ಮುಖ್ಯಮಂತ್ರಿ ಮಂತ್ರಿ ರಾಜೀನಾಮೆಗೆ ರಝಾಕ್ ಒತ್ತಾಯ

ಆರೋಗ್ಯ ಇಲಾಖೆ ಹೈದ್ರಾಬಾದ್ ಕರ್ನಾಟಕಕ್ಕೆ ಅನ್ಯಾಯ
ರಾಯಚೂರು.ಜು.೦೪.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಖಾಲಿ ಇರುವ ವೈದ್ಯಾಧಿಕಾರಿ ಹಾಗೂ ಇನ್ನಿತರರು ಹುದ್ದೆಗಳಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗಿದ್ದು ಕೂಡಲೇ ಮುಖ್ಯ ಮಂತ್ರಿಗಳು ಈ ಸಮಸ್ಯೆಯನ್ನು ಸರಿ ಪಡಿಸಿ ರಾಜೀನಾಮೆಯನ್ನು ನೀಡಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಅವರು ಹೇಳಿದರು.
ಅವರಿಂದು ನಗರದ ಅತ್ತನೂರು ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹಿರಿಯ ವೈದ್ಯಾಧಿಕಾರಿ,ತಜ್ಞರು ಸೇರಿದಂತೆ ಇನ್ನಿತರ ಹುದ್ದೆ ಗಳಿಗೆ ರಾಜ್ಯ ಸರ್ಕಾರ ಏ.೩ರಂದು ನೇರ ನೇಮಕಾಂತಿಯನ್ನು ಪ್ರಕಟಣೆ ಮಾಡಲಾಗಿದ್ದು ೯೧೧ ಹುದ್ದೆಗಳಲ್ಲಿ ೧೩೧ ಸ್ಥಳೀಯ ಹುದ್ದೆಗಳಿವೆ.
ತಾತ್ಕಾಲಿಕ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ೧೩೪ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ನಂತರ ಆ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಅವರಿಂದ ಸ್ಥಳೀಯ ವೃಂದಾದಲ್ಲಿ ಸೇರುವಂತೆ ಒತ್ತಡ ಹಾಕುತ್ತಿದ್ದಾರೆ.
ಅದರಲ್ಲಿ ೫೫ ಜನ ಅಭ್ಯರ್ಥಿಗಳನ್ನು ಸ್ಥಳೀಯ ವೃಂದ ಸೇರಲು ಒಪ್ಪಿಗೆ ಪತ್ರವನ್ನು ನೀಡಿರುತ್ತಾರೆ. ಇದರಿಂದ ಸ್ಥಳೀಯ ವೃಂದದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದಂತ ೫೫ ಅಭ್ಯರ್ಥಿಗಳನ್ನು ಅಂತಿಮ ಆಯ್ಕೆ ಪಟ್ಟಿಯಿಂದ ತೆಗೆದಿದ್ದಾರೆ ಇದರಿಂದ ಕಲ್ಯಾಣ ಕರ್ನಾಟಕದ ೩೭೧ ಜೆ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು ತಿಳಿದು ಬಂದಿದೆ.
ಈ ಬಗ್ಗೆ ಈಗಾಗಲೇ ಕೋರ್ಟ್ ಮೊರೆ ಹೊಗಿದ್ದು ಜೂ.೧೦ರಂದು ವಿಚಾರಣೆ.ಹಿರಿಯ ವೈದ್ಯಾದಿಕಾರಿ, ವೈದ್ಯರು, ತಜ್ಞರು , ಸೇರಿದಂತೆ ಅನೇಕ ಹುದ್ದೆಗಳಿಗೆ ಅರ್ಜಿ ಕರೆದಿದ್ದು,೧೩೧ ಸ್ಥಳಿಯ ವೃಂದ ಹಾಗೂ ೯೧೧ಉಳಿದ ವೃಂದಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಮಾಡಿ ಅಂತಿಮ ಪಟ್ಟಿ ಪ್ರಕಟ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ೧೪೩ ಅಭ್ಯರ್ಥಿಗಳು ಮಿಕ್ಕುಳಿದ ವೃಂದಗಳಿಗೆ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಮೀಸಲಾತಿ ನಿಯಮಗಳನ್ನು ಹಾಗೂ ಸುತ್ತೋಲೆಗಳನ್ನು ಅನುಸರಿಸಿ,ನಡೆಸಬೇಕು, ಸ್ಥಳಿಯ ಮತ್ತು ಮಿಕ್ಕುಳಿದ ವೃಂದಗಳಿಗೆ ಏಕ ಕಾಲಕ್ಕೆ ಒಂದೇ ಅದಿಸೂಚನೆ ಯಲ್ಲಿ ಒಂದೇ ಇಲಾಖೆಯಲ್ಲಿ ನೇಮಕಾತಿ ಮಾಡಬೇಕಾದ ಸಂದರ್ಭದಲ್ಲಿ ಒಂದೇ ಅರ್ಜಿ ಆಹ್ವಾನಿಸಬೇಕು ಎಂದು ಸೂಚಿಸಲಾಗಿದೆ.
