ಮುಖ್ಯಮಂತ್ರಿ ಪದಕ ಪಡೆದ ಪಿಎಸ್‌ಐ

ಲಿಂಗಸುಗೂರು.ಏ.೦೩-ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಠಾಣೆಯ ಸಿಂಗಂ ಎಂದು ಹೆಸರುವಾಗಿರು ವ.ಜನಸಾಮಾನ್ಯೆರಿಗೆ ಸಾಮಾಜಿಕ ನ್ಯಾಯ ಕೊಡಿಸುವ ದಕ್ಷ ಪೊಲೀಸ್ ಅಧಿಕಾರಿ ಪೊಲೀಸ್ ಅಧಿಕಾರಿ ಪಿಎಸ್‌ಐ ಪ್ರಕಾಶ್ ಡಂಬಳರವರ ಸರಳತೆಗೆ ಸಂದ ಗೌರವ ಪ್ರಶಸ್ತಿ ಸಿಕ್ಕಿರುವುದು ನಮ್ಮ ತಾಲೂಕಿನ ಸೌಭಾಗ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪಿಎಸ್‌ಐ ಪ್ರಕಾಶ್ ಡಂಬಳ ಮೆಕಾನಿಕಲ್ ಪದವಿ ದಾರರು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಪದಕ ಪಡೆದು. ಸ್ವಿಕರಿಸಿದ ಅವರು ಮಾತನಾಡಿ ಸಮಾಜದಲ್ಲಿ ನಡೆಯುತ್ತಿರುವ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಾಮಾಜಿಕ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಆದೇಶವನ್ನು ಪಾಲಿಸಿ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಎತ್ತಿ ಹಿಡಿದು ಅಧಿಕಾರಿಗಳ ಗೌರವಕ್ಕೆ ಪಾತ್ರನಾಗುತ್ತೆನೆ ಮತ್ತು ಲಿಂಗಸುಗೂರು ಪೋಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಮುಖ್ಯಮಂತ್ರಿ ಪದಕ ಪಡೆಯಲು ಸಹಕಾರಿಯಾಗಿದೆ. ಮುಖ್ಯಮಂತ್ರಿ ಪದಕ ಪಡೆದ ಪಿಎಸ್‌ಐ ಪ್ರಕಾಶ್ ಡಂಬಳ ಲಬಿಸಿದಕ್ಕೆ ಠಾಣೆಯ ಸಿಬ್ಬಂದಿಗಳು ಸೇರಿದಂತೆ ತಾಲೂಕಿನ ಪ್ರಜ್ಞಾವಂತ ನಾಗರಿಕರು. ಹರ್ಷ ವ್ಯಕ್ತ ಪಡಿಸಿದರು.