ಮುಖ್ಯಾಧಿಕಾರಿ ವರ್ಗಾವಣೆ ಖಂಡಿಸಿ ಧರಣಿ ಸತ್ಯಾಗ್ರಹ

(ಸಂಜೆವಾಣಿ ವಾರ್ತೆ)
ಕೆಂಭಾವಿ:ಜು.13: ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ದಾಸನಕೇರಿಯವರ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಸಾಮೂಹಿಕ ದಲಿತ ಸಂಘಟನೆಗಳ ವತಿಯಿಂದ ಬುಧವಾರ ಪುರಸಭೆ ಕಾರ್ಯಲಯದ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.ದಕ್ಷ ಹಾಗೂ ಪ್ರಾಮಾಣಿಕವಾಗಿ ಸೇವೆ ನಿರ್ವಹಿಸುತಿದ್ದ ಅಧಿಕಾರಿಯನ್ನು ವಿನಾಕಾರಣ ವರ್ಗಾವಣೆ ಮಾಡಲಾಗಿದೆ.ಅಭಿವೃದ್ಧಿಪರ ಕೆಲಸ ಮಾಡುತಿದ್ದ ಅಧಿಕಾರಿಯನ್ನು ರಾಜಕೀಯ ಪ್ರೇರಿತವಾಗಿ ವರ್ಗಾವಣೆ ಮಾಡಿದ್ದನ್ನು ಖಂಡನೀಯ ಆದೇಶವನ್ನು ಹಿಂಪಡೆಯುವವರೆಗು ಸಾಮೂಹಿಕ ದಲಿತ ಸಂಘಟನೆಗಳ ವತಿಯಿಂದ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದು ತಿಳಿಸಲಾಗಿದೆ.ಸಂದರ್ಭದಲ್ಲಿ ಬಸವಣ್ಣೆಪ್ಪ.ಲಕ್ಷ್ಮಣ .ಜುಮ್ಮಣ್ಣ ಕಟ್ಟಿಮನಿ.ಧರ್ಮಣ್ಣ ಕಟ್ಟಿಮನಿ.ಶರಣಪ್ಪ.ದೇವಿಂದ್ರಪ್ಪ .ಪರಶುರಾಮ.ಅಲ್ಲಾ ಪಟೇಲ.ರಜಾಕ ಸಾಸನೂರ.ಬಂದೇನವಾಜ .ಇಸ್ಮಾಯಿಲ್.ಮುತ್ತಪ್ಪ ಸೇರಿದಂತೆ ಅನೇಕರಿದ್ದರು