ಆದರೆ ಕಲ್ಯಾಣ ಕರ್ನಾಟಕ ಭಾಗದವರು ಯಾವ ವೃಂದಗಳಿಗೆ ಸೇರಬಯಸುತ್ತೀರಾ ಎಂದು ಆಯ್ಕೆಯಲ್ಲಿ ಕೇಳಬಹುದಿತ್ತು,ಆಯ್ಕೆಯನ್ನು ಬದಲಾವಣೆ ಮಾಡಲು ಅವಕಾಶ ಇಲ್ಲ, ತಾತ್ಕಾಲಿಕವಾಗಿ ಆಯ್ಕೆ ಪಟ್ಟಿ ಪ್ರಕಟಿಸುವಾಗ ಮೆರಿಟ್ ಮತ್ತು ವೃಂದವನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಮಾಡಬೇಕು ಎಂದರು.
ಮೇ ೧೨, ರಂದು ಅಂತಿಮ ಆಯ್ಕೆ ಪಟ್ಟಿಯಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ, ತಾತ್ಕಾಲಿಕ ಹಾಗೂ ಮಿಕ್ಕುಳಿದ ವೃಂದದಲ್ಲಿ ಆಯ್ಕೆಯಾದ ಕಲ್ಯಾಣ ಕರ್ನಾಟಕದ ಅಭ್ಯರ್ಥಿ ಗಳನ್ನು ಸ್ಥಳೀಯ ವೃಂದದ ಅಂತಿಮ ಪಟ್ಟಿಯಲ್ಲಿ ಪರಿಗಣಿಸಿ ನಿಯಮಗಳನ್ನು ಉಲ್ಲಂಘನೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನ್ಯಾಯವಾಗಿದೆ.ಅಂತಿಮ ಆಯ್ಕೆ ಪಟ್ಟಿಯಲ್ಲಿ ಗೊಂದಲ ನಿವಾರಿಸಿ, ಕಲ್ಯಾಣ ಕರ್ನಾಟಕ ಪ್ರದೇಶದ ಮೀಸಲಾತಿ ಕೋರಿ ಮೆರಿಟ್ ಹೊಂದಿದ ಮತ್ತು ಮೂಲ ಅರ್ಜಿಯಲ್ಲಿ ನಮೂದಿಸಿದ ಆಯ್ಕೆಯಂತೆ ಮಿಕ್ಕುಳಿದ ವೃಂದದ ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಿ ಅಂತಿಮ ಪಟ್ಟಿಯನ್ನು ಪುನರ್ ಪರಿಶೀಲನೆ ಮಾಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸಿಕೊಡಬೇಕು
ಈ ವಿಷಯದ ಬಗ್ಗೆ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ.
ಮುಖ್ಯ ಮಂತ್ರಿಗಳಿಗೆ ವಯಸ್ಸು ಆಗಿರುವುದರಿಂದ ಈ ಅನ್ಯಾಯ ತಿಳಿಯುತ್ತಿಲ್ಲ ಅವರಿಗೆ ಬುದ್ದಿ ಬ್ರಮೆಯಾಗಿದೆ. ಮನವಿಗೆ ಸ್ಪಂದನೆ ಮಾಡುತ್ತಿಲ್ಲ ಅದರಿಂದ ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ರಾಜಿನಾಮೆ ನೀಡಿ ಎಂದು ಒತ್ತಯಿಸಿದರು.
ಈ ಸಂದರ್ಭದಲ್ಲಿ ವೀರೇಶ ಹೀರಾ, ಮಹಮ್ಮದ್ ರಫಿ, ಶಿವಕುಮಾರ್ ಯಾದವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.