ಮುಖ್ಯಾಧಿಕಾರಿ ವಿರುದ್ಧ ಪೌರಾಡಳಿತ ನಿರ್ದೇಶಕರಿಗೆ ಶಾಸಕ ದೂರು

ಲಿಂಗಸುಗೂರು.ಏ.೦೧-ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರು ಸಾರ್ವಜನಿಕ ಕೇಲಸಗಳಿಗೆ ತೊಂದರೆ ಉಂಟುಮಾಡುತ್ತಿದ್ಧಾರೆ ಎಂದು ಸಾರ್ವಜನಿಕರು ದೂರುಗಳ ಆದಾರದ ಮೇಲೆ ಹಾಗೂ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ಬಂದಾಗಿನಿಂದ ಪುರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ.
ಸಾರ್ವಜನಿಕ ವಲಯದಲ್ಲಿ ಸರ್ಕಾರಿ ಅಧಿಕಾರಿಗಳು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ ಇಲ್ಲಿ ಮಾತ್ರ ಮುಖ್ಯಾಧಿಕಾರಿಗಳು ಸಾರ್ವಜನಿಕ ಜೀವನದಲ್ಲಿ ಆಟ ಹಾಡುತ್ತಿದ್ದಾರೆ ಎಂದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಮುಖ್ಯಾಧಿಕಾರಿಗಳು ತಮ್ಮ ನಡುವಳಿಕೆಗಳು ಬದಲಾವಣೆ ಮಾಡಿ ಕೊಳ್ಳಬೇಕು ಎಂದು ಮುಖ್ಯಾಧಿಕಾರಿ ವಿಜಯಲಕ್ಷ್ಮಿರವರಿಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ನೆರವಾಗಿ ಎಚ್ಚರಿಕೆ ನೀಡಿದರು.
ಲಿಂಗಸುಗೂರು ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಸಬ್ಬ್ ರಿಜಿಸ್ಟ್ರಾರ್ ಕಛೇರಿ ನಿರ್ಮಿಸಲು ಸರ್ಕಾರದಿಂದ ೦೧ಕೊಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕರು ಹೇಳಿದರು. ಹಟ್ಟಿಚಿನ್ನದ ಗಣಿ ಹೆಸರು ಬದಲಾವಣೆ ಮಾಡುವ ಬಾರಿ ವಿರೊದವೆಕ್ತವಾದ್ಧರಿಂದ ಸಚಿವರು ಶಾಸಕರ ಮನವಿಗೆ ಸ್ಪಂದಿಸಿ ಲಿಂಗಸುಗೂರು ತಾಲ್ಲೂಕಿನ ಸಾರ್ವಜನಿಕರು ಯಾವುದೇ ಕಾರಣಕ್ಕೂ ಗೊಂದಲದವಾಗಬಾರದು ಈಗ ಇರುವ ಹಟ್ಟಿ ಚಿನ್ನದ ಗಣಿ ಕಂಪನಿ ಹೆಸರು ಮುಂದುವರಿಸಲು ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕರು ಹೆಳಿದರು.
ಲಿಂಗಸುಗೂರು ತಾಲೂಕು ಮಟ್ಟದಲ್ಲಿ ಇರುವ ಮಿನಿ ವಿಧಾನಸೌಧ ಕಟ್ಟಡ ಅವೈಜ್ಞಾನಿಕ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಈಗ ಇರುವ ಮಿನಿ ವಿಧಾನಸೌಧ ವಿದ್ಯಾರ್ಥಿಗಳ ವಸತಿ ನಿಲಯದಂತಿದೆ ಈ ಇಂದೆ ಇದ್ದ ಶಾಸಕರು ತರಾತುರಿಯಲ್ಲಿ ಕಾಮಗಾರಿ ಆರಂಭ ಮಾಡಿ ಸಾರ್ವಜನಿಕರಿಗೆ ಉಪಯೊಗವಾಗದಂತೆ ನಿರ್ಮಾಣ ಮಾಡಿದ್ದಾರೆ ಎಂದು ಮಾಜಿ ಶಾಸಕರ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಭೂಪನಗೌಡ ಪಾಟೀಲ, ಪುರಸಭೆ
ಉಪಾಧ್ಯಕ್ಷ ಎಂಡಿ ರಫೀ, ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.