ಮುಖ್ಯ ಮಾಹಿತಿ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಿ

ರಾಯಚೂರು,ಮಾ.೨೫- ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರ ಎನ್.ಸಿ.ಶ್ರೀನಿವಾಸ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರ್.ಟಿ.ಐ ಕಾರ್ಯಕರ್ತ ಅಳ್ಳಪ್ಪ ಒತ್ತಾಯಿಸಿದ್ದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಆರ್. ಟಿ. ಐ ಅಡಿಯಲ್ಲಿ ಅರ್ಜಿ ಹಾಕಿದರೆ ಯಾವುದೇ ರೀತಿ ಅರ್ಜಿದಾರರಿಗೆ ಮಾಹಿತಿ ಗಳನ್ನು ನೀಡದೇ ಕರ್ತವ್ಯಲೋಪ ಎಸಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದಿಂದ ಲಕ್ಷಾಂತರ ರೂ.ವೇತನ ಪಡೆದು ಹಾಗೂ ಎಲ್ಲಾ ಸುಲಭಗಳನ್ನು ಪಡೆದುಕೊಂಡು ಸರ್ಕಾರದ ನಿಯಮಗಳನ್ನು ಪಾಲಿಸುವ ವಿಫಲರಾಗಿದ್ದಾರೆ.ಆರ್.ಟಿ.ಐ ಕಾರ್ಯಕರ್ತರಿಗೆ ನಾಲ್ಕು ವಾರದಲ್ಲಿ ಮಾಹಿತಿಯನ್ನು ನೀಡಬೇಕು ಆದರೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.೧೯೯೫ ರಿಂದ ೧೦೦ ಅರ್ಜಿಗಳಿಗೆ ಕೇವಲ ಆದೇಶಗಳನ್ನು ನೀಡಿದ್ದಾರೆ ಹೊರತು ಯಾವುದೇ ಮಾಹಿತಿ ನೀಡುತ್ತಿಲ್ಲ.ಆದ್ದರಿಂದ ಕೂಡಲೇ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.