ಕಲಬುರಗಿ:ಜೂ.5: ಜನತೆಗೆ ಮೂಲ ಸೌಲಭ್ಯಗಳು ಸಿಗುವಂತಾಗಲು ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಬೇಕು ಏಕೆಂದರೆ ಉಚಿತ ಬಸ್‍ಗಳ ಘೋಷಣೆಯಿಂದ ಜೆಸ್ಕಾಂ ಸಿಬ್ಬಂದಿ,ಸಾರಿಗೆ ಕಂಡಕ್ಟರ್ ಗಳ ಜೊತೆಗೆ ಜನತೆ ಸಂಘರ್ಷ ನಡೆಯುತ್ತಿದ್ದು ಇದನ್ನು ತಡೆಯಲು ಜನತಾ ದರ್ಶನ ನಡೆಸಬೇಕೆಂದು ಕನ್ನಡಪರ ಹೋರಾಟಗಾರ ಆನಂದ ತೆಗನೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಸರಕಾರಕ್ಕೆ ಜನತೆ ನೀರಿಕ್ಷೆಗೆ ಮೀರಿ ಬೆಂಬಲ ಕೊಟ್ಟಿದ್ದಾರೆ.ಇದರ ಕಾರಣಕ್ಕೆ ನೀವು ಅತ್ಯುತ್ತಮ ಕೆಲಸ ಮಾಡಬೇಕಿದೆ.ಕೂಡಲೇ ನೀಡಿದ ಐದು ಗ್ಯಾರಂಟಿಗಳನ್ನು ತಕ್ಷಣ ಯಾವುದೇ ಷರತ್ತುಗಳು ಹಾಕದೇ ಕೊಟ್ಟ ಮಾತಿನಂತೆ ನಡೆಯಬೇಕು ಎಂದರು.
ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಭರವಸೆಯನ್ನು ಜನತೆ ಹೊಂದಿದ್ದಾರೆ.ಇದೇ ಕಾರಣಕ್ಕೆ ಅಲ್ಲಲ್ಲಿ ಜೆಸ್ಕಾಂ ಬಿಲ್ ಕಲೆಕ್ಟರ್ ಗಳು ಹಾಗೂ ಬಸ್ ಕಂಡಕ್ಟರ್ ಗಳೊಂದಿಗೆ ಗಲಾಟೆಗಳಾಗುತ್ತಿವೆ.ಇದನ್ನು ತಡೆಯಲು ಸಹ ಪ್ರವಾಸ ಅಗತ್ಯವಿದೆ.ರಾಜ್ಯಾದ್ಯಂತ ನೂರಾರು ಸಮಸ್ಯೆಗಳು ಇದ್ದು, ಭ್ರಷ್ಟಾಚಾರ ಮೀತಿ ಮೀರಿದೆ. ಅಧಿಕಾರಿಗಳು ದಲ್ಲಾಳಿಗಳು ಸಿಬ್ಬಂದಿಗಳ ದರ್ಬಾರ್ ನಡೆಸಿದ್ದು ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು.ಜನರಿಗೆ ಕೆಲಸ ಆಗಬೇಕಾಗಿದೆ.ಇದಕ್ಕೆ ದಲ್ಲಾಳಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಶಾಲೆ ಆರಂಭ,ಭಿತ್ತನೆ ಆರಂಭಾಗುವತ್ತಿದೆ, ರೈತರಿಗೆ ಮಕ್ಕಳಿಗೆ ದಾಖಲಾತಿಗಳಿಗಾಗಿ ವಿವಿಧ ಕಛೇರಿಗಳಿಗೆ ಅಲೆಯುವ ಪರಿಸ್ಥಿತಿ ಬಂದಿದೆ. ಈಗಾಗಲೇ ಬಿಸಿಲು ಜಾಸ್ತಿ ಇರುವುದರಿಂದ ಕಛೇರಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ,ನೆರಳು ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿ, ಬಡವರು, ವೃದ್ಧರಿಗೆ ನಾಳೆ ಬಾ ಎಂದು ಹೇಳದೆ ಅವರ ಕೆಲಸಗಳು ಅದೇ ದಿನ ಆಗುವಂತೆ ಕ್ರಮ ಕೈಗೊಳ್ಳಬೇಕು.ಕೂಡಲೇ ಷರತ್ತು ರಹಿತವಾಗಿ ಎಲ್ಲಾ ಗ್ಯಾರಂಟಿಗಳನ್ನು ನೀಡಬೇಕು. ಚುನಾವಣೆಗೂ ಮೊದಲು ಏನು ಭರವಸೆ ನೀಡಲಾಗಿತ್ತೋ ಅದೇ ರೀತಿ ನಡೆದರೆ ನಿಮಗೆ ಜನ ಬೆಂಬಲ ಸಿಗಲಿದೆ.ಇಲ್ಲವಾದಲ್ಲಿ ವಚನ ಭ್ರಷ್ಟತೆ ನಿಮಗೆ ತಗುಲಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.