ಮುಖ್ಯಾಧಿಕಾರಿಗಳೆ ಕೊಳಚೆ ನಿವಾಸಿಗಳತ್ತ ಕಣ್ತೆರದು ನೋಡಿ

ಲಿಂಗಸುಗೂರು.ಮೇ.೦೨- ಪುರಸಭೆ ವ್ಯಾಪ್ತಿ ಪ್ರದೇಶದಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ನೀಡುವತ್ತ ಮುಖ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರ್ಡ ನಂಬರ್ ೧೨ ಸೇರಿದಂತೆ ಕೊಳಚೆ ಪ್ರದೇಶಗಳಲ್ಲಿ ಸಾಮೂಹಿಕ ಶೌಚಾಲಯ ಇಲ್ಲದೆ ಮುಳ್ಳುಕಂಟಿ ಪೊದೆಗಳ ಮಧ್ಯೆ ಬಯಲಿಗೆ ಹೋಗುವ ಅನಿವಾರ್ಯತೆ ಎದುರಾಗಿದೆ.
ಪುರಸಭೆ ಮುಖ್ಯಾಧಿಕಾರಿ, ಸದಸ್ಯರನ್ನು ಭೇಟಿ ಮಾಡಿದರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮುಖ್ಯಾಧಿಕಾರಿ ಅಧ್ಯಕ್ಷರಸ್ಥ, ಅಧ್ಯಕ್ಷೆ ಮುಖ್ಯಾಧಿಕಾರಿಗಳತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಳಚೆ ಪ್ರದೇಶಗಳಿಗೆ ಶೌಚಾಲಯ, ರಸ್ತೆ, ಚರಂಡಿ, ಶುದ್ದ ಕುಡಿಯುವ ನೀರು, ವಿದ್ಯುತ್ ದೀಪ ಇತರೆ ಸೌಲಭ್ಯಮರೀಚಿಕೆ ಆಗಿವೆ. ಈ ಬಗ್ಗೆ ಗಮನ ಹರಿಸದಿದ್ದರೆ ಬೀದಿಗಳಿದು ಹೋರಾಟ ನಡೆಸುತ್ತೇವೆ ಎಂದು ಮಹಿಳೆಯರು ಸಾಮೂಹಿಕವಾಗಿ ತಿಳಿಸಿ.
ಮುಖ್ಯಾಧಿಕಾರಿಗಳ ವಿರುದ್ಧ ಕಿಡಿಕಾರಿದರು ಒಟ್ಟಿನಲ್ಲಿ ೧೨ನೇ ವಾರ್ಡ್ ನಲ್ಲಿ ಇರುವ ಜನಗಳಿಗೆ
ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅದಿಕಾರಿಗಳ ವಿಫಲವಾಗಿದ್ದಾರೆ ಮಹಿಳೆಯರು ಬಗ್ಗೆ
ಕಾಳಜಿ ವಹಿಸದೆ ಮುಖ್ಯಾಧಿಕಾರಿ ಆಡಳಿತ ಮಂಕಾಗಿದೆ ಮುಖ್ಯವಾಗಿ ಮಹಿಳಾ ಶ್ವೌಚಾಲಯ ಇಲ್ಲದಿರುವುದು ಖೇದಖರ ಸಂಗತಿಯಾಗಿದೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡ್ ಗಳಲ್ಲಿ ಮಹಿಳಾ ಶೌಚಾಲಯ ಇದ್ದರು ಇಲ್ಲಿ
ದಂತಾಗಿದೆ . ಶೌಚಾಲಯ ಹೆಸರಿನಲ್ಲಿ.ಹಣ ದುರ್ಬಳಕೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ ಇದರಿಂದಾಗಿ ಅದಿಕಾರಿಗ
ಳಿಂದಲೆ ಮಹಿಳಾ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಬಂದ ಅನುದಾನ ಕೋಳ್ಳೆ ಹೊಡೆದು
ಮಹಿಳೆಯರಿಗೆ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ ಎಂದು ತಿಳಿದುಬರುತ್ತದೆ ಕೂಡಲೇ
ಮೇಲಾಧಿಕಾರಿಗಳು ಶೌಚಾಲಯ ನಿರ್ಮಾಣದ
ಹೆಸರಿನಲ್ಲಿ ಹಣ ಲೂಟಿ ಮಾಡಿದ ಅದಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಮತ್ತು ಸೂಕ್ತ ತನಿಖೆ ನಡೆಸಬೇಕೆಂದು ಮೈಬೂಬಪಾಶ ಆಗ್ರಹಿಸಿದ್ದಾರೆ