ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಏಕಪಕ್ಷೀಯ ನಿರ್ಧಾರಕ್ಕೆ ಕಡಿವಾಣ ಹಾಕುವರು ಯಾರು?

ಲಿಂಗಸುಗೂರು.ಏ.೨೫- ಪುರಸಭೆ ವ್ಯಾಪ್ತಿಯಲ್ಲಿ ನಡೆವ ಪ್ರತಿ ವಾರವೂ ಶನಿವಾರ ನಡೆಯುವ ವಾರದ ಸಂತೆ ಲಾಕ್‌ಡೌನ್
ನಿಂದ ರದ್ದಾಗಿದ್ದರಿಂದ ತಾಲೂಕು ಆಡಳಿತ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಳೀಯ ಕಾಲೇಜಿನ ಆವರಣದಲ್ಲಿ ಸಂತೆ ವ್ಯಾಪಾರ ವಹಿವಾಟು ಮಾಡಲು ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿದೆ.ಆದರೆ ಬೆಳಿಗ್ಗೆ ೬ರಿಂದ ೧೦ಗಂಟೆಯವರಿಗೆ ವ್ಯಾಪಾರ ಮಾಡುವ ಮೂಲಕ ವ್ಯಾಪಾರಿಗಳು ತರಕಾರಿ ಹಣ್ಣುಗಳನ್ನು ವ್ಯಾಪಾರ ಮಾಡುವ ಸಂದರ್ಭದಲ್ಲಿ ಏಕಾಏಕಿ ಪುರಸಭೆ ಅಧಿಕಾರಿಗಳು ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಕರ ವಸೂಲಿಗೆ ದಂಧೆಗೆ ಇಳಿದಿರುವ ಅಧಿಕಾರಿಗಳು ಅಕ್ರಮವಾಗಿ ತೆರಿಗೆ ವಸೂಲಿಗೆ ಇಳಿದಿರುವುದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ಕರ್ಪು ಹೆಸರಿನಲ್ಲಿ ತಮ್ಮ ಸಿಬ್ಬಂದಿಗಳ ಮುಲಕ ಇದನ್ನೆ ಬಂಡವಾಳ ಮಾಡಿಕೊಂಡು ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ಮಾಡಿ ತೆರಿಗೆ ವಸೂಲಿ ಮಾಡುತ್ತಿರುವುದು ಸಾರ್ವಜನಿಕ ಜೀವನದಲ್ಲಿ ತಮ್ಮ ಅಟ್ಟಹಾಸ ಮೆರಯಿತಿದ್ಧಾರೆ ಎಂದು ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮೈಬೂಬಪಾಶ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತೆರಿಗೆ ವಸೂಲಿಗೆ ದಂಧೆಗೆ ಬಂದ ಬಿಲ್ಲ ಕಲೆಕ್ಟರ್ ಸಿಬ್ಬಂದಿ ವ್ಯಾಪಾರ ವಹಿವಾಟು ಮಾಡುವ ವ್ಯಾಪಾರಿಗಳಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸಿದೆ ವ್ಯಾಪಾರ ಮಾಡುವ ಅಂಗಡಿಗಳಿಗೆ ಹೋಗಿ ಸಣ್ಣ ಪುಟ್ಟ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ೧೦ರೂಪಾಯಿಂದ ೧೦೦ರೂಪಾಯಿವರಗೆ ವಸೂಲು ಮಾಡಿ ವ್ಯಾಪಾರಿ ಗಳಿಗೆ ರಸಿದಿ ನಿಡದೆ ಪುರಸಭೆ ಆದಾಯಕ್ಕೆ ವಂಚನೆ ಮಾಡಿರುವುದು ಕಂಡುಬರುತ್ತದೆ ಕೂಡಲೇ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಕುಬೆರಪ್ಪ ಮತ್ತು ಅವಿನಾಶ್ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ವ್ಯಾಪಾರಸ್ಥರು ಕಿಡಿಕಾರಿದರು ಪುರಸಭೆ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿ
ರಸಿದಿ ನಿಡದೆ ಅಕ್ರಮ ತೆರಿಗೆ ವಸೂಲಿ ಮಾಡುತ್ತಿರುವದು ನಿನ್ನೆ ನಡೆದ ಸಂತೆಯಲ್ಲಿ ಕಂಡುಬಂದಿದೆ.
ವ್ಯಾಪಾರ ಮಾಡುವ ಬಡ ವ್ಯಾಪಾರಿಗಳಿಗೆ ಬದುಕಲು ಬಿಡಿ ಎಂದು ವ್ಯಾಪಾರಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಯಾವುದೇ ಕ್ಯಾರೇ ಎನ್ನದ ಅಧಿಕಾರಿಗಳು ಬಡ ವ್ಯಾಪಾರಿಗಳ ಹೊಟ್ಟೆ ಯ ಮೇಲೆ ಹೊಡೆದು ಅಕ್ರಮವಾಗಿ ತೆರಿಗೆ ವಸೂಲಿ ಮಾಡುತ್ತಿರುವುದು
ಖಂಡನಿಯವಾಗಿದೆ.ರೈತಸಂಘದ ಅಧ್ಯಕ್ಷ ಶಿವಪುತ್ರ ಗೌಡ ತೆರಿಗೆ ವಸೂಲಿ ಮಾಡುವ ಅದಿಕಾರಿಗಳ ವಿರುದ್ಧ ಹೊರಾಟ ಮಾಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.