆ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು ಬರುವದು ಅಪರೂಪ.
ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಆಸಂಗಿ ಮಾತನಾಡಿ ಶಾಲೆಯಲ್ಲಿ ಕುಡಿಯುವ ನೀರಿನ ವ್ಯಸ್ಥೆ ಇಲ್ಲ.ಮಳೆ ಬಂದರೆ ಶಾಲೆ ಸೋರುತ್ತದೆ. ಇಂತಹ ಅನೇಕ ಸಮಸ್ಯೆಗಳಿದ್ದು ಮುಖ್ಯ ಗುರುಗಳಿಗೆ ಮೇಲಾಧಿಕಾರಿಗಳ ಗಮನಕ್ಕೆ ತರಲು ಮೌಖಿಕವಾಗಿ ಮತ್ತು ಲಿಖಿತ ರೂಪದಲ್ಲಿ ನೀಡಿದ್ದೇವೆ ಎಂದರು.
ಜೈತುನಬಿ ಮುಲ್ಲಾ ಮಾತನಾಡಿ ಸುಮಾರು 57 ವಿದ್ಯಾರ್ಥಿಗಳು ಓದುತ್ತಿದ್ದು ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಸೇವಾ ಹಿರಿತನದ ಮೇರೆಗೆ ಒಬ್ಬರು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಅವರು ಶಾಲೆಗೆ ಬರುವದು ಅಪರೂಪ. ಇನ್ನೊಬ್ಬರು ಶಾಲೆಗೆ ಸರಿಯಾಗಿ ಬರುತ್ತಾರೆ ಎಂದರು. ಮುಖ್ಯ ಗುರುಗಳ ವಿರುದ್ಧ ಕ್ರಮ ಕೈಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವದಾಗಿ ತಿಳಿಸಿದರು.
ಸಂಜು ದತ್ತು ಭೋಸಲೆ, ಮಾಳಪ್ಪ ಅರ್ಜುನ ಆಸಂಗಿ, ಶ್ರೀಶೈಲ ಆಸಂಗಿ, ಸಂಜು ತುಕಾರಾಮ ಭೋಸಲೆ, ರಮೇಶ ಆಸಂಗಿ, ಶೈಯಬಾಯ ಖರಾತ, ಇಂದ್ರಬಾಯಿ ಖರಾತ, ಹಫೀಜಾ ಮುಲ್ಲಾ, ಅಂಬಣ್ಣಗೌಡ ಪಾಟೀಲ, ಶಿವಪ್ಪ ಆಸಂಗಿ, ಭೀಮರಾಯ ಕರಾಂಡೆ, ವಿಠ್ಠಲ ಆಸಂಗಿ, ಪವನ ಆಸಂಗಿ, ಮಾಳಪ್ಪ ಸತ್ಯಪ್ಪ ಆಸಂಗಿ, ಸಿದ್ದು ಅಡವಿ ಮತ್ತಿತರಿದ್ದರು.
ಮುಖ್ಯ ಗುರುಗಳು ಶಾಲೆಗೆ ಬರುವದಿಲ್ಲ ಎಂದು ಗ್ರಾಮಸ್ಥರು ಮನವಿ ನೀಡಿದ್ದಾರೆ. ಮುಖ್ಯ ಗುರುಗಳಿಗೆ ಕರೆಯಿಸಿ ಗ್ರಾಮಸ್ಥರ ಜೊತೆ ಚರ್ಚಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುತ್ತೆವೆ.
ವಸಂತ ರಾಠೋಡ ಕ್ಷೇತ್ರಶಿಕ್ಷಣಾಧಿಕಾರಿಗಳು ಇಂಡಿ