ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದಕ್ಕೆ ಹೈಕಮಾಂಡ್ ಮುದ್ರೆ ಹಾಕುತ್ತದೆ 

ಹರಪನಹಳ್ಳಿ.ಆ.4: ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ವರ್ಷದ ಅಮೃತ ಮಹೋತ್ಸವದ ಕಾರ್ಯಕ್ರಮ 2023 ವಿಧಾನಸಭಾ ಚುನಾವಣೆಗೆ ದಿಕ್ಕೂಚಿಯಾಗಲಿದೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮನಾಯ್ಕ ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತದಿಂದ ಬೇಸರಗೊಂಡಿರುವ ಮತದಾರರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ.  ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಹೈಕಮಾಂಡ್ ಮುದ್ರೆ ಹಾಕುತ್ತದೆ ಎಂದರು.ಮೊದಲು ಮಿಸಲಾತಿ ಕೊಡಿಸಲಿ ಸಾರಿಗೆ ಸಚಿವರಾಗಿರುವ ಶ್ರೀರಾಮಲು ಅವರು ವಾಲ್ಮೀಕಿ ನಾಯಕ ಸಮುದಾಯಕ್ಕೆ ಮೊದಲು 7.5ಮೀಸಲಾತಿಯನ್ನು ಕೊಡಿಸಲಿ, ಈ ಹಿಂದೆ ಸಮುದಾಯದ ಜಾತ್ರೆಯ ವೇಳೆ ಹಾಗೂ ಹಲವು ವೇದಿಕೆಗಳಲ್ಲಿ ಮೀಸಲಾತಿ ವಿಚಾರಕ್ಕೆ ನಾನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದರು ಎಲ್ಲಿ ಕೊಟ್ಟು, ಇನ್ನು ಯಡಿಯೂರಪ್ಪನವರು ಸಹ ವಾಲ್ಮೀಕಿ ಜಾತ್ರೆಯಲ್ಲಿ ಸ್ವಾಮಿಜಿಯವರಿಗೆ ನಾನು ಬದುಕಿದ್ದೇನೆ, ಯಾಕೆ ಚಿಂತಿ ಮಾಡುತ್ತೀರಿ ನಾವು ಮೀಸಲಾತಿ ಕೊಡ್ತಿವಿ ಅಂದರು ಎಲ್ಲಿ ಮಾಡಿದ್ರು, ಆದರೆ ಎಲ್ಲಾ ಸಮುದಾಯಕ್ಕೆ ನ್ಯಾಯ ಸಿಗಬೇಕು ಅಂದ್ರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾದ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 7.5ಮೀಸಲಾತಿ ಕೊಡಿಸುವುದಾಗಿ ಹೇಳಿದರು.ಶೋಷಿತರ, ಧಮನೀತರ ಪರವಾಗಿ ಕೆಲಸ ಮಾಡಿದವರು, ರಾಜ್ಯದ ಎರಡನೇ ದೇವರಾಜು ಅರಸು ಆಗಿರುವ, ಭಾಗ್ಯಗಳ ಸರದಾರ ಆಗಿರುವ ಸಿದ್ದರಾಮಯ್ಯನವರ 75ನೇ ವಸಂತಗಳ ನೆನಪಿನಲ್ಲಿ ಅವರ ರಾಜಕೀಯ ಜೀವನದ ಕೊಡುಗೆಗಳನ್ನು ಸ್ಮರಿಸುವುದು ಮತ್ತು ಸಂವಿಧಾನ ಹಾಗೂ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಈ ಅಮೃತ ಮಹೋತ್ಸವ ಸಮಾರಂಭ ಸಾಕ್ಷಿಯಾಗಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯದಿಂದ 10ಲಕ್ಷ ಜನರು ಸೇರುವ ನೀರಿಕ್ಷೆ ಇದೆ ಎಂದರು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಮಾಜಿ ಜಿಪಂ ಸದಸ್ಯ ಹೆಚ್ .ಬಿ.ಪರಶುರಾಮಪ್ಪ ಹೆಚ್.ಕೆ.ಹಾಲೇಶ್, ಪುರಸಭೆ ಸದಸ್ಯರಾದ ಎಂ.ವಿ.ಅAಜಿನಪ್ಪ, ಲಾಟಿ ದಾದಪೀರ, ಉದ್ಧಾರ ಗಣೇಶ್, ಭರತೇಶ್ ಜೋಗಿನ್ನರ, ಮುಖಂಡರಾದ ಮುತ್ತಿಗಿ ಜಂಬಣ್ಣ ಚಿಕ್ಕೇರಿ ಬಸಪ್ಪ, ಎ.ಮೂಸಾಸಾಬ್, ಯುವ ಘಟಕದ ಅಧ್ಯಕ್ಷ ಬಸವರಾಜ ಮತ್ತೂರು, ಬಾಣದ ಅಂಜಿನಪ್ಪ ತೆಲಗಿ ಉಮಾಕಾಂತ, ಟಿ.ಮಂಜುನಾಥ,ಸೇರಿದAತೆ ಇತರರು ಇದ್ದರು.

Attachments area