ಮುಖ್ಯವಾಹಿನಿಗೆ ಬರಲು ಶಿಕ್ಷಣ ಒಂದೇ ಆಯುಧ

ಮೈಸೂರು:ಜ:10: ಬಡತನ, ಅನಕ್ಷರತೆ, ಮೂಡನಂಬಿಕೆಗೊಳಗಾಗುತ್ತಿರುವ ನಮ್ಮ ಸಮಾಜದಲ್ಲಿ ನಾವು ಮುಖ್ಯವಾಹಿನಿಗೆ ಹೋಗಬೇಕಾದರೆ ನಮಗೆ ಬೇಕಾಗಿರುವ ಒಂದೇ ಆಯುಧ ಶಿಕ್ಷಣ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಅಧಿಕಾರಿ ಜಗನ್ನಾಥ್‍ಸಾಗರ್ ತಿಳಿಸಿದರು.
ನಗರದ ಕಲಾ ಮಂದಿರದಲ್ಲಿ ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘ ಹಮ್ಮಿಕೊಂಡಿದ್ದ 25ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ಕ್ಯಾಲೆಂಡರ್ ಬಿಡುಗಡೆ, ನಿವೃತ್ತ/ಬಡ್ತಿ ಹೊಂದಿದ ನೌಕರರು, ಸಾಧಕರು ಮತ್ತು ಸಮಾಜ ಸೇವಕರಿಗೆ ಸನ್ಮಾನ ಹಾಗೂ ನುಡಿನಮನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ದೇಶದಲ್ಲಿನ ಬಡತನ-ಮೂಡನಂಬಿಗಳನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಶಕ್ಷಿತರಾಗಬೇಕು. ಏಕೆಂದರೆ ಯಾರು ನಮ್ಮಿಂದ ದೋಚಲಾರದ ಏಕೈಕ ಆಸ್ತಿ ಎಂದರೆ ಅದುವೆ ಶಿಕ್ಷಣ. ಶಕ್ಷಣ ಒಂದಿದ್ದರೆ ಈ ಪ್ರಪಂದಲ್ಲಿ ಎಲ್ಲಿ ಬೇಕಾದರೂ ನಿಶ್ಚಿಂತೆಯಿಂದ ಜೀವನ ನಡೆಸಬಹುದು. ಮತ್ತು ಶಿಕ್ಷಣಕ್ಕೆ ಇರುವ ಗೌರವ ಅಗಾದವಾದ್ದು. ಜೀವನದಲ್ಲಿ ಪ್ರಗತಿಹೊಂದಲು ನಮ್ಮೆಲ್ಲರಿಗಿರು ಒಂದೇ ಆಯುಧವೆಂದರೆ ಅದು ಶಿಕ್ಷಣ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಶಿಕ್ಷಣದಲ್ಲಿ ಅವರಿಗೆ ಪ್ರೋತ್ಸಾಹಿಸಬೇಕು. ಯಾವುದೇ ಕಾರಣಕ್ಕು ಅವರ ಶಿಕ್ಷಣ ಕುಂಠಿತವಾಗದಂತೆ ನೋಡಿಕೊಳ್ಳಬೇಕು. ಈ ಸಂಘವು ಕಳೆದ 25 ವರ್ಷಗಳಿಂದ ಪ್ರತಿಭಾವಂತರನ್ನು ಗುರುತಿ ಗೌರವಿಸುವ ಕೆಲಸದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವರ್ಷಗಳ ಹಿಂದೆ ಎಸ್‍ಎಸ್‍ಎಲ್‍ಸಿನಲ್ಲಿ ಉತ್ತೀರ್ಣರಗಿ 50% ಪಡೆದಿರುವವರ ಮನೆ ಮನೆಗೆ ಹೋಗಿ ವೇದಿಕೆಯ ಸನ್ಮಾನ ಕಾರ್ಯಕ್ರಮಕ್ಕೆ ಬನ್ನಿ ನಿಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿ, ಸರ್ಟಿಫಿಕೆಟ್ ಪಡೆಯಿರಿ ಎಂದು ಕರೆದುಕೊಂಡು ಬರುವುದೇ ಬಹಳ ಕಷ್ಟದ ಕೆಲಸವಾಗಿತ್ತು. ವೇದಿಕೆಯ ಮೇಲೆ ಬರುವ ಪರಿಪಾಟಲೇ ಇರುತ್ತಿರಲಿಲ್ಲ, ಈ ರೀತಿ ದೊಡ್ಡ ದೊಡ್ಡ ವೇದಿಕೆಗಳು ಇರಲಿಲ್ಲ. ಕಳೆದ 8-10 ವರ್ಷಗಳ ಹಿಂದೆ ಪರೀಕ್ಷೆಗಳಲ್ಲಿ 60% ಪಡೆದ ಹುಡುಗರು ಕೇವಲ 20 ಮಂದಿಯೂ ಸಿಗುತ್ತಿರಲಿಲ್ಲ. ಆದರೆ ಕಳೆದ 2-3 ವರ್ಷಗಳಿಂದ 85%ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 