ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಮಣ್ಣೂರಿನಲ್ಲಿ ವಿಜಯೋತ್ಸವ

ಕರಜಗಿ :ಮೇ.22:ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಬಸ್ ನಿಲ್ದಾಣದ ಆವರಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಕರೂಟಿ ಸಿದ್ರಾಮಪ್ಪ ಹಿರೇಕುರುಬರ ಹಾಜಿಮಲಂಗ ಮುತವಲಿ ಸಿದ್ದಪ್ಪ ಹತ್ತರಕಿ ಮಾಳಪ್ಪ ಪೂಜಾರಿ ವಿವೇಕಾನಂದ ಕೋಗಟನೂರ ಬಸವರಾಜ ವಾಯಿ ಯಶ್ವಂತ ಕರೂಟಿ ವೇಣುಮಾಧವ ಅವಧಾನಿ ಮಹಾಂತೇಶ ಕರೂಟಿ ಸಂತೋಷ ಅಲ್ಲಾಪೂರ ಬಸವರಾಜ ಅಳ್ಳಗಿ ಮಹಿಬೂಬ ಗೌರ ರಾಜಶೇಖರ ಪ್ಯಾಟಿ ಶ್ರೀಕಾಂತ ನಿವರಗಿ ಶೇಖರ ಶೆಟ್ಟಿ ಶ್ರೀಕಾಂತ ಮುಜಗೊಂಡ ಮಲ್ಲಪ್ಪ ಹಿಟ್ಟಿನ ನಾಗಪ್ಪ ಭಾಸಗಿ
ಅಸ್ಪಾಕ ರುಕ್ಮೋದ್ದಿನ ಜಿಬ್ರಾಯಿಲ್ ಗೌರ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರಿದ್ದರು