ಮುಖ್ಯಮಂತ್ರಿಗಳು ಗಬ್ಬೂರು ಹೊಸ ಡೀಪೋ ಕಾಮಗಾರಿ ಪ್ರಾರಂಭಕ್ಕೆ ಮುಂದಾಗಬೇಕು : ಅಯ್ಯಪ್ಪಗೌಡ ಒತ್ತಾಯ

ಗಬ್ಬೂರು.ಜು.೧೭- ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಸರ್ವೆ ನಂಬರ್ ೩೧೫ ಹಿಸ್ಸಾ ೩ ರಲ್ಲಿ ೦೪. ಎಕರೆ ಜಮೀನು ವ್ಯವಸ್ಥಾಪಕ ನಿರ್ದೇಶಕರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಂಸ್ಥೆ ಕೇಂದ್ರ ಕಛೇರಿ ಗುಲ್ಬರ್ಗ ಇವರ ಪರವಾಗಿ ಪ್ರತಿನಿಧಿ ಟಿ.ಮುನಿಯಪ್ಪ ವಿಭಾಗ ನಿಯಂತ್ರಣಧಿಕಾರಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ಇವರ ಹೆಸರಿಗೆ ದಿನಾಂಕ ೨೯/೧೦/೨೦೧೦ ರಲ್ಲಿ ಮಂಜೂರಿಯಾದರೂ ಇದುವರೆಗೂ ಬಸ್ ಡೀಪೋ ಕಾಮಗಾರಿ ಪ್ರಾರಂಭಗೊಂಡಿಲ್ಲ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲೆಯ ಜಿಲ್ಲಾ ಉಸ್ತುವಾರಿಗಳು ಅಯ್ಯಪ್ಪಗೌಡ ಗಬ್ಬೂರು ಮಾನ್ಯ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ಯವರೆಗೆ ಒತ್ತಾಯಿಸಿದ್ದರೆ.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಅಭಿವೃದ್ಧಿ ಮಾಡಲು ಮುಂದಾಗುತ್ತಿಲ್ಲ ಹಲವಾರು ಬಾರಿ ಮೌಖಿಕವಾಗಿ ಪತ್ರಿಕೆ ಪ್ರಕಟಣೆಯ ಮೂಲಕ ಧ್ವನಿ ಎತ್ತಿದರೂ ಸಹಿತ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲಾದಂತೆ ಕಾಣಿಸುತ್ತದೆ ಎಂದರು.
ಒಂದು ಹೊಸ ಡಿಪೋ ಮಾಡಲು ೧೧ ವರ್ಷಗಳು ಗತಿಸಿದರೂ ಬಸ್ ಡಿಪೋ ಕಾಮಗಾರಿ ಪ್ರಾರಂಭಿಸಿಲ್ಲ ಇನ್ನಾದರೂ ಸರ್ಕಾರ ಎಚ್ಚುತ್ತೆಕೊಂಡು ಗಬ್ಬೂರು ಹೊಸ ಡಿಪೋ ಕಾಮಗಾರಿ ಪ್ರಾರಂಭಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಶೀಘ್ರದಲ್ಲೇ ಗೌರವಾನ್ವಿತ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿಯವರು ಗಬ್ಬೂರು ಗ್ರಾಮಕ್ಕೆ ಆಗಮಿಸಿ ಈ ಭಾಗದ ಸಾರ್ವಜನಿಕರ ಹಿತ ದೃಷ್ಟಿಯಿಂದ ಕಟ್ಟಡ ಕಾಮಗಾರಿ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು. ಒಂದು ತಿಂಗಳೊಳಗೆ ಕಟ್ಟಡ ಕಾಮಗಾರಿ ಪ್ರಾರಂಭಿಸಿದಿದ್ದರೆ ಗಬ್ಬೂರು ಹೋಬಳಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲು ಸಿದ್ದರಿದ್ದೇವೆ ಎಂದು ಸರ್ಕಾರಕ್ಕೆ ಅಯ್ಯಪ್ಪಗೌಡ ಗಬ್ಬೂರು ಒತ್ತಾಯಿಸಿದ್ದರೆ.