200ಕ್ಕೂ ಹೆಚ್ಚಾಗಿದ್ದು, ಕೆಲವರು ರ್ಯಾಂಕ್ ಮಟ್ಟಕ್ಕೂ ತಲುಪಿದ್ದಾರೆ. ಇನ್ನೊಂದು ವಿಶೇಷವೇನೆಂದರೆ ಈ ಹಿಂದೆ ನಾವು ಪದವೀಧರರಿಗೆ ಯಾವ ಪ್ರೋತ್ಸಾಹ ಸನ್ಮಾನಗಳನ್ನು ಸಹ ಮಾಡುತ್ತಿರಲಿಲ್ಲ. ಆದರೆ ನಮ್ಮ ಮಕ್ಕಳು ಬಿಎ, ಬಿಎಸ್ಸಿ, ಎಂಎ, ಎಂಎಸ್ಸಿಗಳಲ್ಲಿ ಚಿನ್ನದ ಪದಕಗಳನ್ನು ಗಳಿಸುತ್ತಿದ್ದು ಆ ದೊಡ್ಡ ಸಾಧನೆಯನ್ನು ಪರಿಗಣಿಸಿ ಅವರನ್ನೂ ಸಹ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಕಳೆದ 3 ವರ್ಷಗಳಲ್ಲಿ ಉಪ್ಪಾರ ಸಮಾಜಕ್ಕೆ ಈ ಭಾಗದಲ್ಲಿ 3 ಜನಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ದೊರೆತಿದೆ. ಸಾಂಸ್ಕøತಿದಲ್ಲಿಯೂ ಸಹ ನಾವು ಹಿಂದುಳಿದಿಲ್ಲ.
ಕಾರ್ಯಕ್ರಮದ ಉದ್ಘಾಟನೆ ಮತ್ತು ದಿವ್ಯಸಾನಿಧ್ಯವನ್ನು ಹೊಸದುರ್ಗ ಭಗೀರಥ ಪೀಠ ಮಠದ ಶ್ರೀ ಶ್ರೀ ಶ್ರೀ ಜಗದ್ಗುರು ಡಾ. ಪುರುಷೋತ್ತಮಾನಂದಪುರ ಮಹಾಸ್ವಾಮಿಗಳು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಳವಳ್ಳಿ ತಾಲ್ಲೂಕಿನ ಅಯ್ಯನ ಸರಗೂರು ಮಠದ ಶ್ರೀ ಶ್ರೀ ಶ್ರೀ ಚಿನ್ನಸ್ವಾಮೀಜಿ, ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ಅಧ್ಯಕ್ಷರು ಹಾಗೂ ಸಹಾಯಕ ತೋಟಗಾರಿಗೆ ಅಧಿಕಾರಿ ಆರ್. ಸೋಮಶೇಖರ್, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಗೌರವಾಧ್ಯಕ್ಷ ತುರ್ಚಘಟ್ಟ ಎಸ್. ಬಸವರಾಜು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಹನುಮಂತಶೆಟ್ಟಿ, ಕಾರ್ಯಾಧ್ಯಕ್ಷ ಪಿ.ಎಸ್. ವಿಷಕಂಠಯ್ಯ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ಎನ್. ವಿನಯ್‍ಕುಮಾರ್, ಮೈಸೂರು ಜಿಲ್ಲಾ ಪಂಚಾಯಿತಿ ಸದಸ್ಯರಾದ ಲತಾಸಿದ್ದಶೆಟ್ಟಿ, ಚಾಮರಾಜನಗರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎ. ಮಹದೇವಶೆಟ್ಟಿ, ಚಾಮರಾಜನಗರ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಸದಸ್ಯ ವೈ.ಜೆ. ಯೋಗೀಶ್, ಚಾಮರಾಜನಗರ ಉಪ್ಪಾರ ಸಮಾಜದ ಮುಖಂಡರಾದ ಮಂಗಲಶಿವಕುಮಾರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ರೂಪಯೋಗೇಶ್‍ಬಾಬು, ದಾವಣಗೆರೆ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ತಿಪ್ಪಣ್ಣ, ಕುವೆಂಪುನಗರ ಗುತ್ತಿಗೆದಾರ ಗಂಗಯ್ಯ, ಚಿತ್ರದುರ್ಗದ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಮೂರ್ತಿ ಇನ್ನಿತರ ಗಣ್ಯರಿದ್ದರು.