ಮುಖ್ಯಮಂತ್ರಿ ಆಗಮನ ಬೃಹತ್ ವೇದಿಕೆ ಸಿದ್ದ

ಮಸ್ಕಿ,ಮಾ.೨೦- ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಮತ್ತು ಸಚಿವರ ದಂಡು ಮಸ್ಕಿ ಪಟ್ಟಣಕ್ಕೆ ಇಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಠಾಣೆ ಬಳಿಯ ಮೈದಾನದಲ್ಲಿ ಬ್ರಹತ್ ವೇದಿಕೆ ಸಿದ್ದ ಗೊಳಿಸಲಾಗಿದೆ ವಿಧಾನ ಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ಸರಕಾರಿ ಕಾರ್ಯಕ್ರಮಗಳನ್ನು ರದ್ದು ಪಡಿಸಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಮ್ಮಿ ಕೊಳ್ಳಲಾಗಿದೆ.
ಶನಿವಾರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ವಿರುಪಾಕ್ಷಪ್ಪ ಅವರ ಬೆಂಬಲಿಗರು ಬಿಜೆಪಿ ಸೇರ್ಪಡೆ ಯಾಗಲಿದ್ದಾರೆ ಸಮಾವೇಶದಲ್ಲಿ ಬಿವೈ. ವಿಜಯೇಂದ್ರ ಆಗಮಿಸುತ್ತಿರುವ ಕಾರಣ ಸಮಾವೇಶ ಕಳೆ ಕಟ್ಟಲಿದೆ. ವೇದಿಕೆ ಮುಂಭಾಗದಲ್ಲಿ ಸಾವಿರಾರು ಆಸನ ಗಳ ವ್ಯವಸ್ಥೆ ಮಾಡಲಾಗಿದೆ ಕೋವಿಡ್ ಕಾಟದ ಹಿನ್ನೆಲೆಯಲ್ಲಿ ಸಮಾವೇಶದಲ್ಲಿ ಕೋವಿಡ್ ನಿಯಮ ಪಾಲಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾವಹಿಸಲು ಸಜ್ಜಾಗಿದ್ದಾರೆ. ಸಮಾವೇಶಕ್ಕೆ ಯಾವದೇ ಅಡ್ಡಿ ಆತಂಕಗಳು ಎದುರಾಗ ದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ ಬ್ರಹತ್ ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಉಪಚುನಾವಣೆ ರಣ ಕಹಳೆ ಮೊಳಗಿಸಲಿದ್ದಾರೆ ಪಟ್ಟಣಕ್ಕೆ ಸಿಎಂ. ಯಡಿಯೂರಪ್ಪ ಅಗಮಿಸಿ ತಮ್ಮ ಪರಚುನಾವಣೆ ಪ್ರಚಾರ ಮಾಡಲಿರುವ ಕಾರಣ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಭಾರಿ ಉಮೇದಿಯಲ್ಲಿದ್ದಾರೆ.