ಮುಖ್ಯಮಂತ್ರಿಗಳ ಪ್ರವಾಸ

ಕಲಬುರಗಿ,ಜ.16: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ವಿಶೇಷ‌ ವಿಮಾನದ‌ ಮೂಲಕ ಜನವರಿ 19 ರಂದು ಬೆಳಿಗ್ಗೆ 9.40 ಗಂಟೆಗೆ‌ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.

ರಾಜ್ಯ‌ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಅವರನ್ನು ಕಲಬುರಗಿ ವಿಮಾನ‌ ನಿಲ್ದಾಣದಲ್ಲಿ ಬರಮಾಡಿಕೊಂಡು ಅಲ್ಲಿಂದ ಪ್ರಧಾನಮಂತ್ರಿಗಳೊಂದಿಗೆ ಬೆಳಿಗ್ಗೆ 11.05 ಗಂಟೆಗೆ ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್‌ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯಾಣಿಸುವರು.

ಕೊಡೇಕಲ್ ಕಾರ್ಯಕ್ರಮ ಮುಗಿಸಿ ಮರಳಿ‌ ಮಧ್ಯಾಹ್ನ 2 ಗಂಟೆಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಹೆಲಿಪ್ಯಾಡಿಗೆ ಪ್ರಧಾನಿಯೊಂದಿಗೆ ಆಗಮಿಸುವ ಮುಖ್ಯಮಂತ್ರಿಗಳು, ಗ್ರಾಮದಲ್ಲಿ ಆಯೋಜಿಸಿರುವ ಕಲಬುರಗಿ ಸೇರಿ ಐದು ಜಿಲ್ಲೆಗಳ ತಾಂಡಾ‌ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ನಂತರ ಅಲ್ಲಿಂದ‌ ಹೆಲಿಕಾಪ್ಟರ್ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ತೆರಳಿ, ಮುಂಬೈಗೆ ಪ್ರಯಾಣಿಸುವ ಪ್ರಧಾನಮಂತ್ರಿಗಳನ್ನು ಬೀಳ್ಕೊಟ್ಟು ಸಂಜೆ 4.30 ಗಂಟೆಗೆ ಅಲ್ಲಿಂದಲೆ ವಿಶೇಷ‌ ವಿಮಾನದ‌ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.