ಮುಖ್ಯಾಧಿಕಾರಿಗಳೆ ನಾಗರೀಕರಿಗೆ ಸಮರ್ಪಕ ನೀರು ಪೂರೈಸಲು ಗಮನ ಹರಿಸಿ

ಲಿಂಗಸುಗೂರು.ಮೇ.೦೩-ಪುರಸಭೆ ವ್ಯಾಪ್ತಿಯಲ್ಲಿ ಹದಿನೈದು ದಿನಗಳಿಂದ ನಾಗರೀಕರಿಗೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಮುಖ್ಯಾಧಿಕಾರಿಗಳೆ ಮುಸುಕಿನ ಗುದ್ದಾಟ ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಲು ಮುಂದಾಗಿ.
ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಆಡಳಿತ ಮಂಡಳಿ ಸದಸ್ಯರ ಜೊತೆ ರಾಜಕೀಯ ಜಿದ್ದಾಜಿದ್ದಿ ನಡೆದಿದೆ. ಜನರ ಅಗತ್ಯ ಸೌಲಭ್ಯಗಳತ್ತ ಕಿಂಚಿತ್ತು ಗಮನ ಹರಿಸದೆ ಹೋಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.
ಮೂರು ದಿನಗಳಿಗೊಮ್ಮೆ ಬಿಡುತ್ತಿದ್ದ ಕುಡಿಯುವ ನೀರು ಈಗ ಐದು ದಿನಕ್ಕೊಮ್ಮೆ ತಿಳಿದಾಗ ಬಿಡುತ್ತಿದ್ದಾರೆ. ಸಿಬ್ಬಂದಿಗಳು ಕೂಡ ಮುಖ್ಯಾಧಿಕಾರಿ, ಆಡಳಿತ ಮಂಡಳಿ ವೈಮನಸ್ಸಿನ ದುರ್ಲಾಭ ಪಡೆದುಕೊಳ್ಳುತ್ತಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಅನುಷ್ಠಾನಗೊಂಡ ಶಾಶ್ವತ ಕುಡಿಯುವ ನೀರಿನ ಯೋಜನೆ ಬಳಸಿಕೊಂಡು ೨೩ ವಾರ್ಡ್‌ಗಳ ಜನರಿಗೆ ನೀರು ಕೊಡುವಲ್ಲಿ ಆಡಳಿತಕ್ಕೆ ಬಂದ ಆಡಳಿತ ಮಂಡಳಿಗಳು, ಶಾಸಕರು ವಿಫಲರಾಗಿದ್ದಾರೆ.
ಜಾಕವೆಲ್ ಹಾಗೂ ಜಲಶುದ್ದೀಕರಣ ಘಟಕದಿಂದ ನೀರೆತ್ತುವ ಪಂಪ್‌ಗಳು ಸರಿಯಾಗಿ ಕಾರ್ಯ ನಿರಗವಹಿಸುತ್ತಿಲ್ಲ. ಸಾಮರ್ಥ್ಯ ಹೆಚ್ಚಿಸಲು ಮುಂದಾಗದೆ ನಿರ್ವಹಣೆ ನಿರ್ಲಕ್ಷ್ಯ ವಹಿದಿದ್ದರಿಂದ ಲಿಂಗಸುಗೂರು ಒಟ್ಟಣದ ಬಹುತೇಕ ಬಡಾವಣೆಗಳು ಶಾಶ್ವತ ಕುಡಿಯುವ ನೀರು ಬಿಸಿಲ್ಗುದುರೆಯಾಗಿದೆ.
ಪ್ರಸಕ್ತ ವರ್ಷ ಕುಡಿಯುವ ನೀರಿನ ಕೆರೆ ಭರ್ತಿಯಾಗಿದೆ. ಪಂಪ್‌ಗಳು ಸರಿಯಾಗಿ ನೀರು ಎತ್ತದೆ ಹೋಗಿದ್ದರಿಂದ ಬೇಸಿಗೆಯಲ್ಲಿ ಕೊಡ ನೀರಿಗಾಗಿ ಪರದಾಡುವ ದಾರುಣ ಸ್ಥಿತಿ ಬಂದೊದಗಿದೆ.
ಆಡಳಿತ ಮಂಡಳಿ ನೀರಿನ ಸಮಸ್ಯೆ ಕುರಿತು ತುರ್ತು ಸಭೆ ಕರೆಯಲು ತಿಳಿಸಿದರು ಮುಖ್ಯಾಧಿಕಾರಿ ಸ್ಪಂದಿಸುತ್ತಿಲ್ಲ. ಆಡಳಿತ ಮಂಡಳಿ ಸದಸ್ಯರಿಗೆ ಪರ್ಯಾಯ ಶಕ್ತಿಯಾಗಿ ಪ್ರತಿ ಹಂತದಲ್ಲಿ ಪರೋಕ್ಷವಾಗಿ ವಿರೋಧ ಮಾಡುತ್ತಿರುವ ಬಗ್ಗೆ ಸದಸ್ಯರು ಋಷಿ ಹೋಗಿದ್ದಾರೆ. ಗಂಡವಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ದುಸ್ಥಿತಿ ಪುರಸಭೆ ಜನರಿಗೆ ಬಂದಿದೆ.
ಮುಖ್ಯಾಧಿಕಾರಿಗಳು ಆಂತರಿಕ ವೈಮನಸ್ಸು ದೂರಿಕರಿಸಿ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸದೆ ಹೋದಲ್ಲಿ ಜನರೆ ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಬರಬಹುದು. ಅಂತಹ ಸ್ಥಿತಿ ಬರುವ ಮುಂಚೆ ಎಚ್ಚೆತ್ತುಕೊಂಡು ಸಮಸ್ಯೆಗೆ ಸ್ಪಂದಿಸಿ ಎಂಬುದು ಸಂಘ ಸಂಸ್ಥೆಗಳ ಅಂಬೋಣ
ಕೂಡಲೇ ಮುಖ್ಯಾಧಿಕಾರಿಗಳು ಸಾರ್ವಜನಿಕರಿಗೆ ಸಮಪರ್ಕವಾಗಿ ಜನಗಳಿಗೆ ನೀರು ಹರಿಸಲು ಗಮನ ಹರಿಸಿ ವಾರ್ಡ್‌ಗಳ ಜನರು ಪುರಸಭೆ ಮುತ್ತಿಗೆ ಹಾಕಲು ಮುಂದಾಗಬೇಕಾಗುತ್ತದೆ ಮತ್ತು ನಗರದಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಾಗೂ ಹೊಗಳಿಗೆ ಪುರಸಭೆ ಮುಖ್ಯಾಧಿಕಾರಿಗಳು ಜವಾಬ್ದಾರಿಯಾಗುತ್ತಾರೆ. ಎಂದು ಮಾನವ ಹಕ್ಕುಗಳ ಜಿಲ್ಲಾಧ್ಯಕ್ಷ ಜಾಫರ್ ಹುಸೇನ್ ಪೂಲ್ ವಾಲೆ ಹಾಗೂ ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮೈಬೂಬಪಾಶ ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.