ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಬ್ಬರು ಒಂದೇ:ಯತ್ನಾಳ

ಕಲಬುರಗಿ,ಏ.5:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಬ್ಬರು ಒಂದೇ ಆಗಿದ್ದಾರೆ. ಸಿಎಂ ಪುತ್ರ ವಿಜಯೇಂದ್ರ ಅವರು ಡಿಕೆಶಿ ಏಜೆಂಟ್‍ರÀಂತೆ ಮತ್ತು ಡಿಕೆಶಿ ಯಡಿಯೂರಪ್ಪನವರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇದೆಲ್ಲವು ನೋಡಿದಾಗ ಅವರಿಬ್ಬರು ಶಾಮೀಲಾಗಿರುವಂತಿದೆ ಎಂದು ಕೇಂದ್ರದ ಮಾಜಿ ಸಚಿವರಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗಂಭೀರವಾಗಿ ಆರೋಪಿಸಿದರು.
ದೀಕ್ಷ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕೂಡಲಸಂಗಮ ಪಂಚಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀನಿ ಸನ್ನಿಧಾನದಲ್ಲಿ ನಡೆಸಿದ್ದ ಪಾದಯಾತ್ರೆಗೆ ಸ್ಪಂದಿಸಿ ತಜ್ಞರ ಸಮಿತಿಯನ್ನು ರಚಿಸಿದ್ದರಿಂದ ಜನರಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯಾದ್ಯಂತ ನಡೆಸುತ್ತಿರುವ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು ಪತ್ರಕರ್ತರ ಜತೆಗೆ ಮಾತನಾಡಿ, ಸುಮ್ಮನೆ ಅವರು ಪರಸ್ಪರ ಆರೋಪ ಮಾಡಿದಂತೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರೇ ಒಂದಾಗಿ ನನ್ನನ್ನು ಕಾಂಗ್ರೆಸ್ ಏಜೆಂಟ್ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಅದು ಬಿ.ಎಸ್.ಯಡಿಯುರಪ್ಪನವರ ಕುಟುಂಬದ ಸರ್ಕಾರವಾಗಿದೆ. ಜನಪರ ಕಾಳಜಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂದ ಸರ್ಕಾರ ಇಲ್ಲಿಲ್ಲ. ಬಿಜೆಪಿ ಸರ್ಕಾರಗಳು ರಚನೆಗೊಂಡಿದ್ದ ಪರಿವಾರವಾದ ವಿರುದ್ಧವಾಗಿ ಬಂದಿದೆ. ಲಾಲು ಪ್ರಸಾದ ಯತ್ನಾಳ, ದೇವೇಗೌಡ, ಕರುಣಾನಧಿ ಇನ್ನಿತರ ಕುಟುಂಬಹಳ ಬಗ್ಗೆ ನಾವು ಮಾತನಾಡುತ್ತಿz್ದÉೀವು. ಈಗ ಕರ್ನಾಟಕ ಸರ್ಕಾರದಲ್ಲಿ ಏನು ನಡೆದಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವಂತಿದೆ. ಬಿಜೆಪಿ ಆಶಯಗಳಿಗೆ ತಣ್ಣೀರು ಹಾಕಿದೆ. ಇದು ಅಪ್ಪ ಮಕ್ಕಳ ಸರ್ಕಾರವಾಗಿದೆ. ಸರ್ಕಾರದಲ್ಲಿ ಕುಟುಂಬಸ್ಥರ ಹಾವಳಿ ಹೆಚ್ಚಿದೆ. ಅಪ್ಪ ಮಕ್ಕಳ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಯತ್ನಾಳ ಆರೋಪಿಸಿದರು.
ಸಿಡಿ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಬಂಧಿಸಿದ ನಂತರ ಇನ್ನಷ್ಟು ಸಿಡಿಗಳು ಬಯಲಿಗೆ ಬರಲಿವರ ಎಂದು ಯತ್ನಾಳ ಅವರು ಇನ್ನೊಂದು ಸಿಡಿಮದ್ದು ಸಿಡಿಸಿದರು. ಇನ್ನೂ ಯ್ಯಾರ್ಯಾರ ಸಿಡಿಗಳಿವೆ ಎಂಬುದು ಅವರೊಬ್ಬರಿಗೆ ಗೊತ್ತಿದೆ. ಹೀಗಾಗಿ ಪೆÇಲೀಸರು ಬಂಧಿಸಿದಾಗ ವಿಚಾರÀಣೆಯಲ್ಲಿ ಎಲ್ಲ ಬಹಿರಂಗಗೊಳ್ಳಲಿವೆ. ಹೀಗಾಗಿ ಅವರನ್ನು ಬಂಧಿಸಲಿ ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ಎಲ್ಲ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡುತ್ತಿದ್ದರು. ಆದರೆ, ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ಇಲಾಖೆಯಲ್ಲಿ ಕೈ ಹಾಕಿ ಕಮೀಷನ್ ತೆಗೆದುಕೊಂಡು ತಮಗೆ ಬೇಕಾದವರಿಗೆ ಹಣ ನೀಡುತ್ತಿದ್ದಾರೆ ಎಂದು ಯತ್ನಾಳ ಅರೋಪಿಸಿದರು.

ಫೆಡರಲ್ ಬ್ಯಾಂಕ್ ಹಗರಣ ಕುರಿತು ಸಮಗ್ರ
ತನಿಖೆ ಆದ್ರೆ ವಿಜಯೇಂದ್ರ ಡಿಕೆಶಿ ಬಣ್ಣ ಬಯಲು
ಲಕ್ಷ್ಮೀ ವಿಲಾಸ ಬ್ಯಾಂಕ್‍ನ್ನು ಫೆಡರಲ್ ಬ್ಯಾಂಕ್‍ನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಕಾಲಕ್ಕೆ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಸೇರಿದ ಕೋಟ್ಯಾಂತರ ರೂಪಾಯಿ ವಿದೇಶಗಳಿಗೆ ವರ್ಗಾವಣೆಗೊಂಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು.
ಕೇಂದ್ರ ಸರ್ಕಾರ ಈ ಕುರಿತು ಸಮಗ್ರ ತನಿಖೆ ನಡೆಸುವ ಮೂಲಕ ಎಲ್ಲ ಅಕ್ರಮಗಳನ್ನು ಬಯಲಿಗೆ ತರಬೇಕು. ಆಗ ಸಿಎಂ ಯಡಿಯೂರಪ್ಪನವರ ಮತ್ತು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ, ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರ ಅಸಲಿ ಬಣ್ಣ ಬಯಲಿಗೆ ಬರುತ್ತದೆ ಎಂದು ಹೇಳಿದರು. ಈ ಕುರಿತು ತನಿಖೆ ನಡೆಸುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆಯುವೆ ಎಂದರು.