
ಕಲಬುರಗಿ:ನ.5: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ವೆಚ್ಚವನ್ನು ಭರಿಸಬೇಕೆಂಬ ಆದೇಶವು ಹಿಂಪಡೆಯದಿದ್ದರೆ ರೈತರು ಬೆಳೆದ ಬೆಳೆ ಹಾಗೂ ತರಕಾರಿಗಳು ದರ 10 ಪಟ್ಟು ಹೆಚ್ಚಳ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಆರ್.ಮಾಲಿ ಪಾಟೀಲ ಹೇಳಿದರು.
ನಂತರ ಅವರು ಮಾತನಾಡಿ ರಾಜ್ಯ ಸರ್ಕಾರದ ಇಂಧನ ಇಲಾಖೆಯ ಹೊರಡಿಸಿದ್ದ ಆದೇಶ ರೈತರ ಪಂಪ್ ಸೆಟಗಳಿಗೆ ‘ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ವೆಚ್ಚವನ್ನು ರೈತನೆ ಬರಿಸಬೇಕೆಂಬ ಆದೇಶವು ಕೂಡಲೇ ರಾಜ್ಯ ಸರಕಾರ ಹಿಂದೆ ಪಡೆಯಬೇಕು ಈ ಮುಂಚೆ ಇದ್ದಂತೆ ಮಾಡಬೇಕು. ಈಗಾಗಲೇ ಬರದಿಂದ ರೈತರು ಕಷ್ಟಕ್ಕೆ ಸಿಲುಕಿದ್ದು ಮುಂಗಾರು ಹಾಗೂ ಹಿಂಗಾರು ಕೈ ಕೊಟ್ಟ ಕಾರಣ ಬೆಳೆಗಳಿಗೆ ನೀರಿಲ್ಲ ಅಂತಾಗಿದೆ ಅದಕಾರಣ ರೈತರು ಕೊಳವೆ ಬಾವಿ ಕೊರೆಸುವ ಮುಖಾಂತರ ನೀರನ್ನು ಬೆಳೆಗಳಿಗೆ ನೀಡುವ ಮುಖಾಂತರ ರೈತ ಬದುಕಿದ್ದಾನೆ.
ಇಂತಹ ಸಂದರ್ಭದಲ್ಲಿ, ಸರ್ಕಾರದ ಈ ನೀತಿ ಸರಿಯಲ್ಲ. ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಬೇಕಾದರೆ ಉಚಿತ 200 ಯೂನಿಟ್ ಗ್ಯಾರಂಟಿ ಯೋಜನೆಯನ್ನು ಸರ್ಕಾರ ಕೂಡಲೇ ಹಿಂಪಡೆಯಲಿ, ಮಾನ್ಯ ಮುಖ್ಯಮಂತ್ರಿಗಳಿಗೆ ಕಷ್ಟವಾದರೆ, ರಾಜಿನಾಮೆಯನ್ನು ಕೊಟ್ಟು ಮನೆಗೆ ಹೋಗಬಹುದು. ಕೂಡಲೇ ಆದೇಶವನ್ನು ಹಿಂಪಡೆಯದಿದ್ದರೆ ಮುದ್ದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯ ಮೂಲಕ ಮಾಲಿ ಪಾಟೀಲ ಅವರು ಎಚ್ಚರಿಕೆ ನೀಡಿದ್ದಾರೆ.