ಮುಖ್ಯಮಂತ್ರಿಗಳಿಂದ ಜನಪರವಾದ ಬಜೆಟ್ : ಮಹಾಂತಪ್ಪ ಸಂಗಾವಿ

ಸೇಡಂ , ಜು , 11 : ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರು ಮಾಡಿದ್ದಾರೆ. 14ನೇ ಬಜೆಟ್ಮಾನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಅಭಿವೃದ್ಧಿಗೊಳಿಸುವುದರ ಜೊತೆಗೆ ಜನಪರವಾದ ಬಜೆಟ್ ಮಂಡಿಸಿದ್ದಾರೆ ಎಂದು ಕೆಪಿಸಿಸಿಯ ರಾಜ್ಯ ಸದಸ್ಯರು ಹಾಗೂ ಕಲಬುರಗಿಯ ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಅವರು ಮುಖ್ಯಮಂತ್ರಿಗಳಿಗೆ ಹಾಗೂ ಉಪಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೊರಟಿಸಿರುವ ಅವರು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿ ಜಿಲ್ಲೆಗಳು ಅಭಿವೃದ್ಧಿಗೊಳಿಸುವುದಕ್ಕೆ ಮಹತ್ವ ನೀಡಿದ್ದಾರೆ. ರಾಯಚೂರು ಜಿಲ್ಲಾ ಉಸ್ತುವಾರಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಹಾಗೂ ಕಲಬುರಗಿ ಉಸ್ತುವಾರಿಯ ಗ್ರಾಮೀಣಾಭಿವೃದ್ಧಿ ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಜೀ ಜಿಲ್ಲೆಗೆ ಪ್ರತ್ಯೇಕ, ತಾಯಿ ಮಗು ಆಸ್ಪತ್ರೆ , ಜಿಲ್ಲೆಯಲ್ಲಿ ಬರುವಂತಹ ಐತಿಹಾಸಿಕ ಸಾರುವ ಮಳಖೇಡ ಕೋಟೆ, ಹಾಗೂ ವಿವಿಧ ಕೋಟೆಗಳ ಅಭಿವೃದ್ಧಿಗೆ, ಮತ್ತು ಸನ್ನತಿ ಅಭಿವೃದ್ಧಿಗೆ ಅನುದಾನ ತಂದಿರುವಂತಹ ಎರಡು ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.