ಮುಖ್ಯಾಧಿಕಾರಿಗಳಿಂದ ಉಪಮುಖ್ಯಮಂತ್ರಿ ಕಣ್ಣೊರೆಸುವ ಕುತಂತ್ರ

ಮುಖ್ಯಾಧಿಕಾರಿ ಚದುರಂಗದಾಟಕ್ಕೆ ಜಿಲ್ಲಾ-ತಾಲ್ಲೂಕು ಆಡಳಿತ ಫೀದಾ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ

 • ಲಿಂಗಸುಗೂರು.ಮೇ.೧೭-ಉಪ ಮುಖ್ಯಮಂತ್ರಿ ಅಗಮಿಸುವ ನಿರ್ಗಮಿಸುವ ಮುಖ್ಯ ರಸ್ತೆಗಳ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಸಿಂಪಡಣೆ ಮೂಲಕ ಕಣ್ಣೋರೆಸುವ ಕುತಂತ್ರಕ್ಕೆ ಪಟ್ಟಣದ ನಾಗರೀಕರು ಅಚ್ಚರಿಗೊಂಡಿದ್ದಾರೆ.
  ಸೋಮವಾರ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬರುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಎಲ್ಲಿಲ್ಲದ ಸಿದ್ಧತೆ ಮುಖ್ಯರಸ್ತೆಗಳಲ್ಲಿ ಕಾಣಬಹುದಾಗಿದೆ.
  ಪುರಸಭೆ ವ್ಯಾಪ್ತಿ ೨೩ ವಾರ್ಡ್ ಚರಂಡಿ ನೀರು ರಸ್ತೆಗೆ ಹರಿದು ದುರ್ನಾತ ಬೀರುತ್ತಿದೆ. ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛತೆ, ರಾಸಾಯನಿಕ ಸಿಂಪಡಣೆಗೆ ಸದಸ್ಯರು, ಜನತೆ ಮನವಿ ಮಾಡಿದರು ಸ್ಪಂದಿಸುತ್ತಿಲ್ಲ.
  ತಾಲೂನಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿ ಆಗಿದ್ದರು ಕೂಡ ವಾರ್ಡ್‌ಗಳತ್ತ ಸಿಬ್ಬಂದಿ ಕಣ್ಣು ಹಾಯಿಸುತ್ತಿಲ್ಲ. ಮುಖ್ಯಾಧಿಕಾರಿ ಇದ್ಯಾವುದಕ್ಕೂ ಗಮನ ಕೊಡದೆ ದಂಡ ವಸೂಲಿ ಪ್ರಮುಖ ಅಸ್ತವನ್ನಾಗಿಸಿಕೊಂಡಿದ್ದಾರೆ.
  ಮುಖ್ಯಾಧಿಕಾರಿಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಮುಂದೆ ಪ್ರದರ್ಶಿಸುವ ನಾಟಕೀಯ ಬೆಳವಣಿಗೆ, ತಾತ್ಕಾಲಿಕ ವ್ಯವಸ್ಥೆಗಳಿಗೆ ಮಾರುಹೋಗಿ ಫೀದಾ ಆಗಿದ್ದಾರೆ.
  ರಾಜಕಾರಣಿಗಳು ತಮ್ಮ ನಾಯಕರು ಬರುವಾಗ ಬ್ಯಾನರ್, ಬಟ್ಟಿಂಗ್ ಹಾಕಿ ಫೊಜು ನೀಡುವಂತೆ ಮುಖ್ಯಾಧಿಕಾರಿ ಉಪಮುಖ್ಯಮಂತ್ರಿ ಬಂದು ಹೋಗುವ ರಸ್ತೆಗಳ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಹಾಕಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿರುವುದನ್ನು ಸದಸ್ಯರು, ಕೊಳಚೆ ಪ್ರದೇಶದ ಜನತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತ ಕೊಳಚೆ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಮುಖ್ಯಾಧಿಕಾರಿಗಳು ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲು ವಿಫಲರಾಗಿದ್ದಾರೆ ಕೇವಲ ಮಂತ್ರಿಗಳು ಬಂದು ಹೊಗುವದಕ್ಕೆ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿರವರು ಎಲ್ಲಿಲ್ಲದ ಪ್ರೀತಿ ತೊರಿಸಲುಮುಂದಾಗಿರುವದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ ರಾಜಕೀಯ ಮಾಡುವ ಮುಖ್ಯಾಧಿಕಾರಿಗಳು ವಿರುದ್ಧ ಪ್ರಗತಿ ಪರ ಸಂಘಟನೆಗಳು ತಿವ್ರವಾಗಿ ಖಂಡಿಸಿದ್ದಾರೆ. ಇದರಿಂದಾಗಿ ಪಟ್ಟಣದ ತುಂಬೆಲ್ಲ ಕಲುಷಿತಗೊಂಡ ಮಲಿನ ವಾಗಿದೆ. ವಾರ್ಡ್‌ಗಳಲ್ಲಿ ಬ್ಲಿಚೀಂಗ್ ಪೌಡರ್ ಹಾಕದೆ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಪುರಸಭೆ ಅಧಿಕಾರಿಗಳಿಗೆ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮೈಬೂಬಪಾಶ ಬಾಬಾಜಾನಿ ಸೇರಿದಂತೆ ಇತರರು ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.