ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಗ್ರಾಮ ಸಭೆ


ಮುದಗಲ್.ನ.೩- ಜಿಲ್ಲಾ ಪಂಚಾಯತ ರಾಯಚೂರು ತಾಲೂಕ ಪಂಚಾಯತ ಲಿಂಗಸುಗೂರು ಗ್ರಾಮ ಪಂಚಾಯತ ಹೂನೂರು ವತಿಯಿಂದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಮರಳಿ ಗ್ರಾಮದ ಸಮಗ್ರ ಗ್ರಾಮಾಭಿವೃದ್ದಿ ಯೋಜನೆ ತಯಾರಿ ಮಾಡುವ ಕುರಿತು ಸೋಮುವಾರ ಗ್ರಾಮ ಸಭೆ ಮಾಡಲಾಗಿತು.
ಸಭೆಯ ಕುರಿತು ಸಿಂಧನೂರು ಸಂಪನ್ಮೂಲ ವ್ಯಕ್ತಿ ಲಾರೆನ್ಸ್ ಟಿ ಮಾತನಾಡಿ ಗ್ರಾಮ ಅಭಿವೃದ್ದಿಗಾಗಿ ಒಂದು ಕೋಟಿ ರೂ ಮೊತ್ತದಲ್ಲಿ ೫೦ ಲಕ್ಷ ರೂ ಸಿ ಸಿ ರಸ್ತೆ ಮತ್ತು ಚರಂಡಿ ೧೨ ಲಕ್ಷ ರೂ ಮೊತ್ತದ ಬಯಲು ರಂಗಮಂದಿರ .೧೨ ಲಕ್ಷ ರೂ ಮೊತ್ತದ ಗರಡಿಮನೆ .೩ ಲಕ್ಷ ರೂ ಮೊತ್ತದ ಸೋಲಾರ್ ವಿದ್ಯುತ್ ಅಳವಡಿಕೆ. ೧೦ ಲಕ್ಷ ರೂ ಮೊತ್ತದ ತಿಪ್ಪೆ ಗುಂಡಿ ಸಂಸ್ಕರಣ ಘಟಕ ನಿರ್ಮಾಣ ೨ ಲಕ್ಷ ರೂ ಮೊತ್ತದ ಗ್ರಾಮ ಸಭೆಯ ಬಗ್ಗೆ ವರದಿ ಪ್ರಸಾರ್ ಮಾಡಲು ೬ ಲಕ್ಷ ರೂ ಮೊತ್ತ ದೇವಸ್ಥಾನ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿ ಮಾಡಬಹುದು ಎಂದು ಮರಳಿ ಗ್ರಾಮದ ಜನರಿಗೆ ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ಈಶ್ವರಪ್ಪ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ ಅಧಿಕಾರಿ ರಮೇಶ ಸಂಪನ್ಮೂಲ ವ್ಯಕ್ತಿಗಳಾದ ವಿನಯಕುಮಾರ ಮರಿಸ್ವಾಮಿ ಸಿದ್ದಲಿಂಗಪ್ಪಗೌಡ ಬಸವರಾಜ ಮರಳಿ ಸಿದ್ದಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು