ಕಲಬುರಗಿ,ಜು.7:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 14ನೇ ಬಜೆಟ್ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು,ಆದ್ರೆ, ಇದೊಂದು ನಿರಾಶಾದಾಯಕ ಬಜೆಟ್ ಆಗಿದ್ದು, ಬಹುಶಃ ಕಾಂಗ್ರೆಸ್ ನ ಗೆಳೆಯರಿಗೂ ಈ ಬಜೆಟ್ ಖಂಡಿತವಾಗಿಯೂ ನಿರಾಸೆ ಮೂಡಿಸಿದೆ. ಇದರಲ್ಲಿ ಆರ್ಥಿಕ ಮುನ್ನೋಟದ ಕೊರತೆ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯ ಅವರ ಶ್ರಮ ಬುದ್ದಿವಂತಿಕೆಯನ್ನು ಬಜೆಟ್ಗೆ ಉಪಯೋಗಿಸಿಲ್ಲ.
ದಲಿತರಿಗೆ ಯಾವುದೇ ವಿಶೇಷ ಕೊಡುಗೆ ಇಲ್ಲ.
ಹಿಂದಿನ ಬಿಜೆಪಿ ಸರ್ಕಾರದ ಹಾಗೂ ಪ್ರಸ್ತುತ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಈ ಬಜೆಟ್ ಮಾಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ ಅಭಿಪ್ರಾಯ ಪಟ್ಟಿದ್ದಾರೆ.