ಮುಖ್ಯ ಪೇದೆ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರಕ್ಕಾಗಿ ಸಿಎಂಗೆ ಮನವಿ

ಅಫಜಲಪುರ:ಜೂ.20: ಇತ್ತೀಚಿಗೆ ಜೇವರ್ಗಿ ತಾಲೂಕಿನ ನೆಲೋಗಿ ಪೆÇೀಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಸಿದ ನಮ್ಮ ಕ್ಷೇತ್ರದ ಚವಡಾಪುರ ತಾಂಡಾ ನಿವಾಸಿಯಾಗಿದ್ದ ಪೆÇಲೀಸ್ ಮುಖ್ಯ ಪೇದೆ ಮಯೂರ ಚೌವ್ಹಾಣ್ ಅವರು ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಹೋದಾಗ ದುಷ್ಕರ್ಮಿಗಳು ಮರಳು ಸಾಗಿಸುವ ಟ್ರಾಕ್ಟರ್ ಚಲಾಯಿಸಿ ಹತ್ಯೆ ಮಾಡಿದ್ದಾರೆ.

ಹೀಗಾಗಿ ಇದನ್ನು ಸೂಕ್ತವಾಗಿ ತನಿಖೆ ನಡೆಸಿ ಕುಟುಂಬಸ್ಥರಿಗೆ 50 ಲಕ್ಷ ರೂ. ಪರಿಹಾರ ಒದಗಿಸಬೇಕೆಂದು ಶಾಸಕ ಎಂ.ವೈ.ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ಕಳೆದ ಸರ್ಕಾರದ ಅವಧಿಯಲ್ಲಿ ವ್ಯಾಪಕವಾಗಿ ಮರಳು ಮಾಫಿಯಾ ಎಗ್ಗಿಲದೆ ನಡೆಯುತ್ತಿತ್ತು. ಪ್ರಭಾವಿ ಲೂಟಿಕೋರರು ಜಿಲ್ಲೆಯಾದ್ಯಂತ ಅಕ್ರಮ ಮದ್ಯದ ಅಂಗಡಿಗಳನ್ನು ತೆರೆದು ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ.

ಈ ಅಕ್ರಮ ದಂಧೆ ಅಫಜಲಪುರ, ಜೇವರ್ಗಿ ಮತ್ತು ಸೇಡಂ ತಾಲೂಕುಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಹೊಸ ಸರ್ಕಾರ ಬಂದ ಮೇಲೆ ಅಕ್ರಮ ದಂಧೆ ಮೊಟುಕುಗೊಳಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ.

ಮೃತನ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದ್ದರಿಂದ ಸೇವಾನಿರತ ಪೆÇಲೀಸ್ ಮುಖ್ಯ ಪೇದೆ ಮಯೂರ ಚೌವ್ಹಾಣ್ ಕುಟುಂಬಕ್ಕೆ ಸರ್ಕಾರ ಕೂಡಲೇ 50 ಲಕ್ಷ ರೂ.ಪರಿಹಾರ ಒದಗಿಸಿ ಘಟನೆಗೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.