ಮುಖ್ಯ ಶಿಕ್ಷಕರಿಂದ ಶಾಲಾ ಶೌಚಾಲಯ ಸ್ವಚ್ಛತೆ!

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.25:- ಕೋಲಾರದಲ್ಲಿ ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳನ್ನು ಮಲದಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದಂತಹ ಘಟನೆ ನಡುವೆ ಕಳೆದ 13 ವರ್ಷಗಳಿಂದ ಶಾಲೆಯ ಶೌಚಾಲಯವನ್ನು ಮುಖ್ಯ ಶಿಕ್ಷಕರೊಬ್ಬರು ಶುಚಿ ಮಾಡುವಅಪರೂಪದ, ಮಾದರಿಕಾರ್ಯಗಡಿಜಿಲ್ಲೆಯ ಶಾಲೆಯಲ್ಲಿದೆ.
ಚಾಮರಾಜನಗರಜಿಲ್ಲೆಯಗುಂಡ್ಲುಪೇಟೆತಾಲೂಕಿನ ಹೊಂಗಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮಹಾದೇಶ್ವರಸ್ವಾಮಿ ಎಂಬವರು ಶಾಲ ಶೌಚಾಲಯವನ್ನು ಸ್ವತಃ ಶುಚಿ ಮಾಡಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಪಾಠ ಮಾಡುತ್ತಿದ್ದಾರೆ. ಮಹಾತ್ಮಾ ಗಾಂಧಿ, ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಮಹಾದೇಶ್ವರಸ್ವಾಮಿ ಸ್ವಚ್ಛತೆಯೇದೈವತ್ವಎಂದು ನಂಬಿದವರು. ಶೌಚಾಲಯಗಳನ್ನು ನಾವೇ ಶುಚಿ ಮಾಡಿದರೆ, ವಿದ್ಯಾರ್ಥಿಗಳು ಅದನ್ನುಕಲಿತುಕೊಂಡು ಮನೆಯಲ್ಲಿ ಪಾಲನೆ ಮಾಡುತ್ತಾರೆಎಂದು ಶಿಕ್ಷಕ ಶೌಚಾಲಯಗಳನ್ನು ಕ್ಲೀನ್ ಮಾಡುತ್ತಾರೆ
ಶಾಲೆಯಲ್ಲಿ ಬಾಲಕಿಯರಿಗೆಎರಡು, ಬಾಲಕರಿಗೆಎರಡು ಹಾಗೂ ಶಿಕ್ಷಕರಿಗೆ 1 ಶೌಚಾಲಯವಿದೆ. 5 ಶೌಚಾಲಯಗಳನ್ನು ವಾರಕ್ಕೊಮ್ಮೆ ವಿದ್ಯಾರ್ಥಿಗಳನ್ನು ಕರೆದುಅವರ ಮುಂದೆತಾವೇ ಶುಚಿಗೊಳಿಸುತ್ತಾರೆ. ತಮ್ಮ ಹಣದಲ್ಲಿ ಫೆನಾಯಿಲ್, ಸೋಪ್‍ತಂದಿಡುವ ಮಹಾದೇಶ್ವರಸ್ವಾಮಿ ಶಾಲೆಯ ಪ್ರತಿತರಗತಿಯಲ್ಲಿಕನ್ನಡಿ, ಬಾಚಣಿಗೆ, ಪೌಡರ್, ವಿಭೂತಿ, ಕುಂಕುಮ ತಂದಿಟ್ಟಿದ್ದಾರೆ.
ಕಳೆದ 2010 ರಲ್ಲಿ ಗಾಂಧಿ ಜಯಂತಿ ದಿನದಿಂದ ನಾನು ಈ ಕಾರ್ಯಆರಂಭ ಮಾಡಿದ್ದು, ಅಂದಿನಿಂದಲೂಇದನ್ನು ಮುಂದುವರೆಸಿಕೊಂಡು ಬಂದಿದ್ದೇನೆ. ಶಿಕ್ಷಕರನ್ನು ನೋಡಿಯೇ ಮಕ್ಕಳು ಕಲಿಯಲಿದ್ದು, ನಾವೇ ಕ್ಲೀನ್ ಮಾಡಿದಾಗ ಮಕ್ಕಳಿಗೂ ಕೂಡ ಶುಚಿ ಪ್ರಜ್ಞೆ ಮೂಡಲಿದೆ. ಮನೆಯಲ್ಲೂ ಮುಂದೆಅವರಜೀವನದಲ್ಲೂಅದನ್ನು ಪಾಲನೆ ಮಾಡುತ್ತಾರೆಎನ್ನುತ್ತಾರೆ ಮಹಾದೇಶ್ವರಸ್ವಾಮಿ.
ಅಕ್ಷರ ಜೋಳಿಗೆ ಕಾರ್ಯಕ್ರಮ: ಹೊಂಗಹಳ್ಳಿ ಶಾಲೆಯಲ್ಲಿಅಕ್ಷರ ಜೋಳಿಗೆ ಎಂಬ ಕಾರ್ಯಕ್ರಮಆರಂಭ ಮಾಡಲಾಗಿದ್ದು, ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರುತಾವು ಬೆಳೆದ ಹಣ್ಣು, ತರಕಾರಿಗಳನ್ನು ತಂದುಕೊಡಬಹುದಾಗಿದೆ. ಜೊತೆಗೆ, ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ವಿಶೇಷಆಹಾರಒದಗಿಸುವ ಮೂಲಕ ಆಚರಿಸಬಹುದಾಗಿದೆ. ಶಾಲೆಯ ಮಧ್ಯಾಹ್ನದ ಬಿಸಿಯೂಟದ ಮೆನುವಿನಲ್ಲಿ ಮುದ್ದೆ, ಪಲ್ಯ, ಮಜ್ಜಿಗೆ ಹಾಗೂ ಪಾಯಸಇರುವುದು ವಿಶೇಷವಾಗಿದೆ.