
ಡಾ. ಶಿವಮೂರ್ತಿ ಶಿವಾಚಾರ್ಯ ದೈವದೀನ
ಚಂದ್ರಶೇಖರ ಮದ್ಲಾಪೂರ-ಸಂಜೆವಾಣಿ
ಮಾನ್ವಿ,ಮಾ.೧೮- ಸುಪ್ರಸಿದ್ಧ ಕಲ್ಮಠದ ಪೂಜ್ಯ ಶ್ರೀ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು (೭೭) ವಯೋಸಹಜದಿಂದ ದೈವದೀನರಾಗಿದ್ದು ಇವರ ಅಂತ್ಯಕ್ರಿಯೆಯು ಇಂದು ಸಂಜೆ ಕಲ್ಮಠ ಮಠದ ಒಳ ಆವರಣದಲ್ಲಿ ಎಲ್ಲ ಪೂಜ್ಯರ ಸಮ್ಮುಖದಲ್ಲಿ ಪೂಜೆ ವಿಧಿವಿಧಾನಗಳೊಂದಿಗೆ ಜರುಗಲಿದೆ ಎಂದು ಶಾಸಕ ವೆಂಕಟಪ್ಪ ನಾಯಕ ತಿಳಿಸಿದರು.
ಶುಕ್ರವಾರ ಸಂಜೆಯ ಸಮಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ದೈವದೀನರಾದ ಇವರ ಪಾರ್ಥಿವ ಶರೀರವನ್ನು ರಾತ್ರಿಯಿಡೀ ಮಠದಲ್ಲಿ ಕುಟುಂಬಸ್ಥರು ಹಾಗೂ ಅನೇಕ ಮಠಾದೀಶರು ಪೂಜೆ ಸಲ್ಲಿಸಿದರು. ನಂತರ ಶನಿವಾರ ಮುಂಜಾನೆ ಭವ್ಯ ಮೆರವಣಿಗೆ ಮೂಲಕ ಪ್ರಮುಖವಾದ ವೃತ್ತಗಳ ಮೂಲಕ ಕಲ್ಮಠದ ಧ್ಯಾನ ಮಂದಿರದಲ್ಲಿ ಸಾರ್ವಜನಿಕ ಹಾಗೂ ಭಕ್ತಾದಿಗಳು ದರ್ಶನದ ವ್ಯವಸ್ಥೆಯನ್ನು ಕಲ್ಲಿಸಿಲಾಗಿತ್ತು.
ನಂತರ ಮತ್ತೆ ಮೆರವಣಿಗೆಯ ಮೂಲಕ ಸಂಜೆ ನಾಲ್ಕು ಘಂಟೆಯ ನಂತರ ಕಲ್ಮಠದ ಒಳ ಆವರಣದಲ್ಲಿ ಶ್ರೀಗಳು ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುತ್ತದೆ.
ಬಾಕ್ಸ್ ಐಟಂ ೧
ಕಲ್ಮಠದ ವಿದ್ಯಾಸಂಸ್ಥೆ ಸ್ಥಾಪನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದ ಮಹಾಸ್ವಾಮಿಗಳ ಲಿಂಗೈಕ್ಯರಾಗಿರುವ ವಿಷಯ ತಿಳಿದ ಸಂಸ್ಥೆಯ ಶಿಕ್ಷಕರು, ಆಡಳಿತ ಮಂಡಳಿ ಸಿಬ್ಬಂದಿಗಳು,ವಿದ್ಯಾರ್ಥಿಗಳು ಮೌನಾಚರಣೆಯ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು..
ಬಾಕ್ಸ್ ಐಟಂ ೨
ಶಿಕ್ಷಣ ಪ್ರೇಮಿ, ಧರ್ಮ ರಕ್ಷಕಕರು ಕಲ್ಮಠದ ಪೀಠಾಧ್ಯಕ್ಷರು ಕಲ್ಮಠ ಎನ್ನುವ ಬಹುದೊಡ್ಡ ಮಟ್ಟದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಶ್ರೀ ಗುರು ಮಹಾಸ್ವಾಮಿಗಳು ದೈನಂದಿನರಾದ ಕಾರಣ ತಾಲೂಕಿನ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ..
ಎಚ್ ಶರ್ಪುದ್ದೀನ್
ಅಧ್ಯಕ್ಷ ಖಾಸಗಿ ಶಿಕ್ಷಣ ಸಂಸ್ಥೆ ಮಾನವಿ
ಬಾಕ್ಸ್ ಐಟಂ ೩
ಮುಕ್ತಗುಚ್ಛ ಕಲ್ಮಠದ ಹಿರಿಯ ಶ್ರೀ ಷ/ಬ್ರ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯರಾದ ವಿಷಯ ತಿಳಿದು ಹಾಲ್ವಿ,ಯದ್ದಲದೊಡ್ಡಿ,ಚಿಕಲಪರ್ವಿ, ಕರೆಗುಡ್ಡ, ಮೈಸೂರು,ಬಳಗನೂರು,ಹಚ್ಚೊಳ್ಳಿ,ಮಠಮಾರಿ,ಸುಲ್ತಾನಪೂರ, ಸೇರಿದಂತೆ ಮಾನವಿ,ಸಿಂಧನೂರು, ರಾಯಚೂರು, ಗ್ರಾಮೀಣ, ದೇವದುರ್ಗ, ಮಸ್ಕಿ, ಲಿಂಗಸ್ಗೂರು, ಹಟ್ಟಿ, ಸಿರವಾರ, ಕವಿತಾಳ,ಸೇರಿದಂತೆ ರಾಜ್ಯದ ಅನೇಕ ಭಾಗದಿಂದ ಹಿಂದು,ಕ್ರೈಸ್ತ,ಮುಸ್ಲಿಂ ಧರ್ಮಗುರುಗಳು, ಭಕ್ತಾದಿಗಳು, ರಾಯಚೂರು ನಾಯಕರು, ಸೇರಿದಂತೆ ಸಾವಿರಾರು ಜನರು ಆಗಮಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ರಾಜಾ ವೆಂಕಟಪ್ಪ ನಾಯಕ
ಶಾಸಕರು ಮಾನವಿ..
ಬಾಕ್ಸ್ ಐಟಂ ೪
ಶ್ರೀ ವಿರೂಪಾಕ್ಷಿ ಶಿವಾಚಾರ್ಯ ಮಹಾಸ್ವಾಮಿಗಳು, ಕುಟುಂಬಸ್ಥರ ಸೇರಿದಂತೆ ಸಾವಿರಾರು ಮಠದ ಭಕ್ತರು ಹಾಗೂ ಶ್ರೀಗಳ ಅನುಯಾಯಿಗಳು ಪ್ರಮುಖವಾಗಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಆಡಳಿತ ಮಂಡಳಿಯರು, ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಶ್ರೀಗಳ ಅಗಲಿಕೆಯನ್ನು ನೆನೆದು ದುಃಖಭರೀತರಾಗಿ ಅವರನ್ನು ಸ್ಮರಿಸುತ್ತಿರುವ ಸನ್ನಿವೇಶಗಳು ಸಮಾನ್ಯವಾಗಿ ಕಂಡು ಬರುತ್ತಿದ್ದರು..