ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಪದಗ್ರಹಣ: ಕಾಂಗ್ರೇಸ್ ಮುಖಂಡರಿಂದ ವಿಜಯೋತ್ಸವ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮೆ21. ನಿನ್ನೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಹಾಗು 8ಜನ ಹಿರಿಯ ಶಾಸಕರು ಸಂಪುಟದರ್ಜೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಸಿರಿಗೇರಿ ಮತ್ತು ಹೋಬಳಿಯ ಇತರೆ ಗ್ರಾಮಗಳಲ್ಲಿ ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು, ಕಾಂಗ್ರೇಸ್ ಬೆಂಬಲಿತ ಗ್ರಾಮ ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರು ಪಟಾಕಿ ಸಿಡಿಸಿ ಸಂಬ್ರಮ ಆಚರಿಸಿದರು. ಸಿರಿಗೇರಿಯ ಮುಖ್ಯವೃತ್ತದಲ್ಲಿ ನಿನ್ನೆ ಮದ್ಯಾಹ್ನ ಕಾಂಗ್ರೇಸ್ ಮುಖಂಡರು 3 ಸುತ್ತಿನಲ್ಲಿ ಪಟಾಕಿ ಸಿಡಿಸಿ ಸಿದ್ದರಾಮಯ್ಯ, ಡಿಕೆಸಿ, ಮತ್ತು ಕಾಂಗ್ರೇಸ್ ಪಕ್ಷದ ಪರವಾಗಿ ಜಯಕಾರ ಕೂಗಿದರು. ಇದೇವೇಳೆ ಪಕ್ಷದ ತೆಕ್ಕಲಕೋಟೆ ಬ್ಲಾಕ್ ಕಾಂಗ್ರೇಸ್ ಘಟಕದ ಉಪಾಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಅಭೂತಪೂರ್ವ ಜಯದೊಂದಿಗೆ ಅಧಿಕಾರ ಹಿಡಿದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೇಸ್ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದಾರೆ. ಅದೇರೀತಿ ಸಿರುಗುಪ್ಪ ಶಾಸಕರಾದ ಬಿ.ಎಂ.ನಾಗರಾಜ ರವರು ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಅಧಿಕಾರ ಇಲ್ಲದಾಗಲೂ ಶ್ರಮಿಸಿ ಜನಮೆಚ್ಚಿನ ನಾಯಕರಾಗಿ 2ನೇ ಸಲಕ್ಕೆ ಶಾಸಕರಾಗಿದ್ದಾರೆ. ಅವರ ಪಕ್ಷನಿಷ್ಟೆಯನ್ನು ಗುರುತಿಸಿ ಮಂತ್ರಿ ಸ್ಥಾನ ನೀಡಬೇಕೆಂದು ಬ್ಲಾಕ್ ಕಾಂಗ್ರೇಸ್ ಘಟಕವತಿಯಿಂದ ಒತ್ತಾಯಿಸಿದರು. ಸಿ.ಎಂ.ನಾಗರಾಜಸ್ವಾಮಿ, ಬಿ.ಸೋಮಶೇಖರಪ್ಪ, ಎಸ್.ಎಂ.ಅಡಿವೆಯ್ಯಸ್ವಾಮಿ, ಇವರು ಮಾತನಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯದದ್ಯಂತ ಜನರು ಒಗ್ಗಟ್ಟಾಗಿದ್ದಾರೆ. ಅದೇರೀತಿ ಗ್ರಾಮೀಣ ಭಾಗದಲ್ಲಿ ನಾವು ಪಕ್ಷನಿಷ್ಟೆಯಿಂದ ಒಗ್ಗಟ್ಟಾಗಿ ಮುಂದಿನ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅಧಿಕಾರ ಹಿಡಿಯಲು ಶ್ರಮಿಸಬೇಕೆಂದು ಕರೆನೀಡಿದರು. ಹಿರಿಯ ಮುಖಂಡರಾದ ಕೆ.ಗರ್ಜಿಲಿಂಗಪ್ಪ, ಬಿ.ನಾಗೇಂದ್ರಪ್ಪ, ಮಾಜಿ ತಾ.ಪಂ.ಸದಸ್ಯ ವಿ.ರೇಣುಕಪ್ಪ,  ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಹಳ್ಳೀಮರದ ಸೋಮೇಶ, ಬಿ.ಮಲ್ಲಯ್ಯ, ಕರಿಬಸಪ್ಪ, ಎನ್.ಕುಮಾರ, ಲಿಂಗನಗೌಡ, ಹಳ್ಳಿಮರದ ರುದ್ರಪ್ಪ, ಶಿವಪ್ಪ, ಎಂ.ದಾನಪ್ಪ, ಸಲೀಮ್, ಅಂಜಿನಪ್ಪ, ಎಚ್.ತಿಮ್ಮಯ್ಯ, ಜಿ.ಅಂಶಪ್ಪ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

One attachment • Scanned by Gmail