ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪ್ರಭುಲಿಂಗ ಅಭಿನಂದನೆ

ಲಿಂಗಸುಗೂರ,ಜು.೦೯-
ಸೆಕ್ಷನ್ ೭(ಡಿ) ರದ್ದುಗೊಳಿಸುವುದಾಗಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಅಭಿನಂದನೆ ತಿಳಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಭುಲಿಂಗ ಮೇಗಳಮನಿ ಏನಿದು ಸೆಕ್ಷನ್ ೭(ಡಿ) ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು ಎಂದು ಎಸ್.ಸಿ/ಎಸ್.ಪಿ/ಟಿ.ಎಸ್.ಪಿ ಕಾಯ್ದೆ ಹೇಳುತ್ತದೆ.
ಆದರೆ ಅದೇ ಕಾಯ್ದೆಯಲ್ಲಿನ ಸೆಕ್ಷನ್ ೭(ಡಿ) ದುರುಪಯೋಗ ಮಾಡಿಕೊಂಡು ಇತರೆ ಸಾಮಾನ್ಯ ಯೋಜನೆಗಳಿಗೆ ಪರಿಶಿಷ್ಟರ ಹಣವನ್ನು ದುರುಪಯೋಗ ಮಾಡಿಕೊಂಡು ರಸ್ತೆ ನೀರಾವರಿಯಂತಹ ಜನರಲ್ ಕಾರ್ಯಕ್ರಮಗಳಿಗೂ ಪರಿಶಿಷ್ಟರ ಅನುದಾನ ಹರಿದುಹೋಗುತ್ತಿತ್ತು. ಹೆಸರಿಗೆ ಮಾತ್ರ ಪರಿಶಿಷ್ಟರಿಗೆ ಮೀಸಲಾಗುತ್ತಿತ್ತು.
೨೦೧೧ರ ಜನಗಣಿತಿಯ ಅನ್ವಯ,ಪರಿಶಿಷ್ಟರ ಜನಸಂಖ್ಯೆಗನುಗುಣವಾಗಿ ಬಜೆಟಿನಲ್ಲಿ ಅನುದಾನ ಮೀಸಲಾಗಬೇಕು ಎಂಬ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡದವರ ಉಪಯೋಜನೆಯ ಕಾಯ್ದೆಯನ್ನು ೨೦೧೩ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಜಾರಿಗೆ ತಂದಿದ್ದರು. ಅದರ ಅನ್ವಯ ಪ್ರತಿ ಇಲಾಖೆಯು ಶೇಕಡಾ ೨೪.೧ರಷ್ಟು ಅನುದಾನವನ್ನು ಪರಿಶಿಷ್ಟರಿಗೆ ಮೀಸಲಿಡಬೇಕು. ಆದರೆ, ಅದೇ ಕಾಯ್ದೆ ಸೆಕ್ಷನ್ ೭(ಡಿ) ಪರಿಶಿಷ್ಟರಲ್ಲದವರು ಫಲಾನುಭವಿಗಳಾಗುವ ಯೋಜನೆಗಳಿಗೆ ಅನುದಾನ ದುರ್ಬಳಕೆಯಾಗ ತೊಡಗಿತು. ಈ ಸೆಕ್ಷನ್ ರದ್ದುಗೊಳಿಸಿ ದಲಿತರ ಹಣ ದುರ್ಬಳಕೆ ಆಗುವುದನ್ನು ತಡೆಯಬೇಕೆಂದು ದಲಿತ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಆಗ್ರಹಿಸುತ್ತಿದ್ದೇವು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಸ್.ಸಿ./ಎಸ್.ಟಿ./ಟಿ.ಎಸ್.ಪಿ. / ಅನುದಾನವನ್ನು ಕಡಿತಮಾಡುವುದರ ಜೊತೆಗೆ ಸೆಕ್ಷನ್ ೭(ಡಿ)ಯ ದುರುಪಯೋಗ ಹೆಚ್ಚಾಯಿತು. ಈಗ ಮತ್ತೆ ಅಧಿಕಾರಕ್ಕೆ ಏರಿರುವ ಕಾಂಗ್ರೆಸ್ ಪಕ್ಷ ಈ ದುರುಪಯೋಗ ತಡೆಯಲು ಮುಂದಾಗಿರುವದು ಸ್ವಾಗತಾರ್ಹ.
ಕರ್ನಾಟಕದ ಮುಖ್ಯಮಂತ್ರಿ ತಾವು ಮಂಡಿಸಿದ ಬಜೆಟ್‌ನಲ್ಲಿ ಎಸ್.ಸಿ./ಎಸ್.ಪಿ./ಟಿ.ಎಸ್.ಪಿ. /ಆಡಿ ಅನುದಾನವನ್ನು ಹಚ್ಚಿಸಿದ್ದಾರೆ. ಬಿ.ಜೆ.ಪಿ.ಸರಕಾರ ಕಳೆದ ಬಜೆಟ್ ನಲ್ಲಿ ೩೦ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಪ್ರತಿ ವರ್ಷವು ಬಜೆಟ್ ಗಾತ್ರ ಹೆಚ್ಚಾಯಿತೇ ಹೊರತು ಪರಿಶಿಷ್ಟರಿಗೆ ಮೀಸಲಾಗಬೇಕಾದ ಅನುದಾನದ ಗಾತ್ರ ಹೆಚ್ಚಳ ಕಂಡಿರಲಿಲ್ಲಾ. ಈಗ ಕಾಂಗ್ರೆಸ್ ಪಕ್ಷದ ಪ್ರಕಾರ ಈ ಅನುದಾನದ ಗಾತ್ರವನ್ನು ರೂ.೩೪,ಸಾವಿರ ಕೋಟಿಗೆ ಅನುದಾನ ಏರಿಕೆ ಮಾಡಿ ನಿಜವಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನಿಲುವನ್ನು ಪ್ರದರ್ಶನ ಮಾಡಿದೆ.
ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಅದಕ್ಕಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು ತಿಳಿಸಿದರು.
ದ.ಸ.ಸ. ಪ್ರಭುಲಿಂಗ ಮೇಗಳಮನಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪರಶುರಾಮ, ಗುಡಿಜಾವೂರ ಮಾಳಪ್ಪಗೌಡ, ಗುಡಿಜಾವೂರ ಯಲ್ಲಪ್ಪ, ಹಾಲಭಾವಿ ಹುಸೇನಪ್ಪ, ತರಕಾರಿ ಕೊರೆಪ್ಪ ಜಾವೂರ, ರಾಮು ಕಳ್ಳಿಲಿಂಗಸಗೂರು, ಪತ್ರಿಕಾ ಪ್ರಕಟಣೆ ಮಾಹಿತಿ ನೀಡಿದರು.